ಕರಾವಳಿಯಿಂದ ಮೈಸೂರಿಗೆ ಎಂಟ್ರಿ – ಚಾಮುಂಡಿಬೆಟ್ಟದಲ್ಲಿ ಬಹಿಷ್ಕಾರದ ಕಿಚ್ಚು

Public TV
1 Min Read

ಮೈಸೂರು: ಮಂಗಳೂರು, ಉಡುಪಿ, ಬೆಂಗಳೂರಿಗೆ ವ್ಯಾಪಿಸಿದ್ದ ಧರ್ಮ ಸಂಘರ್ಷ ಇದೀಗ ಸಾಂಸ್ಕøತಿಕ ನಗರಿ ಮೈಸೂರಿಗೂ ವ್ಯಾಪಿಸುತ್ತಿದೆ. ಮೈಸೂರಿನ ಧಾರ್ಮಿಕ ದತ್ತಿ ಇಲಾಖೆಯ ಎಲ್ಲ ದೇವಾಲಯಗಳ ಆವರಣದಲ್ಲಿ ಹಾಗೂ ಜಾತ್ರಾಮಹೋತ್ಸವಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಬರ್ಂಧ ವಿಧಿಸುವಂತೆ ಸಂಘಟನೆಗಳು ಆಗ್ರಹಿಸಿವೆ.

mys 01

ಈ ಸಂಬಂಧ ಮೈಸೂರಿನ ವಿಶ್ವಹಿಂದೂ ಪರಿಷದ್ ಸಂಘಟನೆಯು ಜಿಲ್ಲಾಧಿಕಾರಿಗಳ ಮೂಲಕ ಧಾರ್ಮಿಕ ದತ್ತಿ ಇಲಾಖೆಯ ಸಚಿವರಿಗೆ ಮನವಿ ಸಲ್ಲಿಸಿದೆ. ಇದನ್ನೂ ಓದಿ: ಹಿಂದೂ ಜಾತ್ರೆಗಳಲ್ಲಿ ಮುಸ್ಲಿಮ್‌ ವ್ಯಾಪಾರಿಗಳಿಗೆ ನಿಷೇಧ: ನಿಯಮ ಏನಿದೆ?

ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ಎಲ್ಲ ದೇವಸ್ಥಾನದ ಆವರಣದಲ್ಲಿ ಹಾಗೂ ಜಾತ್ರಾ ಮಹೋತ್ಸವಗಳಲ್ಲಿ ಅಂಗಡಿ ಮುಂಗಟ್ಟು, ಟೆಂಡರ್ ಪ್ರಕ್ರಿಯೆಯಲ್ಲಿ ಹಿಂದುಯೇತರರಿಗೆ ಅವಕಾಶ ನೀಡಬಾರದು ಹಾಗೂ ಮೈಸೂರಿನ ಚಾಮುಂಡಿಬೆಟ್ಟ ದೇವಸ್ಥಾನ ಆವರಣದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ವಿಧಿಸಬೇಕು ಎಂದು ಒತ್ತಾಯಿಸಿದೆ.

mys market

ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾಧಾಯ ದತ್ತಿಗಳ ಅಧಿನಿಯಮ 1997, 2002ರ 31(12) ನಿಯಮದ ಪ್ರಕಾರ ಧಾರ್ಮಿಕ ದತ್ತಿ ಇಲಾಖೆಗೆ ಸಂಬಂಧಿಸಿದ ದೇವಾಸ್ಥಾನದ ಸುತ್ತಮುತ್ತಲಿನ ಪ್ರದೇಶದಲ್ಲಿ ಹಿಂದೂ ಅಲ್ಲದವರಿಗೆ ಗುತ್ತಿಗೆ ನೀಡುವಂತಿಲ್ಲ. ಹೀಗಾಗಿ ಧಾರ್ಮಿಕ ದತ್ತಿ ಇಲಾಖೆಯು ಕೂಡಲೇ ರಾಜ್ಯದ ಎಲ್ಲ ದೇವಸ್ಥಾನ ಆಡಳಿತ ಮಂಡಳಿಯ ಇಲಾಖೆಗೆ ಒಳಪಟ್ಟ ಹಿಂದೂ ದೇವಸ್ಥಾನ, ಜಾತ್ರಾ ಮಹೋತ್ಸವ, ರಥೋತ್ಸವ ಹಾಗೂ ಇತರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹಿಂದೂಯೇತರರಿಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದೆ. ಇದನ್ನೂ ಓದಿ: ಮುಸ್ಲಿಮರಿಗೆ ದೇವಸ್ಥಾನಗಳಲ್ಲಿ ವ್ಯಾಪಾರ ಬಹಿಷ್ಕಾರ – 2021ರಲ್ಲಿ ಗಂಗೊಳ್ಳಿಯಲ್ಲಿ ನಡೆದಿದ್ದು ಏನು?

ಮುಸ್ಲಿಂ ಮೂಲಭೂತವಾದಿಗಳು ಹಾಗೂ ಸಂಘಟನೆಗಳು ಹೈಕೋರ್ಟ್ ಆದೇಶ ಪಾಲಿಸಲು ವಿರೋಧ ವ್ಯಕ್ತಪಡಿಸುತ್ತಿವೆ. ಇದರಿಂದ ಹಿಂದೂ ಸಮಾಜದಲ್ಲಿ ಆತಂಕ ಸೃಸ್ಟಿಯಾಗಿದ್ದು, ಹಿಂದೂ ದೇವಾಲಯಗಳ ಸುತಮುತ್ತ ಇರುವ ಹಿಂದೂಗಳ ರಕ್ಷಣೆಗೆ ಕ್ರಮ ವಹಿಸಬೇಕು ಎಂದು ಸಂಘಟನೆ ಮನವಿ ಮಾಡಿದೆ.

Share This Article
Leave a Comment

Leave a Reply

Your email address will not be published. Required fields are marked *