ಇಡಿ ತನಿಖೆಗೆ ನನ್ನ ಸಹೋದರ ಡಿ.ಕೆ ಸುರೇಶ್ ಸಹಕಾರ ಕೊಡ್ತಾರೆ: ಡಿಕೆಶಿ

Public TV
1 Min Read

ಬೆಂಗಳೂರು: ಐಶ್ವರ್ಯ ಗೌಡ ಕೇಸ್‌ನಲ್ಲಿ ಇಡಿ (Directorate of Enforcement) ಕೊಟ್ಟಿರೋ ನೋಟಿಸ್‌ಗೆ ನನ್ನ ತಮ್ಮ ಡಿ.ಕೆ ಸುರೇಶ್ (D.K Suresh) ಸಹಕಾರ ಕೊಡಲಿದ್ದಾರೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar) ತಿಳಿಸಿದ್ದಾರೆ.

ಡಿ.ಕೆ ಸುರೇಶ್‌ ಅವರಿಗೆ ಇಡಿ ನೋಟಿಸ್ ನೀಡಿರುವ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಮ್ಮ ಸಹೋದರ ಇರಲಿಲ್ಲ. ಅಂಟಿಸಿ ಹೋಗ್ತೀನಿ ಅಂತ ಹೇಳಿದ್ರಂತೆ. ಅದಕ್ಕೆ ನಾನು ರಿಸೀವ್ ಮಾಡಿ ಅಂತ ಹೇಳಿದ್ದೇನೆ. ನನ್ನ ಸಹೋದರ ತನ್ನ ಹೆಸರು ಮಿಸ್ ಯೂಸ್ ಆಗಿದೆ ತನಿಖೆ ಮಾಡಿ ಅಂತ ಪೊಲೀಸರಿಗೆ ದೂರು ನೀಡಿದ್ದಾರೆ. ನನ್ನ ಸಹೋದರ ಹೋಗಿ ಇಡಿಗೆ ಏನು ಬೇಕಾದರೂ ಸಹಕಾರ ಕೊಡ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಐಶ್ವರ್ಯ ಗೌಡ ವಂಚನೆ ಕೇಸ್ – ವಿನಯ್ ಕುಲಕರ್ಣಿಗೆ ಇಡಿ ಸಮನ್ಸ್

ಕಾನೂನು ಬಾಹಿರ ಚಟುವಟಿಕೆ ಮಾಡೋರು, ಮೋಸ ಮಾಡೋರು, 3-4 ಜನ ಮೋಸ ಆಗಿರೋರು ಬಂದು ನಿಮ್ಮ ಹೆಸರು ಮಿಸ್ ಯೂಸ್ ಮಾಡ್ತಿದ್ದಾರೆ ಅಂತ ಹೇಳಿದ್ದಾರೆ. ಅದನ್ನು ತನಿಖೆ ಮಾಡಿ ಅಂತ ನಾವು ಹೇಳಿದ್ದೇವೆ. ಇಡಿಗೆ ಸಹಕಾರ ಕೊಡೋಕೆ ನಾವು ತಯಾರಿದ್ದೇವೆ. ನಾವು ಈ ದೇಶದ ಕಾನೂನಿಗೆ, ವಿಚಾರಣೆಗೆ ಇಂತಹ ಮೋಸ ಮಾಡೋ ವ್ಯಕ್ತಿಗಳ ವಿರುದ್ಧ ಕ್ರಮಕ್ಕೆ ಸಹಕಾರ ಕೊಡ್ತೀವಿ. ನಾವು ಸಮಾಜಕ್ಕೆ, ಜನರಿಗೆ ನ್ಯಾಯ ಒದಗಿಸಿ ಕೊಡಬೇಕು. ಅದು ನಮ್ಮ ಕರ್ತವ್ಯ. ಅದನ್ನ ಸುರೇಶ್, ಶಿವಕುಮಾರ್ ಮಾಡ್ತಾರೆ. ನಾವು ಇಡಿಗೆ ಎಲ್ಲಾ ಸಹಕಾರ ಕೊಡ್ತೀವಿ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಐಶ್ವರ್ಯ ಗೌಡ ಮನೆ ಮೇಲೆ ಇಡಿ ದಾಳಿ – 2.25 ಕೋಟಿ ನಗದು ಪತ್ತೆ

Share This Article