ʻಲಾಕಿ ಫ್ರೈʼ ಮನೆಯಲ್ಲೇ ಮಾಡಿ – ರುಚಿ ನೋಡಿ

Public TV
1 Min Read

ನಾನ್‌ವೆಜ್‌ ಪ್ರಿಯರಿಗೆ ಚಿಕನ್‌ ತಿನಿಸುಗಳಿಗಿಂತಲೂ ಮಟನ್‌ ನಿಂದ ಸಿದ್ಧವಾಗುವ ಖಾದ್ಯಗಳೇ ಹೆಚ್ಚು ಪ್ರಿಯವಾಗುತ್ತದೆ. ಕೆಲವರು ತುಪ್ಪದ ಮೂಳೆಗೆ ಮಾರುಹೋಗುತ್ತಾರೆ, ಇನ್ನೂ ಕೆಲವರಿಗೆ ತಲೆ ಮಾಂಸ ಇಷ್ಟವಾಗುತ್ತದೆ. ಆದ್ರೆ ಬ್ಲಡ್‌ ಫ್ರೈ (Mutton Blood Fry) ಹೆಚ್ಚು ಸ್ಪೆಷಲ್‌. ಸಾಮಾನ್ಯವಾಗಿ ಇದನ್ನು ʻಲಾಕಿ ಫ್ರೈʼ ಎಂದೂ ಕರೆಯುತ್ತಾರೆ. ಪ್ರತಿಷ್ಟಿತ ಹೋಟೆಲ್‌ಗಳಲ್ಲೂ ಬೇಡಿಕೆಯಿರುವ ʻಮಟನ್‌ ಬ್ಲಡ್‌ ಫ್ರೈʼ ಅನ್ನು ಈಗ ಮನೆಯಲ್ಲೇ ಮಾಡಿ ಸವಿಯಬಹುದಾದ ಸರಳ ವಿಧಾನ ಇಲ್ಲಿದೆ.

ಬೇಕಾಗುವ ಪದಾರ್ಥಗಳು:
* ಮಟನ್ ರಕ್ತ – 700 ಗ್ರಾಂ
* ಎಳ್ಳಿನ ಎಣ್ಣೆ – 2 ಟೀಸ್ಪೂನ್
* ಕರಿಬೇವಿನ ಎಲೆಗಳು – 1 ಚಿಗುರು
* ಕಟ್ ಮಾಡಿದ ಸಾಂಬಾರ್ ಈರುಳ್ಳಿ – 1 ಕಪ್
* ಹಸಿರು ಮೆಣಸಿನಕಾಯಿ – 4
* ಪುಡಿಮಾಡಿದ ಜೀರಿಗೆ – 2 ಟೀಸ್ಪೂನ್
* ಪುದೀನ ಎಲೆಗಳು – 10
* ಕಟ್ ಮಾಡಿದ ಕೊತ್ತಂಬರಿ ಸೊಪ್ಪು – ಅರ್ಧ ಕಪ್
* ತುರಿದ ತೆಂಗಿನಕಾಯಿ – 1/3 ಕಪ್

ಮಾಡುವ ವಿಧಾನ:
* ಮಟನ್ ರಕ್ತವನ್ನು ತೆಗೆದುಕೊಂಡು ಚೆನ್ನಾಗಿ ಸ್ಮ್ಯಾಶ್ ಮಾಡಿ.
* ರಕ್ತವನ್ನು ಪಕ್ಕಕ್ಕೆ ಇಟ್ಟು. ಕಟ್ ಮಾಡಿದ ಈರುಳ್ಳಿ, ಹಸಿಮೆಣಸಿನಕಾಯಿ, ಪುದೀನಾ ಎಲೆಗಳನ್ನು ರೆಡಿಯಾಗಿ ಇಟ್ಟುಕೊಳ್ಳಿ.
* ಬಾಣಲೆಗೆ 2 ಚಮಚ ಎಣ್ಣೆಯನ್ನು ಹಾಕಿ. ಅದು ಬಿಸಿಯಾದ ನಂತರ, ಹಸಿರು ಮೆಣಸಿನಕಾಯಿ, ಕರಿಬೇವಿನ ಎಲೆಗಳು ಮತ್ತು ಈರುಳ್ಳಿ ಸೇರಿಸಿ ಗೋಲ್ಡನ್ ಬ್ರೌನ್ ಬರುವವರೆಗೂ ಫ್ರೈ ಮಾಡಿ.
* ನಂತರ ಈ ಮಿಶ್ರಣಕ್ಕೆ ಮಟನ್ ರಕ್ತವನ್ನು ಸೇರಿಸಿ ಬೇಯಲು ಬಿಡಿ. ಅಡುಗೆ ಮಾಡಲು ಪ್ರಾರಂಭಿಸಿದ ನಂತರ, ಕೆಂಪು ಬಣ್ಣದಿಂದ ಗಾಢ ಬೂದು ಬಣ್ಣಕ್ಕೆ ಬದಲಾಗುತ್ತದೆ.
* ಬೇಯಿಸಿದ ರಕ್ತದಿಂದ ಎಲ್ಲ ನೀರು ಆವಿಯಾಗುವವರೆಗೆ ಚೆನ್ನಾಗಿ ಬೇಯಿಸಿ. ಇದು ಸುಮಾರು 15 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಈಗ, ಪುಡಿಮಾಡಿದ ಜೀರಿಗೆ ಸೇರಿಸಿ.
* ತುರಿದ ತೆಂಗಿನಕಾಯಿ, ಕೊತ್ತಂಬರಿ ಸೊಪ್ಪು ಮತ್ತು ಪುದೀನ ಎಲೆಗಳನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.

Share This Article