ಯಾದಗಿರಿ: ಸೆಕ್ಸ್‌ಗೆ ಒಪ್ಪದಿದ್ದಕ್ಕೆ ಪತ್ನಿಯನ್ನು ಭೀಕರವಾಗಿ ಪತಿಯೇ ಕೊಲೆಗೈದಿರುವ ಘಟನೆ ಯಾದಗಿರಿ (Yadgiri) ಜಿಲ್ಲೆಯ ಸುರಪುರ (Surpura) ತಾಲೂಕಿನ ಡೊಣ್ಣೆಗೇರಾದಲ್ಲಿ ನಡೆದಿದೆ.
ಮರೆಮ್ಮ (25) ಮೃತ ಮಹಿಳೆ. ರಾತ್ರಿ ಮಲಗಿದ್ದಾಗ ಕುತ್ತಿಗೆಗೆ ಕೊಡಲಿಯಿಂದ ಕೊಚ್ಚಿ ಪತಿ ಸಂಗಪ್ಪ ಕೊಲೆ ಮಾಡಿದ್ದಾನೆ.ಇದನ್ನೂ ಓದಿ: 700 ವರ್ಷಗಳ ಹಿಂದಿನ ಕಥೆಗೆ ಶ್ರೀಮುರಳಿ ನಾಯಕ: ಹೊಸ ಚಿತ್ರಕ್ಕೆ ಮುಹೂರ್ತ
ಗಂಡ ಸರಿಯಾಗಿ ನೋಡಿಕೊಳ್ಳದ ಕಾರಣ ಒಂದು ವರ್ಷದ ಹಿಂದೆಯೇ ಮೃತ ಮಹಿಳೆ ಮರೆಮ್ಮ ಗಂಡನ ಮನೆ ತೊರೆದು ತವರು ಮನೆಗೆ ಬಂದಿದ್ದಳು. ಆದರೂ ಆಗಾಗ ಹೆಂಡತಿ ಹಾಗೂ ಗಂಡನ ನಡುವೆ ಜಗಳವಾಗುತ್ತಿತ್ತು. ಘಟನೆ ನಡೆದ ಎರಡು ದಿನಗಳ ಹಿಂದೆ ಪತಿ ಸಂಗಪ್ಪ ಕಕ್ಕೇರಾದಿಂದ ಹೆಂಡತಿ ಮನೆಗೆ ಬಂದಿದ್ದ. ಈ ವೇಳೆ ರಾತ್ರಿ ಮಲಗಿದ್ದಾಗ ಹೆಂಡತಿ ಕುತ್ತಿಗೆ ಭಾಗಕ್ಕೆ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.
ಕೊಲೆ ನಂತರ ಕೊಡಲಿ ಸಮೇತ ಸುರಪುರ (Surapura) ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಸ್ಥಳಕ್ಕೆ ಸುರಪುರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಗಂಡನ ಜೊತೆ ಮಲಗಲು ಹೆಂಡತಿ ನಿರಾಕರಿಸಿದ್ದಕ್ಕೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಘಟನೆ ಸಂಬಂಧ ಕೇಸ್ ದಾಖಲಾಗಿದೆ.ಇದನ್ನೂ ಓದಿ: ವೀರಶೈವ-ಲಿಂಗಾಯತರು ಹಾಳಾದ್ರೆ ಇಡೀ ರಾಜ್ಯವೇ ಹಾಳಾಗುತ್ತೆ: ಈಶ್ವರ್ ಖಂಡ್ರೆ