Bigg Boss: ಬಿಗ್‌ ಬಾಸ್‌ ಮನೆಯಲ್ಲಿ ರಘು ಪತ್ನಿ ಬರ್ತ್‌ಡೇ; ಸರ್ಪ್ರೈಸ್‌ಗೆ ಕಣ್ಣೀರಿಟ್ಟ ರಘು

2 Min Read

ಮ್ಯೂಟಂಟ್‌ ರಘುಗೆ ಬಿಗ್‌ ಬಾಸ್‌ (Bigg Boss) ಸರ್ಪ್ರೈಸ್‌ ಗಿಫ್ಟ್‌ ಕೊಟ್ಟಿದ್ದಾರೆ. ಬಿಗ್‌ ಬಾಸ್‌ ಸರ್ಪ್ರೈಸ್‌ಗೆ ರಘು (Mutant Raghu) ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಈ ಸುಂದರ ಘಳಿಗೆ ನನ್ನ ಜೀವನದಲ್ಲಿ ತುಂಬಾ ವಿಶೇಷ ಅಂತ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಅಂತಹ ಸರ್ಪ್ರೈಸ್‌ ಏನು?

ಈ ವಾರ ಬಿಗ್‌ ಬಾಸ್‌ ಮನೆ ಫ್ಯಾಮಿಲಿ ವೀಕ್‌ ಆಗಿ ಮಾರ್ಪಟ್ಟಿದೆ. ಎಲ್ಲಾ ಸ್ಪರ್ಧಿಗಳ ಕುಟುಂಬದವರು ದೊಡ್ಮನೆಗೆ ಬಂದು ತಮ್ಮವರ ಜೊತೆ ಸುಂದರ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಮನೆಯಲ್ಲಿ ಪ್ರೀತಿ-ವಾತ್ಸಲ್ಯ-ಭಾವುಕತೆ-ಸಂತಸದ ಭಾವ ಕಂಡುಬರುತ್ತಿದೆ. ಅಂತೆಯೇ, ಬಿಗ್‌ ಬಾಸ್‌ ಮನೆಗೆ ರಘು ಕುಟುಂಬಸ್ಥರ ಎಂಟ್ರಿಯಾಗಿದೆ. ಇದರ ಪ್ರೋಮೊವನ್ನು ಕಲರ್ಸ್‌ ಕನ್ನಡ ವಾಹಿನಿ ಸೋಷಿಯಲ್‌ ಮೀಡಿಯಾದಲ್ಲಿ ರಿಲೀಸ್‌ ಮಾಡಿದೆ. ಇದನ್ನೂ ಓದಿ: ಬಿಗ್‌ಬಾಸ್‌ ಮನೆಗೆ ಮಾಳು ಮಡದಿ ಎಂಟ್ರಿ  –  ಅಪ್ಪನಂತೆ ಹೇರ್‌ಕಟ್‌… ಮಕ್ಕಳೊಂದಿಗೆ ತರ್ಲೆ ಮಾಡಿದ ಗಿಲ್ಲಿ

ರಘುಗೆ ಅವರ ಪತ್ನಿ ಗ್ರೀಷ್ಮ ಬರ್ತ್‌ಡೇ ದಿನವೇ ಮನೆಗೆ ಅವರನ್ನು ಬಿಗ್‌ ಬಾಸ್‌ ಕರೆಸಿದ್ದಾರೆ. ‘ನನ್‌ ಬರ್ತ್‌ಡೇ ಇವತ್ತು’ ಅಂತ ರಘು ಪತ್ನಿ ಹೇಳ್ತಾರೆ. ಅದಕ್ಕೆ, ಗೊತ್ತು ಅನ್ನುತ್ತಾರೆ ರಘು. ‘ಮತ್ತೆ ವಿಶ್‌ ಮಾಡು.. ಅಳ್ತ ಇದ್ದೀಯಲ್ಲ’ ಅಂತ ಗ್ರೀಷ್ಮ ಅವರು ಹೇಳ್ತಾರೆ. ಪತ್ನಿಯನ್ನು ಅಪ್ಪಿಕೊಂಡು ರಘು ವಿಶ್‌ ಮಾಡ್ತಾರೆ. ನಂತರ ಎಲ್ಲರ ಜೊತೆಗೆ ರಘು ಅವರು ತಮ್ಮ ಪತ್ನಿಯ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಈ ಸಂಭ್ರಮದಲ್ಲಿ ರಘು ಅವರ ಪುತ್ರ ಕೂಡ ಇದ್ದಾರೆ.

ಇದು ನನ್ನ ಲಕ್ಕಿ ಡೇ. ನನ್‌ ಲೈಫ್‌ನಲ್ಲಿ ಇಂತಹ ಬರ್ತ್‌ಡೇ ಸೆಲೆಬ್ರೇಷನ್‌ ಮಾಡೋಕೆ ಆಗ್ತಿರ್ಲಿಲ್ಲ. ನನ್ನ ಕೊನೆಯುಸಿರಿರುವ ವರೆಗೂ ಈ ಸುಂದರ ಕ್ಷಣವನ್ನು ನೆನಪಿಸಿಕೊಳ್ಳುತ್ತಿರುತ್ತೇನೆ ಎಂದು ರಘು ಮಾತನಾಡಿದ್ದಾರೆ. ಈ ವೇಳೆ ಕಣ್ಣಲ್ಲಿ ನೀರು ತುಂಬಿಕೊಂಡು ಭಾವುಕರಾದರು. ಬಳಿಕ ಫ್ಯಾಮಿಲಿ ಜೊತೆ ಖುಷಿ ಕ್ಷಣಗಳನ್ನು ಕಳೆದರು. ಪುತ್ರನ ಜೊತೆ ಸ್ಟೆಪ್‌ ಹಾಕಿ ರಘು ಎಂಜಾಯ್‌ ಮಾಡಿದರು. ಇದನ್ನೂ ಓದಿ: ಕಾವ್ಯ ಮನೆಯವರಿಂದ ನಿಯಮ ಉಲ್ಲಂಘನೆ; ಹೊರ ಕಳಿಸಿದ್ರಾ ಬಿಗ್‌ ಬಾಸ್‌? – ಕಣ್ಣೀರಿಟ್ಟ ಕಾವ್ಯ

Share This Article