ಬಿಜೆಪಿ ಮಣಿಪುರದಲ್ಲಿ ಭಾರತವನ್ನ, ಭಾರತ ಮಾತೆಯನ್ನ ಹತ್ಯೆ ಮಾಡಿದೆ: ಮೋದಿ ವಿರುದ್ಧ ರಾಹುಲ್‌ ಕಿಡಿ

Public TV
2 Min Read

ನವದೆಹಲಿ: ಸಂಸತ್ ಸದಸ್ಯತ್ವ ರದ್ದಾಗಿ ಮರುಸ್ಥಾಪನೆಯಾದ ಬಳಿಕ ಮೊದಲ ಬಾರಿಗೆ ಸಂಸತ್‌ನಲ್ಲಿ (Lok Sabha) ಭಾಷಣ ಮಾಡಿದ ರಾಹುಲ್ ಗಾಂಧಿ ಬಿಜೆಪಿ ಕೇಂದ್ರ ಸರ್ಕಾರದ ವಿರುದ್ಧ ಚಾಟಿ ಬೀಸಿದ್ದಾರೆ. ಬಿಜೆಪಿ (BJP) ಮಣಿಪುರದಲ್ಲಿ ಭಾರತವನ್ನ, ಭಾರತ ಮಾತೆಯನ್ನ ಹತ್ಯೆ ಮಾಡಿದೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಗಂಭೀರ ಆರೋಪ ಮಾಡಿದ್ದಾರೆ.

ಸಂಸತ್‌ ಸದಸ್ಯತ್ವ  ಮರಳಿ ಪಡೆದ ಬಳಿಕ 2ನೇ ದಿನ ಲೋಕಸಭೆಗೆ ಆಗಮಿಸಿದ ಸಂಸದ ರಾಹುಲ್‌ ಗಾಂಧಿ ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ್ದಾರೆ. ಈ ವೇಳೆ ಮಣಿಪುರ ವಿಚಾರವನ್ನ ತೆಗೆದುಕೊಂಡು ಪ್ರಧಾನಿ ಮೋದಿ (Narendra Modi) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ವೇಳೆ ಬಿಜೆಪಿ-ಕಾಂಗ್ರೆಸ್‌ ನಡುವೆ ಗದ್ದಲ ಏರ್ಪಟಿತು.

ಮಣಿಪುರ ಗಲಭೆಯನ್ನುದ್ದೇಶಿಸಿ (Maipur Violence) ಮಾತನಾಡಿದ ರಾಹುಲ್‌ ಗಾಂಧಿ, ನಾನು ಮಣಿಪುರಕ್ಕೆ ಭೇಟಿ ನೀಡಿದ್ದೇನೆ, ಅಲ್ಲಿನ ಸ್ಥಿತಿಗತಿಯನ್ನ ಗಮನಿಸಿದ್ದೇನೆ. ಆದ್ರೆ ಪ್ರಧಾನಿ ನರೇಂದ್ರ ಮೋದಿ ಒಮ್ಮೆಯೂ ಮಣಿಪುರಕ್ಕೆ ಭೇಟಿ ನೀಡಿಲ್ಲ. ಏಕೆಂದರೆ ಮೋದಿಗೆ ಮಣಿಪುರ ಭಾರತದ ಭಾಗ ಅಂತಾ ಮೋದಿಗೆ ಅನ್ನಿಸಿಯೇ ಇಲ್ಲ. ಮಣಿಪುರವನ್ನ ಎರಡು ಭಾಗವಾಗಿ ವಿಂಗಡಿಸಿದ್ದಾರೆ. ಭಾರತವನ್ನ ಮಣಿಪುರದಲ್ಲಿ ಹತ್ಯೆ ಮಾಡಿದ್ದಾರೆ ಎಂದು ತೀವ್ರ ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: 4ರ ಬಾಲಕಿ ಮೇಲೆ ಅತ್ಯಾಚಾರ: ಇದು ಮಾನವೀಯತೆ ಮೀರಿದ ಕ್ರೌರ್ಯ, ಕಾಮುಕರಿಗೆ ಕ್ಷಮೆಯಿಲ್ಲವೆಂದ ಸಚಿನ್‌ ಪೈಲಟ್‌

ಮುಂದುವರಿದು.. ನೀವು ಭಾರತ ಮಾತೆಯನ್ನೂ ಕೊಂದಿದ್ದೀರಿ. ನನ್ನ ಒಬ್ಬ ತಾಯಿ ಇಲ್ಲಿ ಕುಳಿತಿದ್ದರೆ, ಇನ್ನೊಬ್ಬ ತಾಯಿಯನ್ನ ಮಣಿಪುರದಲ್ಲಿ ಕೊಂದಿದ್ದೀರಿ. ಮನಸ್ಸು ಮಾಡಿದ್ರೆ ಭಾರತೀಯ ಸೇನೆ ಒಂದೇ ದಿನದಲ್ಲಿ ಮಣಿಪುರದಲ್ಲಿ ಶಾಂತಿ ನೆಲೆಸುವಂತೆ ಮಾಡಬಹುದು. ಆದ್ರೆ ಮೋದಿ ಸರ್ಕಾರ ಸೇನೆಯನ್ನ ಬಳಸುತ್ತಿಲ್ಲ. ನಮ್ಮ ಸೈನಿಕರು ಸಾಯಬೇಕು ಅಂತಾ ಬಯಸುತ್ತಿದೆ. ಭಾರತೀಯರ ಮನಸ್ಸನ್ನು ಅರ್ಥಮಾಡಿಕೊಳ್ಳದ ಮೋದಿ ಇನ್ನಾರ ಧ್ವನಿಗೆ ಕಿವಿಗೊಡುತ್ತಾರೆ? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ರಿಲಯನ್ಸ್‌ ಹಿಂದಿಕ್ಕಿ ಲಾಭಾಂಶದಲ್ಲಿ ದೇಶದಲ್ಲಿ ನಂ.1 ಕಂಪನಿಯಾಗಿ ಹೊರಹೊಮ್ಮಿದ ಎಸ್‌ಬಿಐ

ಮಣಿಪುರದಲ್ಲಿ ಜನಾಂಗೀಯ ಘರ್ಷಣೆಯಿಂದ 160ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಹರಿಯಾಣದಲ್ಲೂ ಅದೇ ಕೆಲಸ ಮಾಡುತ್ತಿದ್ದೀರಿ. ಅಲ್ಲಿಯೂ ಕೋಮು ಘರ್ಷಣೆಯಲ್ಲಿ 6 ಮಂದಿ ಸಾವನ್ನಪ್ಪಿದ್ದಾರೆ ಎಂದರು. ಇದೇ ವೇಳೆ ರಾಮಾಯಣ ಮಹಾಕಾವ್ಯ ಪ್ರಸ್ತಾಪಿಸಿದ ರಾಹುಲ್‌ ಗಾಂಧಿ, ಲಂಕೆಯನ್ನ ಹನುಮಂತ ಸುಟ್ಟುಹಾಕಲಿಲ್ಲ. ರಾವಣದ ದುರಹಂಕಾರದಿಂದ ಸುಟ್ಟಹೋಯ್ತು. ರಾವಣ ತನ್ನ ದುರಹಂಕಾರದಿಂದಲೇ ರಾಮನಿಂದ ಹತ್ಯೆಯಾದ ಇದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ತಿರುಗೇಟು ನೀಡಿದರು.

ಈ ವೇಳೆ ರಾಹುಲ್‌ ಗಾಂಧಿ ಅವರ ಭಾಷಣಕ್ಕೆ ತಕರಾರು ತೆಗೆದ ಬಿಜೆಪಿ ಸಂಸದ ಕಿರಣ್‌ ರಿಜಿಜು, ಈಶಾನ್ಯ ರಾಜ್ಯಗಳಲ್ಲಿ ಕಾಂಗ್ರೆಸ್‌ ಏನು ಮಾಡಿದೆ? ಎಂದು ಪ್ರಶ್ನಿಸಿದರು. ಈ ನಡುವೆ ಸ್ಪೀಕರ್‌ ಓಂ ಬಿರ್ಲಾ ಅವರು ಸಜ್ಜನಿಕೆ ಕಾಯ್ದುಕೊಳ್ಳುವಂತೆ ಸೂಚಿಸಿದ್ದರಿಂದ ಗದ್ದಲ ಉಂಟಾಯಿತು.

ಕ್ಷಮೆ ಕೋರಿದ ರಾಹುಲ್‌ ಗಾಂಧಿ:
ಸಂಸತ್‌ ಮರು ಪ್ರವೇಶಿಸಿದ ಮೊದಲ ಭಾಷಣದಲ್ಲಿ ರಾಹುಲ್‌ ಕ್ಷಮೆ ಕೋರಿದರು. ನಾನು ಕೊನೆಯಬಾರಿ ಮಾತನಾಡುವಾಗ ಅದಾನಿ ಬಗ್ಗೆ ಮಾತನಾಡಿದ್ದರಿಂದ ನಿಮ್ಮ ಹಿರಿಯ ನಾಯಕನಿಗೆ ನೋವಾಗಿದೆ. ಆ ನೋವು ನಿಮ್ಮ ಮೇಲೂ ಪರಿಣಾಮ ಬೀರಿರಬಹುದು. ನೋವುಟುಂಮಾಡಿದ್ದಕ್ಕಾಗಿ ಕ್ಷಮೆಯಾಚಿಸುತ್ತೇನೆ. ಆದಾಗ್ಯೂ ನಾನು ಸತ್ಯವನ್ನೇ ಹೇಳಿದ್ದೇನೆ. ಆದ್ರೆ ಬಿಜೆಪಿಯಲ್ಲಿರುವ ನನ್ನ ಸ್ನೇಹಿತರಿಗೆ ಹೇಳುತ್ತೇನೆ. ಇಂದು ಭಯ ಪಡೋದಕ್ಕೆ ಯಾವುದೇ ಕಾರಣಗಳಿಲ್ಲ. ಏಕೆಂದರೆ ನನ್ನ ಮುಖ್ಯ ಭಾಷಣ ಅದಾನಿ ಬಗ್ಗೆ ಇರುವುದಿಲ್ಲ ಎಂದು ಕುಟುಕಿದರು.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್