ಹಳೇ ದ್ವೇಷಕ್ಕೆ ಹರಿದ ನೆತ್ತರು – ಜೊತೆಯಲ್ಲೇ ಕುಡಿದು ಸ್ನೇಹಿತನ ಕೊಲೆ

Public TV
1 Min Read

ಬೆಂಗಳೂರು: ಹಳೆಯ ದ್ವೇಷಕ್ಕೆ ಮತ್ತೆ ನೆತ್ತರು ಹರಿದಿದೆ. ಜೊತೆಯಲ್ಲೇ ಕುಡಿದು ಸ್ನೇಹಿತನನ್ನೇ ಹತ್ಯೆಗೈದಿರುವ ಘಟನೆ ಬೆಂಗಳೂರಿನ (Bengaluru) ಸ್ಯಾಟಲೈಟ್‌ ಬಸ್‌ ನಿಲ್ದಾಣದ (Satellite Bus Stand) ಬಳಿಯ ಬಾರ್ ಒಳಗೆ ನಡೆದಿದೆ.

25 ವರ್ಷದ ಯೋಗೆಂದ್ರ ಸಿಂಗ್ ಕೊಲೆಯಾದ ವ್ಯಕ್ತಿ. ಈತ ಕಸ್ತೂರಿ ನಗರದ ನಿವಾಸಿ. 28 ವರ್ಷದ ಉಮೇಶ್‌ ಕೊಲೆ ಆರೋಪಿಯಾಗಿದ್ದಾನೆ. ಸ್ಯಾಟಲೈಟ್ ನಿಲ್ದಾಣದ ಬಳಿಯ ಕಲಾ ವೈನ್ಸ್ ಬಾರ್ ಒಳಗೆ ಕೊಲೆ ನಡೆದಿದೆ. ಘಟನೆಗೆ ಹಳೆಯ ದ್ವೇಷ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ. ಜೊತೆಯಲ್ಲೇ ಕುಡಿಯುತ್ತಿದ್ದ ಸ್ನೇಹಿತನಿಂದಲೇ ಘಟನೆ ನಡೆದಿದೆ. ಇದನ್ನೂ ಓದಿ: ಮುಂಬೈನಿಂದ ನ್ಯೂಯಾರ್ಕ್‌ಗೆ ಹೊರಟಿದ್ದ ಏರ್‌ ಇಂಡಿಯಾ ವಿಮಾನಕ್ಕೆ ಬಾಂಬ್‌ ಬೆದರಿಕೆ

ಸದ್ಯ ಕೊಲೆ ಆರೋಪಿಯನ್ನು ಬಂಧಿಸಿರುವ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಬಾಬಾ ಸಿದ್ದಿಕಿ ಹತ್ಯೆ ಕೇಸ್‌ | ಆರೋಪಿ ಧರ್ಮರಾಜ್ ಕಶ್ಯಪ್‌ ಅಪ್ರಾಪ್ತನಲ್ಲ – ಮೂಳೆ ಪರೀಕ್ಷೆಯಲ್ಲಿ ಸಾಬೀತು

ಈ ಕುರಿತು ಮಾಹಿತಿ ನೀಡಿರುವ ಪಶ್ಚಿಮ ವಿಭಾಗ ಡಿಸಿಪಿ ಗಿರೀಶ್, ರಾತ್ರಿ 10.45ರ ಸುಮಾರಿಗೆ ಘಟನೆ ನಡೆದಿದೆ. ಆರೋಪಿ ಮತ್ತು ಕೊಲೆಯಾದವನು ಪರಸ್ಪರ ಸ್ನೇಹಿತರು. ಇಬ್ಬರು ಕುಡಿದ ಮತ್ತಿನಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ. ಹಳೇ ಜಗಳದ ವಿಚಾರದ ತೆಗೆದು ಗಲಾಟೆಯಾಗಿದೆ. ಉಮೇಶ್‌ ಬಾಟಲ್‌ನಿಂದ ಕತ್ತಿಗೆ ಚುಚ್ಚಿ ಕೊಲೆ ಮಾಡಿದ್ದಾನೆ. ಬಳಿಕ ಆರೋಪಿಯನ್ನ ಬಂಧಿಸಿ ತನಿಖೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆ ವಾಪಸ್‌ – ಹೊಸ ಸರ್ಕಾರ ರಚನೆಗೆ ಅಸ್ತು

Share This Article