ಪ್ರಮೋದ್ ಮುತಾಲಿಕ್ ಜೊತೆ ಫೋಟೋ ಅಪ್ಲೋಡ್ ಮಾಡಿದ್ದಕ್ಕೆ ಮುಸ್ಲಿಂ ಕಲಾವಿದನಿಗೆ ಜೀವ ಬೆದರಿಕೆ

Public TV
1 Min Read

ಶಿವಮೊಗ್ಗ: ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ ಜೊತೆ ಫೋಟೊ ತೆಗಿಸಿಕೊಂಡ ಕಾರಣಕ್ಕೆ ಸಂಗೀತ ಕಲಾವಿದರರೊಬ್ಬರಿಗೆ ಹಲ್ಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.

ಸಂಗೀತ ನಿರ್ದೇಶಕ, ತಬಲಾ ವಾದಕ ರಶೀದ್ ಖಾನ್ ಎಂಬವರಿಗೆ ಜೀವಬೆದರಿಕೆ ಹಾಕಲಾಗಿದೆ. ಇತ್ತೀಚಿಗಷ್ಟೇ ರಶೀದ್ ಬೆಂಗಳೂರಿನಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಇವರು ತಬಲಾ ವಾದಕರಾಗಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮಕ್ಕೆ ಬಂದಿದ್ದ ಪ್ರಮೋದ್ ಮುತಾಲಿಕ್ ಇವರ ತಬಲಾ ವಾದನಕ್ಕೆ ಮೆಚ್ಚಿ, ಪುರಸ್ಕರಿಸಿದ್ದರು. ಈ ಫೋಟೋವನ್ನು ರಶೀದ್ ಫೇಸ್ ಬುಕ್‍ನಲ್ಲಿ ಅಪ್‍ಲೋಡ್ ಮಾಡಿದ್ರು.

ಇದನ್ನೂ ಓದಿ: ಬುರ್ಖಾ ತೊಟ್ಟು ಭಕ್ತಿ ಗೀತೆ ಗುನುಗಿದ್ದು ಮಹಾಪ್ರಮಾದನಾ..?

ಫೇಸ್‍ಬುಕ್‍ನಲ್ಲಿ ಫೋಟೋ ಅಪ್ಲೋಡ್ ಮಾಡಿದಾಗಿನಿಂದ ಭಾರೀ ಟೀಕೆಗಳು ವ್ಯಕ್ತವಾಗಿವೆ. ಇದ್ರಿಂದಾಗಿ ಕೊನೆಗೆ ರಶೀದ್ ಪೋಸ್ಟ್ ಡಿಲೀಟ್ ಮಾಡಿದ್ದಾರೆ. ಆದರೆ ಮಂಗಳವಾರ ಪುರದಾಳು ರಸ್ತೆಯಲ್ಲಿ ಬೈಕ್‍ನಲ್ಲಿ ಹೋಗುವಾಗ ಇವರನ್ನು ಅಡ್ಡಗಟ್ಟಿ, ಜೀವ ಬೆದರಿಕೆ ಹಾಕಿದ್ದಾರೆ. ಬೈಕ್‍ಗಳಲ್ಲಿ ಹೆಲ್ಮೆಟ್ ಹಾಕಿಕೊಂಡು ಬಂದ ನಾಲ್ವರು ಅವಾಚ್ಯ ಶಬ್ದಗಳಿಂದ ರಶೀದ್ ಅವರನ್ನು ನಿಂದಿಸಿದ್ದಾರೆ. ಭಯಗೊಂಡ ರಶೀದ್ ತಕ್ಷಣ ಅಲ್ಲಿಂದ ಹಿಂತಿರುಗಿದ್ದಾರೆ.

ಈ ಬಗ್ಗೆ ರಶೀದ್ ತುಂಗಾ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಗದಗಿನ ಪುಟ್ಟರಾಜ ಗವಾಯಿಗಳ ಪರಂಪರೆಯಲ್ಲಿ ಸಂಗೀತ ಕಲಿತಿರುವ ರಶೀದ್ ಶಿವಮೊಗ್ಗದ ಸಾಂಸ್ಕೃತಿಕ ಲೋಕದಲ್ಲಿ ಅರಳುತ್ತಿರುವ ಪ್ರತಿಭೆ. ಶಾಸ್ತ್ರೀಯ ಸಂಗೀತದ ಜೊತೆ ಅಧುನಿಕ ಸಂಗೀತವನ್ನೂ ಅಭ್ಯಾಸ ಮಾಡಿರುವ ರಶೀದ್ ಸಿನಿಮಾಗಳಿಗೂ ಸಂಗೀತ ನೀಡಿದ್ದಾರೆ. ಇವರದ್ದೇ ಆದಾ ಅಲ್ಬಂ ಡ್ರೀಮ್‍ಡಾಲ್ ಹೊರಬರಲು ಸಿದ್ಧವಾಗುತ್ತಿದೆ.

ಇದನ್ನೂ ಓದಿ: ಸಹಿಷ್ಣುತೆಯ ಪಾಠ ಹೇಳೋ ಲದ್ದಿಜೀವಿಗಳು ಈಗ ಎಲ್ಲಿದ್ದಾರೆ- ಸುಹಾನ ವಿಚಾರದಲ್ಲಿ ಪ್ರತಾಪ್ ಸಿಂಹ ಪ್ರಶ್ನೆ

 

https://www.youtube.com/watch?v=BCfd2FYaISA

Share This Article
Leave a Comment

Leave a Reply

Your email address will not be published. Required fields are marked *