ಅಲ್ಪಸಂಖ್ಯಾತರನ್ನು ರಕ್ಷಿಸುವುದು ಮುಸ್ಲಿಮರ ಕರ್ತವ್ಯ: ಅಸ್ಸಾಂ ಸಿಎಂ

Public TV
1 Min Read

ಡಿಸ್ಪುರ್:  ಅಸ್ಸಾಂನ ಜನಸಂಖ್ಯೆಯಲ್ಲಿ ಶೇ.35 ರಷ್ಟು ಮುಸ್ಲಿಮರಿದ್ದು, ಇನ್ನು ಮುಂದೆ ಅವರನ್ನು ಅಲ್ಪಸಂಖ್ಯಾತರು ಎಂದು ಪರಿಗಣಿಸಲಾಗುವುದಿಲ್ಲ ಎಂದು ಎಂದು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ತಿಳಿಸಿದರು.

ಅಸ್ಸಾಂ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ಮಾಡುತ್ತಿರುವಾಗ ಶರ್ಮಾ ಅವರು, ಮುಸ್ಲಿಂ ಸಮುದಾಯದ ಜನರು ವಿರೋಧ ಪಕ್ಷದ ನಾಯಕರು, ಶಾಸಕರು, ಸಮಾನ ಅವಕಾಶ ಮತ್ತು ಅಧಿಕಾರವನ್ನು ಹೊಂದಿದ್ದಾರೆ. ಅದನ್ನು ಖಚಿತಪಡಿಸಿಕೊಳ್ಳುವುದು ಅವರ ಕರ್ತವ್ಯವಾಗಿದೆ ಎಂದು ಮಾತನ್ನು ಆರಂಭಿಸಿದರು. ಇದನ್ನೂ ಓದಿ: ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ವೀಕ್ಷಿಸಲು ಸರ್ಕಾರಿ ನೌಕರರಿಗೆ ಅರ್ಧ ದಿನ ರಜೆ: ಅಸ್ಸಾಂ ಸಿಎಂ

ಅಧಿಕಾರವು ಜವಾಬ್ದಾರಿಯೊಂದಿಗೆ ಬರುತ್ತೆ. ಮುಸ್ಲಿಮರು ಅಸ್ಸಾಂನ ಜನಸಂಖ್ಯೆ ಶೇ.35 ರಷ್ಟಿದ್ದಾರೆ. ಇಲ್ಲಿನ ಅಲ್ಪಸಂಖ್ಯಾತರನ್ನು ರಕ್ಷಿಸುವುದು ಅವರ ಕರ್ತವ್ಯ. ಅಸ್ಸಾಮಿಗರು ಭಯದಲ್ಲಿದ್ದಾರೆ. ತಮ್ಮ ಸಂಸ್ಕೃತಿ ಮತ್ತು ನಾಗರಿಕತೆ ರಕ್ಷಣೆಯಾಗುತ್ತ ಎಂಬ ಭಯವಿದೆ. ಸಾಮರಸ್ಯ ಎರಡು ಧರ್ಮಗಳ ನಡುವೆ ತುಂಬಾ ಮುಖ್ಯ. ಸಂಕರಿ ಸಂಸ್ಕೃತಿ, ಸತ್ರಿಯಾ ಸಂಸ್ಕೃತಿ ರಕ್ಷಣೆ ಬಗ್ಗೆ ಮುಸ್ಲಿಮರು ಮಾತನಾಡಲಿ. ಆಗ ಎಲ್ಲರ ನಡುವೆ ಸೌಹಾರ್ದತೆ ಇರುತ್ತದೆ. ಹತ್ತು ವರ್ಷಗಳ ಹಿಂದೆ, ನಾವು ಅಲ್ಪಸಂಖ್ಯಾತರಾಗಿರಲಿಲ್ಲ ಆದರೆ ಈಗ ನಾವಿದ್ದೇವೆ ಎಂದು ತಿಳಿಸಿದರು.

‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾವನ್ನು ಅಸ್ಸಾಂ ಜನರೊಂದಿಗೆ ಸಮೀಕರಿಸಿ ಮಾತನಾಡಿದ ಅವರು, ಅಸ್ಸಾಮಿಗಳು ಕಾಶ್ಮೀರಿ ಪಂಡಿತರಂತೆಯೇ ಅದೇ ಭವಿಷ್ಯವನ್ನು ಎದುರಿಸುತ್ತಾರೆಯೇ ಎಂದು ಜನರು ನನ್ನನ್ನು ಕೇಳುತ್ತಾರೆ. ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದಲ್ಲಿ ತೋರಿಸಿದಂತೆ ಎಲ್ಲಿ ನಮ್ಮ ಪರಿಸ್ಥಿತಿಯಾಗುತ್ತೆ ಎಂದು ಕೆಲವರು ಭಯಪಟ್ಟುಕೊಂಡಿದ್ದಾರೆ. ಈ ಭಯವನ್ನು ಹೋಗಲಾಡಿಸುವುದು ಮುಸ್ಲಿಮರ ಕರ್ತವ್ಯ. ಮುಸ್ಲಿಮರು ಬಹುಸಂಖ್ಯಾತರಂತೆ ವರ್ತಿಸಬೇಕು ಮತ್ತು ಇಲ್ಲಿ ಕಾಶ್ಮೀರದ ರೀತಿ ಪುನರಾವರ್ತನೆಯಾಗುವುದಿಲ್ಲ ಎಂಬ ಭರವಸೆಯನ್ನು ನೀಡಬೇಕು ಎಂದು ಮನವಿ ಮಾಡಿಕೊಂಡರು. ಇದನ್ನೂ ಓದಿ: ಹಿಜಬ್ ಪರ ವಾದಿಗಳ ಬೆದರಿಕೆಗೆ ಸರ್ಕಾರ ಮಣಿಯದು: ಅಶ್ವತ್ಥನಾರಾಯಣ

Share This Article
Leave a Comment

Leave a Reply

Your email address will not be published. Required fields are marked *