ಟೆನ್ನಿಸ್‌ ತಾರೆಯ ಕೊಲೆಗೆ ಸ್ಫೋಟಕ ಟ್ವಿಸ್ಟ್‌ – ಮ್ಯೂಸಿಕ್‌ ಆಲ್ಬಂಗೆ ಸಿಟ್ಟಾಗಿ ಮಗಳ ಹತ್ಯೆ?

Public TV
2 Min Read

– ತಂದೆಯಿಂದಲೇ ರಾಧಿಕಾ ಯಾದವ್‌ ಹತ್ಯೆ
– ಮ್ಯೂಸಿಕ್‌ ಆಲ್ಬಂ ಡೀಲಿಟ್‌ ಮಾಡುವಂತೆ ಸೂಚಿಸಿದ್ದ ತಂದೆ
– ಸಾಮಾಜಿಕ ಜಾಲತಾಣದಿಂದ ಡೀಲಿಟ್‌ ಮಾಡದ್ದಕ್ಕೆ ಸಿಟ್ಟು

ಚಂಡೀಗಢ: ಟೆನ್ನಿಸ್‌ ಆಟಗಾರ್ತಿಯಾಗಿದ್ದ ಮಗಳನ್ನು ತಂದೆಯೇ ಹತ್ಯೆಗೈದ ಪ್ರಕರಣಕ್ಕೆ ಈಗ ಸ್ಫೋಟಕ ಟ್ವಿಸ್ಟ್‌ ಸಿಕ್ಕಿದೆ. ಮ್ಯೂಸಿಕ್‌ ಆಲ್ಬಂ (Music Album) ವಿಚಾರದಲ್ಲಿ ಸಿಟ್ಟಾಗಿ ಮಗಳನ್ನು ತಂದೆಯೇ ಕೊಲೆ ಮಾಡಿದ್ದಾನಾ ಎಂಬ ಆಯಾಮದಲ್ಲಿ ಈಗ ತನಿಖೆ ಆರಂಭವಾಗಿದೆ.

ಟೆನ್ನಿಸ್ ಅಕಾಡೆಮಿಯನ್ನು (Tennis Academy) ಮುಚ್ಚಲು ನಿರಾಕರಿಸಿದಕ್ಕೆ ಮತ್ತು ರೀಲ್ಸ್‌ (Reels) ಹೆಚ್ಚು ನೋಡುತ್ತಿದ್ದಕ್ಕೆ ಸಿಟ್ಟಾಗಿ ಮಗಳು ರಾಧಿಕಾಳನ್ನು (Radhika Yadav) ತಂದೆ ದೀಪಕ್ ಯಾದವ್‌ ಹರಿಯಾಣದ ಗುರುಗ್ರಾಮದಲ್ಲಿರುವ ನಿವಾಸದಲ್ಲಿ ಗುಂಡಿಕ್ಕಿ ಹತ್ಯೆ ಮಾಡಿದ್ದ ಎಂಬ ವಿಚಾರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಬಂಧನಕ್ಕೆ ಒಳಗಾದ ದೀಪಕ್‌ ವಿಚಾರಣೆ ವೇಳೆ ಮತ್ತಷ್ಟು ವಿಚಾರಗಳು ಬೆಳಕಿಗೆ ಬಂದಿವೆ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಕಿರುತೆರೆ ನಟಿ ಶ್ರುತಿಗೆ ಮನೆಯಲ್ಲೇ ಚಾಕು ಇರಿದು ಕೊಲೆಗೆ ಯತ್ನ, ಪತಿ ಅರೆಸ್ಟ್‌

ಕೊಲೆಗೆ ಮ್ಯೂಸಿಕ್‌ ಆಲ್ಬಂ ಕಾರಣ?
ರಾಧಿಕಾ ಯಾದವ್‌ ʼಕರ್ವಾನ್ʼ ಹೆಸರಿನ ಮ್ಯೂಸಿಕ್‌ ಅಲ್ಬಂನಲ್ಲಿ ನಟಿಸಿದ್ದಳು. ಇದನ್ನು ಜೀಶನ್ ಅಹ್ಮದ್ ನಿರ್ಮಾಣ ಮಾಡಿದ್ದು ಸುಮಾರು ಒಂದು ವರ್ಷದ ಹಿಂದೆ LLF ರೆಕಾರ್ಡ್ಸ್ ಲೇಬಲ್ ಅಡಿಯಲ್ಲಿ ಬಿಡುಗಡೆ ಮಾಡಲಾಗಿದೆ. ಈ ವಿಡಿಯೋದಲ್ಲಿ ಇನಾಂ ಜೊತೆ ರಾಧಿಕಾ ಯಾದವ್‌ ಬಹಳ ರೊಮ್ಯಾಂಟಿಕ್‌ ಆಗಿ ಅಭಿನಯಿಸಿದ್ದಳು.

ಈ ಅಲ್ಬಂನಲ್ಲಿ ಈಕೆಯ ಪಾತ್ರಕ್ಕೆ ತಂದೆ ದೀಪಕ್‌ ಆಕ್ಷೇಪ ವ್ಯಕ್ತಪಡಿಸಿ ಡಿಲೀಟ್‌ ಮಾಡುವಂತೆ ಸೂಚಿಸಿದ್ದ. ಆದರೆ ರಾಧಿಕಾ ಯಾದವ್‌ ಯಾದವ್‌ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಿಂದ ಡಿಲೀಟ್‌ ಮಾಡಲು ಒಪ್ಪಿರಲಿಲ್ಲ. ಈ ವಿಚಾರಕ್ಕೆ ಸಂಬಂಧಿಸಿದಂತೆ ತಂದೆ ಮಗಳ ಜೊತೆ ಆಗಾಗ ಜಗಳ ನಡೆಯುತ್ತಿತ್ತು. ತನ್ನ ಮಾತನ್ನು ಎಷ್ಟು ಹೇಳಿದರೂ ಕೇಳದ್ದಕ್ಕೆ ಸಿಟ್ಟಾಗಿ ದೀಪಕ್‌ ಯಾದವ್‌ ಮಗಳನ್ನು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ದರ್ಶನ್‌ಗೆ ಮಾದರಿಯಾದ ಸಂಜು ಬಸಯ್ಯ ಪತ್ನಿಗೆ ಅಶ್ಲೀಲ ಮೆಸೇಜ್ ಕಳಿಸಿದವನಿಗೆ ಬುದ್ಧಿ ಹೇಳಿದ ನಟ

ಮಾಜಿ ಬ್ಯಾಂಕ್ ಉದ್ಯೋಗಿಯಾಗಿದ್ದ ದೀಪಕ್ ತನ್ನ ಮಗಳು ಸೆಕ್ಟರ್ 57 ರಲ್ಲಿ ತನ್ನದೇ ಆದ ಟೆನ್ನಿಸ್ ಅಕಾಡೆಮಿಯನ್ನು ತೆರೆದ ನಂತರ ಆಕೆಗೆ ಪ್ರಚಾರ ಹೆಚ್ಚು ಸಿಕ್ಕಿದ್ದಕ್ಕೆ ಅಸಮಾಧಾನಗೊಂಡಿದ್ದ. ಮಗಳು ಟೆನ್ನಿಸ್‌ ಅಕಾಡೆಮಿ ನಡೆಸುವುದು ದೀಪಕ್‌ಗೆ ಇಷ್ಟ ಇರಲಿಲ್ಲ. ಈ ಅಕಾಡೆಮಿಯನ್ನು ಮುಚ್ಚುವಂತೆ ತಂದೆ ಹೇಳಿದ್ದರೂ ಆಕೆ ಮುಚ್ಚಿರಲಿಲ್ಲ. ಈ ಮಧ್ಯೆ ಮಗಳು ಸಂಗೀತ ವೀಡಿಯೊದಲ್ಲಿ ಕಾಣಿಸಿಕೊಂಡಿದ್ದು ತಂದೆಗೆ ಮತ್ತಷ್ಟು ಸಿಟ್ಟು ಬಂದಿದೆ. ಈ ಕಾರಣಕ್ಕೆ ಗುರುವಾರ ಮನೆಯಲ್ಲಿ ರಾಧಿಕಾ ಅಡುಗೆ ಮಾಡುತ್ತಿದ್ದಾಗ ದೀಪಕ್‌ ಯಾದವ್‌ ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದಾನೆ ಎಂದು ವರದಿಯಾಗಿದೆ.

ರಾಧಿಕಾ ಯಾದವ್ ಭಾರತೀಯ ಟೆನಿಸ್‌ನಲ್ಲಿ ಉದಯೋನ್ಮುಖ ತಾರೆಯಾಗಿ ಹೊರಹೊಮ್ಮುತ್ತಿದ್ದಳು. ಮಾರ್ಚ್ 23, 2000 ರಂದು ಜನಿಸಿದ ಆಕೆ ನವೆಂಬರ್ 4, 2024 ರ ಹೊತ್ತಿಗೆ ಐಟಿಎಫ್ ಮಹಿಳಾ ಡಬಲ್ಸ್‌ನಲ್ಲಿ 113 ನೇ ಸ್ಥಾನ ಪಡೆಯುವ ಮೂಲಕ ವೃತ್ತಿಜೀವನದ ಉನ್ನತ ಶ್ರೇಯಾಂಕವನ್ನು ತಲುಪಿದ್ದಳು. ಹರಿಯಾಣದ ಮಹಿಳಾ ಡಬಲ್ಸ್ ಶ್ರೇಯಾಂಕದಲ್ಲಿ ಐದನೇ ಸ್ಥಾನವನ್ನು ಹೊಂದಿದ್ದಳು.

ಸ್ಕಾಟಿಷ್ ಹೈ ಇಂಟರ್ನ್ಯಾಷನಲ್ ಶಾಲೆಯ ಹಳೆಯ ವಿದ್ಯಾರ್ಥಿನಿಯಾಗಿದ್ದ ರಾಧಿಕಾ 2018 ರಲ್ಲಿ ವಾಣಿಜ್ಯದಲ್ಲಿ 12 ನೇ ತರಗತಿಯನ್ನು ಪೂರ್ಣಗೊಳಿಸಿದ್ದಳು. ಇತ್ತೀಚೆಗೆ ಮಕ್ಕಳಿಗೆ ತರಬೇತಿ ನೀಡಲು ಅಕಾಡೆಮಿಯನ್ನು ಪ್ರಾರಂಭಿಸಿದ್ದಳು.

Share This Article