ನಮ್ಮ ಧರ್ಮ ಯಾರನ್ನ ಕೊಲ್ಲಲೂ ಅನುಮತಿಸಲ್ಲ – ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮಕ್ಕೆ ಮುಸ್ಲಿಮರ ಒತ್ತಾಯ

Public TV
1 Min Read

ತುಮಕೂರು: ಕಾಶ್ಮೀರದ ಪಹಲ್ಲಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ (Pahalgam Terror Attack) ಖಂಡಿಸಿ ತುಮಕೂರಿನ ಮದೀನ ಮಸೀದಿಯಿಂದ ಪ್ರತಿಭಟನೆ ನಡೆಸಲಾಯಿತು. ಉಗ್ರರ ಕೃತ್ಯವನ್ನು ಖಂಡಿಸಲಾಯಿತು. ಮದೀನ ಮಸೀದಿಯಲ್ಲಿ ನಮಾಜ್ ಮುಗಿಸಿದ ಮುಸ್ಲಿಮರು (Muslims) ಮಸೀದಿ ಮುಂಭಾಗ ಸೇರಿ ಪ್ರತಿಭಟಿಸಿದರು.

ಮದೀನ ಮಸೀದಿ ಮುಖಂಡ ಮಹಮದ್ ದಸ್ತಗಿರ್ ಮಾತನಾಡಿ, ಕಾಶ್ಮೀರದಲ್ಲಿ ಭಯೋತ್ಪಾದಕರ (Kashmiri Terrorists) ಕೃತ್ಯವನ್ನು ಭಾರತದ ಸಮಸ್ತ ಮುಸ್ಲಿಮರು ಖಂಡಿಸುತ್ತೇವೆ, ನಮ್ಮ ತಾಯ್ನಾಡಿಗೆ, ಕೇಡುಮಾಡುವ ಉಗ್ರಗಾಮಿ ಕೃತ್ಯ ಸಹಿಸುವುದಿಲ್ಲ. ಮನುಷ್ಯತ್ವ ವಿರೋಧಿಗಳ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಸಿಂಧೂ ನೀರು ಪಾಕ್‌ಗೆ ಹರಿಯಬೇಕು, ಇಲ್ಲದಿದ್ರೆ ಭಾರತೀಯರ ರಕ್ತ ಹರಿಯುತ್ತೆ: ಬಿಲಾವಲ್‌ ಭುಟ್ಟೋ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮದೀನ ಮಸೀದಿ ಉಪಾಧ್ಯಕ್ಷ ಸೈಫುಲ್ಲ ಎಂ. ಮಾತನಾಡಿ, ಪಹಲ್ಲಾಮ್ ಕೃತ್ಯ ಮನುಷ್ಯತ್ವಕ್ಕೆ ಮಾರಕವಾದ ಕೃತ್ಯ. ಹಿಂದೂ, ಮುಸ್ಲಿಂ, ಕ್ರೈಸ್ತರೆಲ್ಲರೂ ಸೌಹಾರ್ದದಿಂದ ಬದುಕುತ್ತಿದ್ದೇವೆ. ಸರ್ಕಾರ ಉಗ್ರಗಾಮಿ ಕೃತ್ಯದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.  ಇದನ್ನೂ ಓದಿ: ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ ವೇ ಸ್ವಚ್ಛಗೊಳಿಸುತ್ತಿದ್ದಾಗ ಪಿಕಪ್ ಡಿಕ್ಕಿ – 6 ಮಂದಿ ಸ್ವಚ್ಛತಾ ಸಿಬ್ಬಂದಿ ಸಾವು

ಇದೇ ವೇಳೆ ಪ್ರತಿಭಟನಾಕಾರರೊಬ್ಬರು ಮಾತನಾಡಿ, ಪಹಲ್ಗಾಮ್‌ನಲ್ಲಿ ನಡೆದ ದಾಳಿ ದೇಶದ ಮೇಲೆ ನಡೆದ ದಾಳಿಯಾಗಿದೆ. ನಿರಾಯುಧರ ಮೇಲೆ ದಾಳಿ ನಡೆಸಲಾಗಿದೆ. ನಮ್ಮ ಧರ್ಮ ಈ ರೀತಿ ಯಾರನ್ನೂ ಕೊಲ್ಲಲು ಅನುಮತಿಸಲ್ಲ. ನಾವು ಇದನ್ನ ಸ್ಪಷ್ಟವಾಗಿ ಖಂಡಿಸುತ್ತೇವೆ. ಕೃತ್ಯ ಎಸಗಿದ ಭಯೋತ್ಪಾದಕರಿಗೆ ಆದಷ್ಟು ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಪ್ರಧಾನ ಮಂತ್ರಿಗಳ ಈ ಆಟಿಟ್ಯೂಡ್ ಸರಿಯಿಲ್ಲ: ಮಲ್ಲಿಕಾರ್ಜುನ ಖರ್ಗೆ ಕಿಡಿ 

Share This Article