11 ವರ್ಷಗಳ ದಾಂಪತ್ಯಕ್ಕೆ ಕೊನೆ ಹಾಡುತ್ತಿದ್ದೇವೆ; ಮ್ಯೂಸಿಕ್‌ ಡೈರೆಕ್ಟರ್ ಜಿ.ವಿ ಪ್ರಕಾಶ್

Public TV
1 Min Read

ಮಿಳಿನ ಖ್ಯಾತ ಸಂಗೀತ ನಿರ್ದೇಶಕ ಜಿ.ವಿ ಪ್ರಕಾಶ್ ಕುಮಾರ್ (G.v Prakash Kumar) ಅವರು ತಮ್ಮ 11 ವರ್ಷಗಳ ದಾಂಪತ್ಯ ಬದುಕಿಗೆ ಅಂತ್ಯ ಹಾಡಿದ್ದಾರೆ. ಡಿವೋರ್ಸ್ (Divorce) ಬಗ್ಗೆ ಮ್ಯೂಸಿಕ್ ಡೈರೆಕ್ಟರ್ ಜಿ.ವಿ ಪ್ರಕಾಶ್ ಅಧಿಕೃತ ಮಾಹಿತಿ ಬಿಚ್ಚಿಟ್ಟಿದ್ದಾರೆ.‌ ಇದನ್ನೂ ಓದಿ:ರಾಮ್ ಪೋತಿನೇನಿ ಅಭಿಮಾನಿಗಳಿಗೆ ಸಿಕ್ತು ಗುಡ್ ನ್ಯೂಸ್

ಸಾಕಷ್ಟು ಆಲೋಚಿಸಿ ನಾನು ಹಾಗೂ ಸೈಂಧವಿ (Saindhavi) ಬೇರೆ ಆಗುತ್ತಿದ್ದೇವೆ. 11 ವರ್ಷಗಳ ದಾಂಪತ್ಯಕ್ಕೆ ಕೊನೆ ಹಾಡುತ್ತಿದ್ದೇವೆ. ನಮ್ಮ ಮಾನಸಿಕ ಆರೋಗ್ಯಕ್ಕಾಗಿ ಈ ನಿರ್ಧಾರ ಎಂದು ಪ್ರಕಾಶ್ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ದಾಂಪತ್ಯ ಬದುಕಿನ ಬಿರುಕಿನ ಬಗ್ಗೆ ಹಲವು ದಿನಗಳಿಂದ ಸುದ್ದಿಯಾಗಿತ್ತು. ಈಗ ಅಧಿಕೃತ ಮಾಹಿತಿ ಹೊರಬಿದ್ದಿದೆ.

 

View this post on Instagram

 

A post shared by G.V.Prakash Kumar (@gvprakash)

ಈ ವೈಯಕ್ತಿಕ ಪರಿವರ್ತನೆಯ ಸಮಯದಲ್ಲಿ ನಮ್ಮ ಖಾಸಗಿತನಕ್ಕೆ ಬೆಲೆ ನೀಡಬೇಕು ಎಂದು ಮಾಧ್ಯಮಗಳು, ಸ್ನೇಹಿತರು ಮತ್ತು ಅಭಿಮಾನಿಗಳನ್ನು ನಾವು ದಯೆಯಿಂದ ಕೇಳುತ್ತೇವೆ. ನಾವು ಬೇರೆ ಬೇರೆ ಆಗಿ ಬೆಳೆಯುತ್ತಿದ್ದೇವೆ. ಇದು ಅತ್ಯುತ್ತಮ ನಿರ್ಧಾರ ಎಂದು ನಾವು ಭಾವಿಸುತ್ತೇವೆ. ಈ ಕಷ್ಟದ ಸಮಯದಲ್ಲಿ ನಿಮ್ಮ ತಿಳುವಳಿಕೆ ಮತ್ತು ಬೆಂಬಲವು ಮುಖ್ಯ ಎಂದು ಪ್ರಕಾಶ್ ಬರೆದುಕೊಂಡಿದ್ದಾರೆ.

ಪ್ರಕಾಶ್ ಕುಮಾರ್ ಅವರು ಎ.ಆರ್ ರೆಹಮಾನ್ ಅವರ ಸೋದರಳಿಯ. ಪ್ರಕಾಶ್ ಅವರು ಬಾಲ್ಯದ ಗೆಳೆತಿ ಸೈಂಧವಿ ಅವರನ್ನು 2013ರಲ್ಲಿ ಮದುವೆ ಆದರು. 2020ರಲ್ಲಿ ಈ ದಂಪತಿ ಹೆಣ್ಣು ಮಗುವನ್ನು ಕುಟುಂಬಕ್ಕೆ ಸ್ವಾಗತಿಸಿದರು. ಈಗ ದಾಂಪತ್ಯ ಬದುಕಿಗೆ ಈ ಜೋಡಿ ಕೊನೆ ಹಾಡಿದ್ದಾರೆ.

Share This Article