ಶಾಮನೂರು ಕುಟುಂಬಸ್ಥರಿಗೆ ಮುರುಘಾ ಶ್ರೀ ಸಾಂತ್ವನ

1 Min Read

ದಾವಣಗೆರೆ: ಮುರುಘಾ ಶ್ರೀಗಳು (Muruga Shree) ಅಗಲಿದ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಬಳಿಕ ಶಾಮನೂರು ಕುಟುಂಬಸ್ಥರಿಗೆ ಶ್ರೀಗಳು ಸಾಂತ್ವನ ಹೇಳಿದ್ದಾರೆ.

ಈ ಬಗ್ಗೆ ಮಾಧ್ಯಮಗಳ ಜೊತೆ ಮುರುಘಾ ಶ್ರೀಗಳು ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಶಾಮನೂರು ಅಮೂಲ್ಯ ಕೊಡುಗೆ ನೀಡಿದ್ದಾರೆ. ಸಮಾಜ ಸಂಘಟನೆಗೆ ಉತ್ತಮ ಸೇವೆ ಸಲ್ಲಿಸಿದ್ದಾರೆ. ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದರು. ಇದನ್ನೂ ಓದಿ: ಶಾಮನೂರು ಅಂತ್ಯಕ್ರಿಯೆಗೆ ಸಿದ್ದಗಂಗಾ ಮಠದಿಂದ 100 ವಿಶೇಷ ವಿಭೂತಿ ಗಟ್ಟಿ

ಮುರುಘಾ ಶ್ರೀಗಳ ಜೊತೆ ಆಗಮಿಸಿ ಬಸವಪ್ರಭು ಸ್ವಾಮೀಜಿಗಳು ಸಹ ಅಂತಿಮ ದರ್ಶನ ಪಡೆದರು.

ಶಿವಶಂಕರಪ್ಪನವರ (Shamanuru Shivashankarappa) ಅಂತ್ಯಸಂಸ್ಕಾರ ಇಂದು ಸಂಜೆ ಕಲ್ಲೇಶ್ವರ ರೈಸ್ ಮಿಲ್‌ನಲ್ಲಿ ನಡೆಯಲಿದೆ. ವೀರಶೈವ ಲಿಂಗಾಯತ ಸಂಪ್ರದಾಯದಂತೆ ಪತ್ನಿ ಪಾರ್ವತಮ್ಮ ಸಮಾಧಿ ಪಕ್ಕದಲ್ಲೇ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆಗೆ ಸಿದ್ಧತೆ ನಡೆದಿದೆ. ಇದನ್ನೂ ಓದಿ: ತಂದೆಯನ್ನು ನೆನೆದು ಭಾವುಕರಾದ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್

Share This Article