ಕಾಂಗ್ರೆಸ್‍ನಲ್ಲಿ ಮನೆಯೊಂದು ನೂರಾರು ಬಾಗಿಲು: ಮುನಿಸ್ವಾಮಿ ವ್ಯಂಗ್ಯ

By
1 Min Read

ಕೋಲಾರ: ಕಾಂಗ್ರೆಸ್‍ನಲ್ಲಿ (Congress) ಮನೆಯೊಂದು ನೂರಾರು ಬಾಗಿಲಾಗಿದೆ ಎಂದು ಕೋಲಾರದಲ್ಲಿ ಸಂಸದ ಮುನಿಸ್ವಾಮಿ (Muniswamy) ಲೇವಡಿ ಮಾಡಿದ್ದಾರೆ.

ಕಾಂಗ್ರೆಸ್‍ನಲ್ಲಿ ಒಂದು ಟೀಮ್ 20 ಜನರನ್ನ ಕರೆದುಕೊಂಡು ಒಂದು ಕಡೆ ಹೋದರೆ, ಇನ್ನೊಂದು ಟೀಂ ಹತ್ತು ಜನರನ್ನು ಕರೆದುಕೊಂಡು ಮತ್ತೊಂದು ಕಡೆ ಹೋಗುತ್ತಿದೆ. ಒಂದಷ್ಟು ಜನ ಮೂವರನ್ನು ಡಿಸಿಎಂ ಮಾಡಬೇಕು ಎಂದು ಎನ್ನುತ್ತಿದೆ. ಮತ್ತೊಂದು ಕಡೆ ಸಿಎಂನ್ನೇ ಬದಲಿಸಬೇಕು ಎನ್ನುತ್ತಿದೆ. ರಾಜ್ಯದ ಜನ ಈ ಬೆಳವಣಿಗೆಯನ್ನು ಕಂಡು ಬೇಸತ್ತಿದ್ದಾರೆ ಎಂದರು. ಇದನ್ನೂ ಓದಿ: ಶಿವಾನಂದ ಪಾಟೀಲ್ ಕಾಲಡಿಯಲ್ಲೇ ರಾಶಿ ರಾಶಿ ನೋಟುಗಳು – ಸಚಿವರೇ ಏನಿದು?

ಪಂಚರಾಜ್ಯಗಳಿಗೆ ನೀಡುತ್ತಿರುವ ಹಣ ಗುತ್ತಿಗೆದಾರರಿಂದ ಸಂಗ್ರಹಿಸಲಾಗುತ್ತಿದೆ. ಹಣ ನೀಡುವ ಸಲುವಾಗಿ ಗುತ್ತಿಗೆದಾರರಿಂದ 50%, 60% ಹಣ ಸಂಗ್ರಹಿಸುತ್ತಿದ್ದಾರೆ. ಹೀಗಿದ್ದರೂ ಬಿಜೆಪಿ ಮೇಲೆ ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಇದೀಗ ಸಿದ್ದರಾಮಯ್ಯ (Siddaramaiah) ಹಾಗೂ ಡಿಕೆಶಿ (DK Shivakumar) ಅವರ ಕೈಗೊಂಬೆಯಾಗಿರುವ ಕೆಂಪಣ್ಣ ಕೂಡ ಕಾಂಗ್ರೆಸ್ ವಿರುದ್ಧ ಗುಡುಗಿದ್ದಾರೆ. ಸರ್ಕಾರ ವಸೂಲಿಗೆ ಇಳಿದಿದೆ, ಇದರ ಏಜೆಂಟ್ ಆಗಿ ಸುರ್ಜೇವಾಲಾ ಅವರು ಐದು ರಾಜ್ಯಗಳಿಗೆ ಹಣ ಕಳಿಸುತ್ತಿದ್ದಾರೆ. ಈ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಿನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಈಗಿನ ಕಾಂಗ್ರೆಸ್ ಸರ್ಕಾರ 90% ಕಮಿಷನ್ ಸರ್ಕಾರ ಆಗಿದೆ. ಪೇ ಸಿಎಂ, ಪೇ ಡಿಸಿಎಂ, ಪೇ ಸುರ್ಜೇವಾಲಾ, ಪೇ ಕಾಂಗ್ರೆಸ್ ವಿರುದ್ಧ ಅವರದ್ದೇ ಪಕ್ಷದ ಸಚಿವರು ಶಾಸಕರು ಸಿಡಿದೆದ್ದಿದ್ದಾರೆ. ಹೀಗಾಗಿ ಒಂದೇ ಒಂದು ದಿನ ಇವರು ಅಧಿಕಾರದಲ್ಲಿ ಇರುವುದಕ್ಕೆ ನಾಲಾಯಕ್ ಎಂದಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಡಿಕೆಶಿ ಲ್ಯಾಂಡ್ – ಸ್ವಾಗತಕ್ಕೆ ಬಾರದ ಶಾಸಕರು, ಸಚಿವರು

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್