ದಾವಣಗೆರೆ: ಮುಸ್ಲಿಮರನ್ನು ಯಾವ ಪಕ್ಷದಲ್ಲೂ ರಾಜ್ಯಾಧ್ಯಕ್ಷರನ್ನಾಗಿ ಮಾಡಿಲ್ಲ. ಕಾಂಗ್ರೆಸ್ (Congress) ಪಕ್ಷದಲ್ಲಿ ಮುಸ್ಲಿಮರಿಗೆ ಊಟದ ಕೊನೆಯಲ್ಲಿ ಅಳಿದುಳಿದ ಎಂಜಲು ರೀತಿಯಲ್ಲಿ ಸ್ಥಾನಮಾನ ನೀಡ್ತಿದ್ರು. ಆದರೆ ಜೆಡಿಎಸ್ (JDS) ರಾಜ್ಯಾಧ್ಯಕ್ಷರ ಸ್ಥಾನ ನೀಡಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ (C.M.Ibrahim) ಹೇಳಿದ್ದಾರೆ.
ದಾವಣಗೆರೆ (Davanagere) ಜಿಲ್ಲೆಯ ಹರಿಹರ ತಾಲೂಕಿನ ಮಲೆಬೇನ್ನೂರು ಗ್ರಾಮದಲ್ಲಿ ಸಾರ್ವಜನಿಕ ಸಭೆ ಮಾಡಿ ಹಬೀವುಲ್ಲಾ ಷಾ ಖಾದ್ರಿ ದರ್ಗಾಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ನಾವು ಗುರುವಾರದ ಫಕೀರರಿದ್ದಂತೆ. ಜೋಳಿಗೆ ಹಿಡಿದು ಇಡೀ ರಾಜ್ಯದಲ್ಲಿ ಪ್ರವಾಸ ಮಾಡ್ತಿದ್ದೇವೆ. ಅ ದೇವರು ಅಧಿಕಾರ ಕೊಟ್ಟರೆ ಒಳ್ಳೆದಾಗುತ್ತೆ. ಅಧಿಕಾರ ಕೊಡಲಿಲ್ಲ ಅಂದ್ರೂ ಒಳ್ಳೆಯದು ಎಂದು ಮಾತನಾಡಿದ್ದಾರೆ. ಇದನ್ನೂ ಓದಿ: 80 ವರ್ಷ ಆದ್ಮೇಲೆ ಖರ್ಗೆ ಅವರನ್ನ ಡ್ರೈವರ್ ಸೀಟಲ್ಲಿ ಕೂರಿಸಿದ್ದಾರೆ: ಅಶೋಕ್ ಲೇವಡಿ
ಜೆಡಿಎಸ್‌ನ ವರಿಷ್ಠ ಹೆಚ್.ದೇವೆಗೌಡರು ಮೊಟ್ಟ ಮೊದಲ ಬಾರಿಗೆ ಇಪ್ಪತ್ತು ವರ್ಷಗಳ ಬಳಿಕ ಒಬ್ಬ ಮುಸ್ಲಿಂ ವ್ಯಕ್ತಿಗೆ ಜೆಡಿಎಸ್‌ನ ರಾಜ್ಯಾಧ್ಯಕ್ಷ ಸ್ಥಾನ ನೀಡಿದ್ದಾರೆ. ಮುಸ್ಲಿಮರನ್ನು ಜೆಡಿಎಸ್‌ನ ರಾಜ್ಯಾಧ್ಯಕ್ಷರಾಗಿ ಮಾಡಿದ ಏಕೈಕ ಪಕ್ಷ ಅಂದರೆ ಅದು ಜೆಡಿಎಸ್. ಕರ್ನಾಟಕದಲ್ಲಿ ಯಾವುದೇ ಪಕ್ಷಗಳು ಇತಿಹಾಸದಲ್ಲೇ ಮುಸ್ಲಿಮರನ್ನು ತಮ್ಮ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಮುಸ್ಲಿಮರಿಗೆ ಅಳಿದುಳಿದ ಸ್ಥಾನಮಾನ ಕೊಡ್ತಿದ್ರು. ಅದು ಮುಸ್ಲಿಂ ಸಮುದಾಯಕ್ಕೆ ನೀಡ್ತಿದ್ದ ಸ್ಥಾನಮಾನ ಕೊನೆಯ ಚಾಕ್ಣಾ ಇದ್ದಂತೆ ಎಂದು ವಾಗ್ದಾಳಿ ನಡೆಸಿದ್ದಾರೆ.
ದಾವಣಗೆರೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಚಿಂತಿಸಿಲ್ಲ. ಹರಿಹರದಲ್ಲಿ ಮಾತ್ರ ಹಳೇ ವರು ಇದ್ದಾರೆ. ಅ ವರ ಮಾಜಿ ಶಾಸಕ ಶಿವಶಂಕರ್ ಮಾತ್ರ ಹರಿಹರಕ್ಕೆ ಫೈನಲ್ ಮಾಡಲಾಗಿದೆ. ಮಲೆಬೆನ್ನೂರಿನ ಹಬೀವುಲ್ಲಾ ಷಾ ಖಾದ್ರಿಯವರು ನೆಲೆಸಿರುವ ಈ ಸ್ಥಳದಲ್ಲಿ ನಿಂತು ಹೇಳುತ್ತಿದ್ದೇನೆ. ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ: ಸ್ವತಃ ಬಿಜೆಪಿಯವರೇ ಹಲಾಲ್ ಕಟ್ ಮಾಡಿ ಕಮಿಷನ್ ಹೊಡೆಯುತ್ತಿದ್ದಾರೆ – ಓವೈಸಿ ಆರೋಪ