ಮುಸ್ಲಿಂ ದೇಶಗಳ ಪೆಟ್ರೋಲ್ ಡೀಸೆಲ್ ಬಳಸಬೇಡಿ, ಗೋಮೂತ್ರ ಹಾಕ್ಕೊಂಡು ವಾಹನ ಓಡಿಸಿ: ಅಬ್ದುಲ್ ರಜಾಕ್ ಕಿಡಿ

Public TV
1 Min Read

ಬೆಂಗಳೂರು: ಮುಸ್ಲಿಂ ಅರಬ್ ದೇಶಗಳ ಪೆಟ್ರೋಲ್ ಬಳಸಬೇಡಿ. ಬದಲಿಗೆ ಗೋಮೂತ್ರ ಹಾಕಿಕೊಂಡು ವಾಹನ ಓಡಿಸಿಕೊಂಡು ಹೋಗಿ ಎಂದು ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್ ಕಿಡಿಯಾಗಿದ್ದಾರೆ.

ದೇವಾಲಯಗಳಿಗೆ ತೆರಳುವ ಹಿಂದೂಗಳು ಹಿಂದೂ ಚಾಲಕರ ವಾಹನಗಳನ್ನು ಬಳಸಬೇಕು ಎಂಬ ಅಭಿಯಾನಕ್ಕೆ ಅವರು ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದರು.

ಇತ್ತೀಚೆಗೆ ಕರ್ನಾಟಕದಲ್ಲಿ ನಡೆಯುತ್ತಿರುವ ಹಿಂದೂ-ಮುಸ್ಲಿಂ ವಿವಾದದ ಕುರಿತಾಗಿ ಸಿಡಿದೆದ್ದ ರಜಾಕ್ ಕರ್ನಾಟಕ ಎಲ್ಲಿಗೆ ಹೋಗುತ್ತಿದೆ? ಮುಸ್ಲಿಮರಿಗೆ ನೆಮ್ಮದಿಯಿಂದ ರಂಜಾನ್ ಆಚರಿಸಲು ಬಿಡಿ. ದಿನಬೆಳಗಾದಂತೆ ಟೆನ್ಶನ್ ಕೊಡಬೇಡಿ ಎಂದು ಮನವಿ ಮಾಡಿದರು. ಇದನ್ನೂ ಓದಿ: ಕುರಾನ್ ಮೇಲೆ ದೇಶ ನಡೆಯಲ್ಲ, ತಂದೆಯ ಜೊತೆಗೆ ಮುಸ್ಕಾನ್‌ಳನ್ನು ಬಂಧಿಸಬೇಕು: ಮುತಾಲಿಕ್

ಹಿಂದೂ-ಮುಸ್ಲಿಂ ಎಂದು ವಿವಾದ ಎಬ್ಬಿಸುತ್ತಿರುವವರ ಬಾಯಿ ಮುಚ್ಚಿಸಬೇಕು. ಇವರಿಗೆಲ್ಲ ಬುದ್ದಿ ಇಲ್ವಾ? ಇದರಿಂದಾಗಿ ಕರ್ನಾಟಕದ ಆರ್ಥಿಕ ಸ್ಥಿತಿ ಕುಸಿತವಾಗುತ್ತಿದೆ. ಶ್ರೀಲಂಕಾದಲ್ಲಿ ಆಗುತ್ತಿರುವ ಸ್ಥಿತಿ ಎಂದಿಗೂ ಕರ್ನಾಟಕಕ್ಕೆ ಬರಬಾರದೆಂದು ಬೇಡಿಕೊಳ್ಳುತ್ತೇನೆ ಎಂದರು. ಇದನ್ನೂ ಓದಿ: ಇಂಗ್ಲಿಷ್‌ಗೆ ಪರ್ಯಾಯವಾಗಿ ಹಿಂದಿ ಭಾಷೆ ಬಳಕೆಯಾಗಬೇಕು: ಅಮಿತ್ ಶಾ

ಇಷ್ಟೆಲ್ಲಾ ರಾಜ್ಯದಲ್ಲಿ ನಡೆಯುತ್ತಿದ್ದರೂ ಸಿಎಂ ಏನು ಮಾಡುತ್ತಿದ್ದಾರೆ? ರಾಜ್ಯದ ಅಭಿವೃದ್ಧಿಗೆ ಇದೆಲ್ಲ ಮಾರಕವಾಗುತ್ತಿದೆ. ಈ ವಿಚಾರದಲ್ಲಿ ಕರ್ನಾಟಕಕ್ಕೆ 5 ಪೈಸೆ ಲಾಭ ಇಲ್ಲ. ಹೀಗೇ ಆದರೆ ಐಟಿ ಬಿಟಿಯವರು ಓಡಿ ಹೋಗುತ್ತಾರೆ. ಸರ್ಕಾರ ಹಿಂದೂ ಜನರ ವಾಹನಕ್ಕೆ ಕೇಸರಿ ಹಾಗೂ ಮುಸ್ಲಿಮರಿಗೆ ಹಸಿರು ನಂಬರ್ ಪ್ಲೇಟ್ ಹಾಕಲಿ ಎಂದು ಆಕ್ರೋಶ ಹೊರ ಹಾಕಿದರು.

Share This Article
Leave a Comment

Leave a Reply

Your email address will not be published. Required fields are marked *