ವಿಶ್ವಸಂಸ್ಥೆಯಲ್ಲಿ ಮತ್ತೆ ಚೀನಾ ಅಡ್ಡಗಾಲು: ಕಾಂಗ್ರೆಸ್, ಬಿಜೆಪಿಯಲ್ಲಿ ಯಾರ ವಾದ ಸರಿ?

Public TV
2 Min Read

– ಚೀನಾ ಭಯದಿಂದ ಮೋದಿ ಮಾತನಾಡಿಲ್ಲ – ರಾಹುಲ್
– ಚೀನಾಗೆ ಭದ್ರತಾ ಮಂಡಳಿಯಲ್ಲಿ ಸ್ಥಾನ ನೀಡಿದ್ದೆ ನೆಹರು – ಬಿಜೆಪಿ

ನವದೆಹಲಿ: ವಿಶ್ವಂಸ್ಥೆಯಲ್ಲಿ ಮಸೂದ್ ಅಜರ್ ನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸಲು ಚೀನಾ ಅಡ್ಡಗಾಲು ಹಾಕಿದ ನಡೆ ದೇಶದಲ್ಲಿ ಕಾಂಗ್ರೆಸ್, ಬಿಜೆಪಿ ನಡುವೆ ಟ್ವಿಟ್ಟರ್ ಸಮರಕ್ಕೆ ಕಾರಣವಾಗಿದೆ.

ಭಾರತದ ನಡೆಗೆ ಚೀನಾ ವಿರೋಧ ಮಾಡಿದ್ದರೂ ಕೂಡ ದುರ್ಬಲ ಪ್ರಧಾನಿ ನರೇಂದ್ರ ಮೋದಿ ಅವರು ಭಯದಿಂದ ಇದುವರೆಗೂ ಒಂದು ಮಾತನಾಡಿಲ್ಲ ಎಂದು ರಾಹುಲ್ ಟೀಕೆ ಮಾಡಿ ಟ್ವೀಟ್ ಮಾಡಿದ್ದಾರೆ. ಈ ಟ್ವೀಟಿಗೆ ಬಿಜೆಪಿ ತಿರುಗೇಟು ನೀಡಿದ್ದು, ರಾಹುಲ್‍ರ ಈ ಹೇಳಿಕೆ ಪಾಕಿಸ್ತಾನದಲ್ಲಿ ಹೆಡ್ ಲೈನ್ ಆಗಲಿದೆ ಎಂದು ವ್ಯಂಗ್ಯ ಮಾಡಿದ್ದಾರೆ.

ರಾಹುಲ್ ಗಾಂಧಿ ಅವರ ಟೀಕೆಗೆ ತಿರುಗೇಟು ನೀಡಿರುವ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ದೇಶದ ವಿದೇಶಾಂಗ ನೀತಿ ಟ್ವಿಟ್ಟರ್ ನಲ್ಲಿ ನಿರ್ಧರಿಸುವಂತದಲ್ಲ ಎಂದಿದ್ದಾರೆ. ಅಲ್ಲದೇ ಚೀನಾ ನಡೆಯಿಂದ ದೇಶ ನೋವು ಅನುಭವಿಸುತ್ತಿರುವ ವೇಳೆ ರಾಹುಲ್ ಏಕೆ ಸಂಭ್ರಮದಲ್ಲಿದ್ದಾರೆ? ಏಕೆಂದರೆ ಆ ಮೂಲಕ ಪಾಕಿಸ್ತಾನದಲ್ಲಿ ಹೆಡ್ ಲೈನ್ ಆಗಲಿಕ್ಕೆ ಎಂದು ತಿರುಗೇಟು ನೀಡಿದ್ದಾರೆ.

ಚೀನಾಗೆ ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಸ್ಥಾನ ಪಡೆಯಲು ಯಾರು ಬೆಂಬಲಿಸಿದ್ದರು ಎಂದು ಕೂಡ ರವಿಶಂಕರ್ ಹೇಳಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕ ಶಶಿತರೂರ್ ಅವರ ಪುಸ್ತಕದ ಅಂಶಗಳನ್ನು ಉಲ್ಲೇಖ ಮಾಡಿ, ಹೌದು ಭಾರತಕ್ಕೆ ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಶಾಶ್ವತ ಸದಸ್ಯ ಸ್ಥಾನ ನೀಡಲು ಬಯಸಿದ್ದರೆ ಆದರೆ ನೆಹರು ನಿರಾಕರಿಸಿದ್ದರು. 1953 ರಲ್ಲಿ ಈ ಸ್ಥಾನವನ್ನು ಚೀನಾಗೆ ನೀಡಲಾಗಿದೆ ಎಂಬುದನ್ನು ನೆನಪಿಸಿದ್ದಾರೆ.

ಸದ್ಯ ಚೀನಾ ನಡೆ ಭಾರತ ವಿಶ್ವಸಂಸ್ಥೆಯಲ್ಲಿ ಏಕೆ ಶಾಶ್ವತ ಸದಸ್ಯತ್ವ ಸ್ಥಾನ ಪಡೆಯಲಿಲ್ಲ ಎಂಬ ಬಗ್ಗೆ ಚರ್ಚೆ ನಡೆಯಲು ಕಾರಣವಾಗಿದೆ. ಹಲವು ಸಮಯದಿಂದ ಭಾರತ ಯುಎನ್ ಭದ್ರತಾ ಸಮಿತಿಯಲ್ಲಿ ಶಾಶ್ವತ ಸದಸ್ಯತ್ವ ಸ್ಥಾನ ಪಡೆಯಲು ಚೀನಾ ಹೇಗೆ ಅಡ್ಡಗಾಲು ಹಾಕುತ್ತಿದೆ ಎಂಬುವುನ್ನು ಬಿಜೆಪಿ ವಿವರಿಸಿ ನೆಹರೂ ವಿದೇಶಾಂಗ ನೀತಿಯತ್ತ ಕೈ ಮಾಡಿ ತೋರಿಸಿದೆ.

ರಾಹುಲ್ ಟೀಕೆಗೆ ಪ್ರಶ್ನೆ ಮೇಲೆ ಪ್ರಶ್ನೆ ಮಾಡಿರುವ ಬಿಜೆಪಿ, ನೀವು ಚೀನಾ ಸಂಸ್ಥೆಯೊಂದಿಗೆ ತುಂಬಾ ಹತ್ತಿರದಲ್ಲಿದ್ದರೆ ನಿಮ್ಮ ಆ ಸಂಬಂಧ ಮೂಲಕ ವಿಶ್ವಸಂಸ್ಥೆಯಲ್ಲಿ ಪ್ರಸ್ತಾವನೆಯನ್ನು ಅಂಗೀಕಾರ ಪಡೆಯಲು ಬಳಸಿಕೊಳ್ಳಿ ಎಂದು ಟಾಂಗ್ ನೀಡಿದೆ. ಈ ಮೂಲಕ ಹಿಂದೆ ರಾಹುಲ್ ಚೀನಾದ ಅಂಬಾಸಿಡರ್ ಅವರೊಂದಿಗೆ ನಡೆಸಿದ ಮಾತುಕತೆಯನ್ನು ನೆನಪಿಸಿದೆ.

ಇಂದು ಬೆಳಗ್ಗೆ ಮೋದಿ ಅವರನ್ನು ಟೀಕೆ ಮಾಡಿದ್ದ ರಾಹುಲ್ ಗಾಂಧಿ, ನಮೋ ಚೀನಾ ಡಿಪ್ಲೋಮಸಿ 1.ಗುಜರಾತಿನಲ್ಲಿ ಚೀನಾ ಅಧ್ಯಕ್ಷರ ಜೊತೆ ಜೋಕಾಲಿ 2.ದಿಲ್ಲಿಯಲ್ಲಿ ಅಪ್ಪುಗೆ 3. ಚೀನಾದಲ್ಲಿ ತಲೆ ಬಾಗುವುದು ಎಂದು ಟ್ವೀಟ್ ಮಾಡಿದ್ದರು. ಅಲ್ಲದೇ ದುರ್ಬಲ ಮೋದಿ ಚೀನಾ ಅಧ್ಯಕ್ಷರಿಗೆ ಹೆದರಿದ್ದಾರೆ. ಇದುವರೆಗೂ ಒಂದು ಮಾತನಾಡಿಲ್ಲ ಎಂದು ಟೀಕಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *