ಮಂಗಳೂರು| ನಿಷೇಧಿತ PFI ಸಂಘಟನೆ ಆಕ್ಟೀವ್ ಮಾಡಿದ್ದ ಧರ್ಮಗುರು ಅರೆಸ್ಟ್

Public TV
1 Min Read

ಮಂಗಳೂರು: ಕರಾವಳಿಯಲ್ಲಿ ಮತ್ತೆ ನಿಷೇಧಿತ ಪಿಎಫ್‌ಐ ಸಂಘಟನೆ ಆಕ್ಟೀವ್ ಆಗಿದೆಯಾ ಎಂಬ ಅನುಮಾನ ಮೂಡಿದೆ. ವಾಟ್ಸಾಪ್ ಗ್ರೂಪ್‌ವೊಂದನ್ನು ರಚಿಸಿ ಪಿಎಫ್‌ಐ ಸದಸ್ಯರಿಗೆ ಮತ್ತೆ ಚಟುವಟಿಕೆ ಆರಂಭಿಸಲು ಪ್ರಚೋದನೆ ನೀಡುತ್ತಿದ ಮುಸ್ಲಿಂ ಧರ್ಮಗುರುವನ್ನ ಬಂಧಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕಡಬ ನಿವಾಸಿ ಸೈಯ್ಯದ್ ಇಬ್ರಾಹಿಂ ತಂಙಳ್ ಬಂಧಿತ ಆರೋಪಿ. ಭೂಗತರಾಗಿರುವ ಪಿಎಫ್‌ಐ ಸದಸ್ಯರನ್ನು ಸಂಪರ್ಕಿಸಿದ್ದ ಸೈಯ್ಯದ್ ಇಬ್ರಾಹಿಂ ತಂಙಳ್ ಸಲ್ಮಾನ್ ಸಲಾಂ ಎಂಬ ವಾಟ್ಸಾಪ್ ಗ್ರೂಪ್ ರಚಿಸಿ ಪಿಎಫ್‌ಐ ಸಂಘಟನೆಯ ಬಗ್ಗೆ ಸಂಘಟನೆಯ ಪುನರ್ ರಚನೆಯ ಬಗ್ಗೆ ಪ್ರಚಾರ ಮಾಡುತ್ತಿದ್ದ. ಭೂಗತರಾಗಿರುವ ಪಿಎಫ್‌ಐ ಸದಸ್ಯರನ್ನು ಸಂಪರ್ಕಿಸಿದ್ದ ಸೈಯ್ಯದ್ ಇಬ್ರಾಹಿಂ ತಂಙಳ್, ಮತ್ತೆ ಚಟುವಟಿಕೆ ಆರಂಭಿಸಲು ಪ್ರಚೋದನೆ ನೀಡುತ್ತಿದ್ದನೆಂಬ ಆರೋಪ ಇದೆ. ಇದನ್ನೂ ಓದಿ: ಕೇರಳ ನಟ ಜಯಕೃಷ್ಣನ್ ಮಂಗಳೂರಲ್ಲಿ ಬಂಧನ

ಮಂಗಳೂರಿನ ಉರ್ವಾಸ್ಟೋರ್ ಬಳಿಯಿಂದ ವಶಕ್ಕೆ ಪಡೆದ ಪೊಲೀಸರು, ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಿ, ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಯನ್ನು ಅ.24 ವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

Share This Article