ಡಿವೋರ್ಸ್‌ ವಿಚಾರಕ್ಕೆ ಟ್ರೋಲ್‌ ಮಾಡಿದವರಿಗೆ ಮ್ಯೂಸಿಕ್‌ ಡೈರೆಕ್ಟರ್‌ ಜಿ.ವಿ ಪ್ರಕಾಶ್‌ ಮನವಿ

Public TV
2 Min Read

ಮಿಳಿನ ಮ್ಯೂಸಿಕ್ ಡೈರೆಕ್ಟರ್ ಜಿ.ವಿ ಪ್ರಕಾಶ್ ಕುಮಾರ್ (G v Prakash Kumar) 11 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿರುವ (Divorce) ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದರು. ಈ ಬೆನ್ನಲ್ಲೇ ಅವರ ವೈಯಕ್ತಿಕ ವಿಚಾರಗಳನ್ನು ಟ್ರೋಲ್ (Troll) ಮಾಡಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವೈಯಕ್ತಿಕ ಜೀವನದ ಬಗ್ಗೆ ಹಲವು ಟೀಕೆಗಳು ಕೇಳಿ ಬಂದ ಬೆನ್ನಲ್ಲೇ ಸಂಗೀತ ನಿರ್ದೇಶಕ ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮ ಖಾಸಗಿ ಜೀವನವನ್ನು ಗೌರವಿಸಿ ಎಂದು ಕೇಳಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಶೇರ್ ಮಾಡಿ, ಭಾವನೆಗಳನ್ನು ಗೌರವಿಸುವಂತೆ ಮನವಿ ಮಾಡಿದ್ದಾರೆ. ಕಠಿಣ ಸಮಯವನ್ನು ಅರ್ಥಮಾಡಿಕೊಳ್ಳುವಂತೆಯೂ ನೆಟ್ಟಿಗರಲ್ಲಿ ಕೇಳಿಕೊಂಡಿದ್ದಾರೆ. ಪರಸ್ಪರ ಒಪ್ಪಿಗೆ ಮೇರೆಗೆ ತಾವು ಬೇರೆಯಾಗಲು ನಿರ್ಧರಿಸಿರುವುದಾಗಿ ಮತ್ತೊಮ್ಮೆ ತಿಳಿಸಿದ್ದಾರೆ. ಇದನ್ನೂ ಓದಿ:ಸಂಗೀತಾ ಬರ್ತ್‌ಡೇಗೆ ವಿಶೇಷ ಉಡುಗೊರೆ ನೀಡಿದ ಡ್ರೋನ್‌ ಪ್ರತಾಪ್

 

View this post on Instagram

 

A post shared by G.V.Prakash Kumar (@gvprakash)

ಅನಗತ್ಯ ಹೇಳಿಕೆಗಳು ನಮ್ಮ ಮೇಲೆ ಪರಿಣಾಮ ಬೀರುತ್ತಿವೆ ಎಂಬುದನ್ನು ತಿಳಿಸಿದ್ದಾರೆ. ನೋವುಂಟು ಮಾಡುವ ಟೀಕೆಗಳು ಮತ್ತು ಟ್ರೋಲಿಂಗ್‌ಗಳನ್ನು ನಿಲ್ಲಿಸುವ ಸಲುವಾಗಿ ಪೋಸ್ಟ್ ಶೇರ್ ಮಾಡಿದ್ದಾರೆ. ಜನರು ಸರಿಯಾದ ಮಾಹಿತಿ ಅಥವಾ ತಿಳುವಳಿಕೆಯಿಲ್ಲದೇ ಇಬ್ಬರು ವ್ಯಕ್ತಿಗಳ ಪ್ರತ್ಯೇಕತೆಯ ಬಗ್ಗೆ ಚರ್ಚಿಸುವುದು ಅಸಮಾಧಾನಕರ ವಿಚಾರ. ಸೆಲೆಬ್ರಿಟಿ ಎಂಬ ಕಾರಣಕ್ಕಾಗಿ, ಖಾಸಗಿ ಜೀವನದ ಬಗ್ಗೆ ಟೀಕೆ ಮಾಡುವುದು ಸೂಕ್ತವಲ್ಲ. ತಮ್ಮ ಹೇಳಿಕೆಗಳು ಇತರರಿಗೆ ನೋವುಂಟು ಮಾಡಬಹುದು ಎಂಬುದನ್ನು ಮರೆತು ಬಿಡುವಷ್ಟು ತಮಿಳು ಜನರು ಘನತೆ ಕಳೆದುಕೊಂಡಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ.

ತಮ್ಮ ಡಿವೋರ್ಸ್ ಬಗ್ಗೆ ಅಸಲಿ ಕಾರಣವನ್ನು ನಮ್ಮ ಸ್ನೇಹಿತರು ಮತ್ತು ಕುಟುಂಬಕ್ಕೆ ತಿಳಿಸಲಾಗಿದೆ. ನಾವು ಈ ನಿರ್ಧಾರ ಕೈಗೊಳ್ಳುವ ಮೊದಲು ಸಾಕಷ್ಟು ಯೋಚಿಸಿದ್ದೇವೆ. ನಿಮ್ಮ ಟೀಕೆಗಳು ನೋವುಂಟು ಮಾಡುತ್ತವೆ ಎಂಬುದನ್ನು ನಿಮಗೆ ತಿಳಿಸಲು ನಾನು ಈ ಬರಹವನ್ನು ಬರೆಯುತ್ತಿದ್ದೇನೆ. ದಯವಿಟ್ಟು ಎಲ್ಲರ ಭಾವನೆಗಳ ಬಗ್ಗೆ ಗಮನವಿರಲಿ. ಸಹಾಯಕ್ಕಾಗಿ ನಾನು ಎಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಅಂದಹಾಗೆ, ಬಾಲ್ಯದ ಗೆಳತಿ ಸೈಂಧವಿ (Saindhavi) ಜೊತೆ ಜಿ.ವಿ ಪ್ರಕಾಶ್ 2013ರಲ್ಲಿ ಮದುವೆಯಾದರು. ಈ ಜೋಡಿಗೆ ಅನ್ವಿ ಎಂಬ ಮಗಳಿದ್ದಾಳೆ. ಇದೇ ಮೇ 13ರಂದು ಡಿವೋರ್ಸ್ ಬಗ್ಗೆ ಸಂಗೀತ ನಿರ್ದೇಶಕ ಜಿ.ವಿ ಪ್ರಕಾಶ್ ಅಧಿಕೃತ ಮಾಹಿತಿ ನೀಡಿದ್ದರು.

Share This Article