50 ದಿನ ಪ್ರೀತಿಸಿದ್ದ ಅಕ್ಷತಾ-ರಾಕಿ ಬ್ರೇಕಪ್ ಆಗಿದ್ದೇಕೆ? ಮುರಳಿ ಉತ್ತರ ಹೀಗಿತ್ತು

Public TV
2 Min Read

ಬೆಂಗಳೂರು: 15 ವಿವಿಧ ಮನಸ್ಸುಗಳನ್ನು ಒಂದೇ ಮನೆಯಲ್ಲಿರಿಸುವುದು. ಬಾಹ್ಯ ಜಗತ್ತಿನೊಂದಿಗೆ ಸಂಪರ್ಕವಿಲ್ಲದೆ ಅಲ್ಲಿರುವ ವಿಭಿನ್ನ ಜನರೊಂದಿಗೆ ಜೀವನ ನಡೆಸುವ ರಿಯಾಲಿಟಿ ಶೋ ಬಿಗ್‍ಬಾಸ್. ಈ ಕಾರ್ಯಕ್ರಮ ಹಿಂದಿ, ತಮಿಳು, ತೆಲುಗು ಮತ್ತು ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಮೂಡಿಬರುತ್ತಿದ್ದು, ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಕನ್ನಡದ ಬಿಗ್‍ಬಾಸ್ ಸಹ 6ನೇ ಆವೃತ್ತಿಯ ಅಂತಿಮ ಘಟ್ಟಕ್ಕೆ ತಲುಪಿದೆ. ಶೋ ಆರಂಭವಾದಗಿನಿಂದಲೂ ಮನೆಯಲ್ಲಿರುವ ಅಕ್ಷತಾ ಪಾಂಡವಪುರ ಮತ್ತು ಎಂ.ಜೆ.ರಾಕೇಶ್ ಇಬ್ಬರ ಪ್ರೇಮ ಕಹಾನಿ ಬಹು ಜನರನ್ನು ಆಕರ್ಷಿಸಿತ್ತು.

ಆರಂಭದ 50 ದಿನಗಳಲ್ಲಿ ಇಬ್ಬರ ಮಧ್ಯೆ ಪ್ರೀತಿ ಇತ್ತು ಎಂಬುದನ್ನು 11ನೇ ವಾರ ಮನೆಯಿಂದ ಹೊರ ಬಂದಿರುವ ಮುರಳಿ ಸಹ ಒಪ್ಪಿಕೊಳ್ಳುತ್ತಾರೆ. ಪಬ್ಲಿಕ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಕೆಲವು ವಿಚಾರಗಳನ್ನು ಹೊರಹಾಕಿರುವ ಮುರಳಿ, ಕೆಲ ಸ್ಪರ್ಧಿಗಳ ವರ್ತನೆ ಮತ್ತು ನಡವಳಿಕೆ ಬಗ್ಗೆ ಅಸಮಾಧಾನವನ್ನು ಹೊರಹಾಕಿದ್ದಾರೆ. ಅಕ್ಷತಾ ಬಗ್ಗೆ ಮಾತನಾಡುತ್ತಾ ಆಕೆ ಹುಡುಗಿ ಅಲ್ಲ ಹೆಂಗಸು ಎಂದು ಮಾತು ಆರಂಭಿಸಿದ ಮುರಳಿ, ಆಕೆ ಮಾಡ್ತೀರೋದು ಸರಿ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದರು. ಇದನ್ನೂ ಓದಿ:  ಅಮ್ಮ ರಾಕಿಯನ್ನ ಮಾತಾಡ್ಸು-ತಾಯಿ ಬಳಿ ಅಕ್ಷತಾ ಮನವಿ

ಬ್ರೇಕಪ್ ಆಗಿದ್ದೇಕೆ?
ಮೊದಲ 50 ದಿನ ಇಬ್ಬರು ಜೊತೆಯಾಗಿ ಹೆಚ್ಚು ಸಮಯ ಕಳೆಯುತ್ತಿದ್ದರು. ಒಂದು ವಾರ ರಾಕೇಶ್ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾಗ ಬಿಗ್‍ಬಾಸ್ ಅಧಿಕಾರ ನೀಡಿತ್ತು. ನಾಮಿನೇಟ್ ಆಗಿರುವ ಸ್ಪರ್ಧಿಗಳಲ್ಲಿ ಒಬ್ಬರನ್ನು ಸೇವ್ ಮಾಡಬಹುದು ಎಂದು ಹೇಳಿತ್ತು. ಆ ವಾರ ನಾಮಿನೇಟ್ ಆದವರಲ್ಲಿ ಅಕ್ಷತಾ ಮತ್ತು ಮುರಳಿ ಸಹ ಇದ್ದರು. ಎಲ್ಲರೂ ಅಕ್ಷತಾಳನ್ನು ರಾಕೇಶ್ ಸೇವ್ ಮಾಡುತ್ತಾನೆ ಅಂದುಕೊಂಡಿದ್ದರು. ಆದ್ರೆ ಈ ಮನೆಗೆ ಮುರಳಿ ಅವರು ಅವಶ್ಯವಾಗಿದ್ದರು. ಹಾಗಾಗಿ ಮುರಳಿ ಅವರನ್ನು ಸೇವ್ ಮಾಡ್ತೀನಿ ಅಂತಾ ಹೇಳಿದ್ದರಿಂದ ಸಹಜವಾಗಿಯೇ ಅಕ್ಷತಾಗೆ ಬೇಸರವಾಯ್ತು ಅಂತಾ ಮುರಳಿ ಹೇಳಿದರು. ಇದನ್ನೂ ಓದಿ: ಬಿಗ್‍ಬಾಸ್ ಸ್ಪರ್ಧಿಗಳ ರಹಸ್ಯ ಬಿಚ್ಚಿಟ್ಟ ಮುರಳಿ

ಇದಕ್ಕೂ ಮೊದಲು ಜೋಡಿ ನಾಮಿನೇಷನ್ ವೇಳೆ ಅಕ್ಷತಾ ತಾನು ನಾಮಿನೇಟ್ ಆಗುವ ಮೂಲಕ ರಾಕಿಯನ್ನು ಸೇವ್ ಮಾಡಿದ್ದಳು. ಒಂದು ರೀತಿ ಇಬ್ಬರ ಬ್ರೇಕಪ್ ಗೆ ನಾನೇ ಕಾರಣ ಅಂತ ಹೇಳಿ ಮುರಳಿ ನಕ್ಕರು. ಇದನ್ನೂ ಓದಿ:  ರಾಕೇಶ್ ಕೊಟ್ಟ ಗಿಫ್ಟನ್ನು ಲೈಟ್ ಆಫ್ ಆದ್ಮೇಲೆ ಪಡೆದ ಅಕ್ಷತಾ

ದಿನವಿಡೀ ರಾಕೇಶ್ ಮತ್ತು ಅಕ್ಷತಾ ಜಗಳ ಆಡುತ್ತಾರೆ. ಬಿಗ್‍ಬಾಸ್ ಮನೆಯ ಲೈಟ್ ಆಫ್ ಆದಾಗ ಮಾತನಾಡಲು ಶುರು ಮಾಡುತ್ತಾರೆ. ಕೆಲವರು ತಮ್ಮ ಮುಖಕ್ಕೆ ತಾವೇ ಬಣ್ಣ ಬಳಿದುಕೊಂಡು ಆಟ ಆಡುತ್ತಿದ್ದಾರೆ. ಆದ್ರೆ ಮನೆಯಿಂದ ಹೊರ ಬಂದ ಮೇಲೆ ಜಗತ್ತು ಅದೇ ಬಣ್ಣವನ್ನು ನಂಬುತ್ತೆ. ಅಷ್ಟು ಬೇಗ ತಾವಾಗಿಯೇ ಹಾಕಿಕೊಂಡ ಬಣ್ಣವನ್ನು ತಾವೇ ಬೇಡ ಅಂದರೂ ಕಳಚಲ್ಲ. ರಿಯಲ್ ಮತ್ತು ರಿಯಾಲಿಟಿಗೂ ತುಂಬಾನೇ ವ್ಯತ್ಯಾಸವಿದೆ ಎಂಬುದನ್ನು ಅಲ್ಲಿರುವವರು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಮುರಳಿ ಹೇಳಿದ್ದಾರೆ. ಇದನ್ನೂ ಓದಿ: ರಾಕೇಶ್ ಮೇಲೆ ಗುಡುಗಿದ ಅಕ್ಷತಾ – ಮೋಸ ಹೋದೆ ಎಂದು ಬಾತ್‍ರೂಮಿನಲ್ಲಿ ಚೀರಾಟ

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *