ಬೆಂಗಳೂರು: ಬೈರತಿ ಬಸವರಾಜ್ (Byrati Basavaraj) ವಿರುದ್ಧ ಕೊಲೆ ಕೇಸ್, ಎಫ್‌ಐಆರ್ ದಾಖಲಾಗಿದ್ದಕ್ಕೆ ಬಿಜೆಪಿ (BJP) ನಾಯಕರು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಕೇಂದ್ರ ಸಚಿವ ವಿ ಸೋಮಣ್ಣ, ಬೈರತಿ ಬಸವರಾಜ್ ಆರೋಪಿಯೇ ಹೊರತು ಅಪರಾಧಿ ಅಲ್ಲ. ಅವರು ಆ ತರಹದ ಅವಿವೇಕದ ಕೆಲಸ ಮಾಡೋರಲ್ಲ. ಇಷ್ಟು ಕೀಳುತನಕ್ಕೆ ಇಳಿಯಲ್ಲ. ಇದು ಸುಳ್ಳು ಕೇಸ್, ಅವರು ನಿರ್ದೋಷಿಯಾಗಿ ಹೊರಗೆ ಬರುತ್ತಾರೆ ಅನ್ನೋ ವಿಶ್ವಾಸ ಇದೆ. ಕಾನೂನು ಮೀರಿ ಒಬ್ಬ ಜನಪ್ರತಿನಿಧಿಗೆ ಸರ್ಕಾರ ತೊಂದರೆ ಕೊಡಬಾರದು. ಹೊಟ್ಟೆಕಿಚ್ಚಿಗೋಸ್ಕರ ಬೈರತಿ ಮೇಲೆ ಗೂಬೆ ಕೂರಿಸಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: Uttar Pradesh | ಸ್ಕೂಲ್ ವ್ಯಾನ್‌ನಲ್ಲಿ 4 ವರ್ಷದ ಬಾಲಕಿ ಮೇಲೆ ರೇಪ್ – ಡ್ರೈವರ್ ಬಂಧನ
ಇನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬೈರತಿ ಬಸವರಾಜ್ ಅವರನ್ನು ಉದ್ದೇಶಪೂರ್ಕವಾಗಿ ಸಿಲುಕಿಸಲು ಎರಡೆರಡು ಎಫ್‌ಐಆರ್ ಹಾಕಿದ್ದಾರೆ. ಇದು ಸರ್ಕಾರದ ಮಸಲತ್ತು. ಮೊದಲ ಕಾಪಿಯಲ್ಲಿ ಬೈರತಿ ಬಸವರಾಜ್ ಹೆಸರಿಲ್ಲ. ಎರಡನೇ ಎಫ್‌ಐಆರ್‌ನಲ್ಲಿ ವಿಜಯಲಕ್ಷ್ಮಿ ಅವರು ಬೈರತಿ ಬಸವರಾಜ್ ಹೆಸರು ಹೇಳಿದ್ದಾರೆ ಎಂದು ಪೊಲೀಸರು ಬರೆದುಕೊಂಡಿದ್ದಾರೆ. ಒಂದೇ ಠಾಣೆಯಲ್ಲಿ ಎರಡೆರಡು ಎಫ್‌ಐಆರ್ ಹೇಗೆ ದಾಖಲಾದವು? ಯಾಕೆ ದಾಖಲಾಯಿತು? ಇದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಬೆಂಗಳೂರಿನ ಈ ಭಾಗದಲ್ಲಿ ಜು.21, 22ರಂದು ವಿದ್ಯುತ್ ವ್ಯತ್ಯಯ
ಇನ್ನು ಛಲವಾದಿ ನಾರಾಯಣಸ್ವಾಮಿ ಮಾತಾಡಿ, ಕಾಂಗ್ರೆಸ್‌ನಿಂದ ಟಾರ್ಗೆಟ್ ರಾಜಕಾರಣ ನಡೆಯುತ್ತಿದೆ. ಪೊಲೀಸರು ಗುಲಾಮಗಿರಿ ಮಾಡುತ್ತಿದ್ದಾರೆ. ಹತ್ಯೆ ಆದವನ ತಾಯಿಯೇ ಶಾಸಕರ ಪಾತ್ರ ಇಲ್ಲ ಎಂದಿದ್ದಾರೆ. ಹೀಗಿದ್ದ ಮೇಲೆ ಈ ಎಫ್‌ಐಆರ್ ಏಕೆ? ಜೊತೆಯಲ್ಲಿ ಆರೋಪಿಗಳ ಪೋಟೋ ಇದೆ ಎಂದಾಕ್ಷಣಕ್ಕೆ ಅವರು ಆಪ್ತರಾ? ಕಲಬುರಗಿಯ ಡ್ರಗ್ಸ್ ಕೇಸ್ ಆರೋಪಿ ಸಚಿವ ಪ್ರಿಯಾಂಕ್ ಖರ್ಗೆ ಜೊತೆ ಪೋಟೋ ತೆಗೆಸಿಕೊಂಡಿದ್ದಾನೆ. ಅಲ್ಲಿ ಎಫ್‌ಐಆರ್ ಆಗಿದ್ಯಾ? ಯಾಕೆ ಹೀಗೆ? ಅಧಿಕಾರ ಶಾಶ್ವತ ಅಲ್ಲ. ನಾವೂ ಹಲವು ಬದಲಾವಣೆಗಳನ್ನ ನೋಡಿದ್ದೇವೆ. ಇವತ್ತು ನೀವು, ನಾಳೆ ನಾವು ಅಧಿಕಾರಕ್ಕೆ ಬಂದೇ ಬರುತ್ತೇವೆ ಎಂದು ಹರಿಹಾಯ್ದರು. ಇದನ್ನೂ ಓದಿ: ಟೇಕಾಫ್ ಆಗಿ 16 ನಿಮಿಷಕ್ಕೆ ಲ್ಯಾಂಡ್ ಆಯ್ತು ಏರ್ ಇಂಡಿಯಾ ವಿಮಾನ