ತೆರಿಗೆ ಹಣ ದಾನ ಮಾಡಿ ರಾಜ್ಯ ಅಭಿವೃದ್ಧಿಯಾಗದಂತೆ ಮಾಡಿದ್ದಾರೆ: ಕಾಂಗ್ರೆಸ್ ವಿರುದ್ಧ ಮುನಿರತ್ನ ಕಿಡಿ

Public TV
2 Min Read

ತುಮಕೂರು: ಕಾಂಗ್ರೆಸ್ (Congress) ತೆರಿಗೆ ಹಣ ದಾನ ಮಾಡಿ ರಾಜ್ಯ ಅಭಿವೃದ್ಧಿಯಾಗದಂತೆ ಮಾಡಿದ್ದಾರೆ ಎಂದು ಶಾಸಕ ಮುನಿರತ್ನ  (Munirathna) ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

ತುಮಕೂರಿನಲ್ಲಿ (Tumakuru) ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್‌ನವರು ಕೇಂದ್ರ ಸರ್ಕಾರ ಹಣ ಕೊಟ್ಟಿಲ್ಲ ಎಂದು ಚುನಾವಣೆಗೋಸ್ಕರ ನಾಟಕ ಮಾಡುತ್ತಿದ್ದಾರೆ. ಗ್ಯಾರಂಟಿಗಳ ರೂಪದಲ್ಲಿ 52,000 ಕೋಟಿ ರೂ. ಸಾರ್ವಜನಿಕ ತೆರಿಗೆ ಹಣವನ್ನು ಕೊಟ್ಟು ಪೋಲು ಮಾಡಿದ್ದಾರೆ. ಈಗ ಪದೇ ಪದೇ ಹಣ ಕೇಳಿಕೊಂಡು ಇವರು ಕೇಂದ್ರಕ್ಕೆ ಹೋಗ್ತಾರೆ. ತೆರಿಗೆ ಹಣವನ್ನು ದಾನ ಮಾಡೋ ಮುಂಚೆ ಯೋಚನೆ ಮಾಡಬೇಕಿತ್ತು. ದಾನ ಮಾಡಿ ರಾಜ್ಯ ಅಭಿವೃದ್ಧಿಯಾಗದಂತೆ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಡ್ರೋನ್ ಪ್ರತಾಪ್ ವಿರುದ್ಧ ದಾಖಲಾಗಿರುವ ದೂರು ಎಫ್‌ಐಆರ್, ಹೇಳಿಕೆ ದಾಖಲಿಸಿಲ್ಲ

ಗ್ಯಾರಂಟಿ ಯೋಜನೆ ಘೋಷಣೆ ಮಾಡೋ ಮುಂಚೆ ಯೋಚನೆ ಮಾಡಬೇಕಿತ್ತು. ಯಾವುದೇ ಯೋಚನೆ ಮಾಡದೆ ಅಧಿಕಾರದ ದಾಹಕ್ಕಾಗಿ ಐದು ಗ್ಯಾರಂಟಿ, ಆರು ಗ್ಯಾರಂಟಿ ಘೋಷಣೆ ಮಾಡಿದರು. ಇಲ್ಲಿ ದಾನ ಕೊಟ್ಟು ಅಲ್ಲಿ ಭಿಕ್ಷೆ ಬೇಡಲು ಹೋಗುತ್ತಾರೆ. ಇವರು ಕೇಂದ್ರದಿಂದ ಹಣ ಕೇಳೋದು ರಾಜ್ಯದ ಅಭಿವೃದ್ಧಿಗಲ್ಲ. ಹಣತಂದು ಲೋಕಸಭಾ ಚುನಾವಣೆಗೆ ಇನ್ನಷ್ಟು ಗ್ಯಾರಂಟಿ ಕೊಡಲು ಎಂದಿದ್ದಾರೆ. ಚುನಾವಣೆ ಮುಗಿದ ನಂತರ ಕಾಂಗ್ರೆಸ್‌ನವರು ಗ್ಯಾರಂಟಿ ನಿಲ್ಲಿಸುತ್ತಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಹಾಸನ, ಮಂಡ್ಯ ಲೋಕಸಭಾ ಟಿಕೆಟ್ ಬಿಜೆಪಿಗೆ ಸಿಗಲಿದೆ: ಪ್ರೀತಮ್ ಗೌಡ

ಪ್ರತ್ಯೇಕ ರಾಷ್ಟ್ರದ ವಿಚಾರದ ಬಗ್ಗೆ ಮಾತನಾಡಿ, ಕಾಂಗ್ರೆಸ್‌ನವರಿಗೆ ಬಹುಶಃ ಪ್ರತ್ಯೇಕ ದೇಶ ಮಾಡೋದಕ್ಕೆ ಉತ್ತಮವಾದ ಆಲೋಚನೆ ಬಂದಿರಬೇಕು. 1947ರಲ್ಲಿ ಜಿನ್ನಾನಿಂದ ದೇಶ ವಿಭಜನೆ ಆಯಿತು. ಈಗ ಇವರೇನಾದರು ಪಾಕಿಸ್ತಾನದಂತೆ ಬೇರೆ ಒಂದು ಸ್ಥಾನ ಮಾಡೋಕೆ ಹೊರಟಿದ್ದಾರೆ. ದೇಶದ ಅಖಂಡತೆಯ ಕುರಿತಂತೆ ಪ್ರಮಾಣ ವಚನ ಸ್ವೀಕರಿಸುತ್ತಾರೆ. ಅದನ್ನು ಬಿಟ್ಟು ಇವರು ದೇಶವನ್ನ ಪ್ರತ್ಯೇಕ ಮಾಡಲು ಹೊರಟಿದ್ದಾರೆ ಎಂದು ಹರಿಹಾಯ್ದಿದಿದ್ದಾರೆ. ಇದನ್ನೂ ಓದಿ: ನಿಗೂಢ ಕೆಲಸಕ್ಕೆ 42 ಅಕ್ರಮ ಸಿಮ್‌ಗಳೊಂದಿಗೆ ಬೆಂಗಳೂರಿಗೆ ಹೊರಟಿದ್ದ ಯುವಕರು ಅರೆಸ್ಟ್‌

ಶಿವಕುಮಾರ ಶ್ರೀಗಳಿಗೆ ‘ಭಾರತ ರತ್ನ’ ಕೊಡುವುದರ ಬಗ್ಗೆ ಪ್ರತಿಕ್ರಿಯಿಸಿ, ಶಿವಕುಮಾರ ಶ್ರೀಗಳಿಗೆ ಭಾರತ ರತ್ನ ಕೊಡುವ ವಿಚಾರದಲ್ಲಿ ನಾವೆಲ್ಲ ಬೆಂಬಲವಾಗಿ ನಿಲ್ಲುತ್ತೇವೆ. ಅಂತಹ ಮಹನೀಯರು ಮತ್ತೇ ಇಲ್ಲಿ ಹುಟ್ಟಬೇಕು. ಅವರಿಗೆ ಭಾರತ ರತ್ನ ಕೊಡುವ ವಿಚಾರದಲ್ಲಿ ನಾವೆಲ್ಲ ಒಗ್ಗಟ್ಟಾಗಿ ಇರ್ತೀವಿ. ಅಡ್ವಾಣಿ ಅವರಿಗೆ ಭಾರತ ರತ್ನ ಲಭಿಸಿರೋದು ಬಹಳ ಸಂತೋಷ. ಅವರ ಹೋರಾಟ ಇವತ್ತಿನದಲ್ಲ. ಬಹಳಷ್ಟು ಶ್ರಮಪಟ್ಟು ದೇಶದಲ್ಲಿ ಹಿಂದೂ ಧರ್ಮ ಕಟ್ಟಿದವರು. ಮಾಜಿ ಪ್ರಧಾನಿ ವಾಜಪೇಯಿಯವರ ಜೊತೆಯಲ್ಲಿ ಕೆಲಸ ಮಾಡಿದವರು. ಅವರಿಗೆ ಭಾರತ ರತ್ನ ಕೊಟ್ಟಿರೋದು ಸೂಕ್ತ. ಸರಿಯಾದ ಸಮಯದಲ್ಲಿ ಕೊಟ್ಟಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನಾಯಿ ವಿಚಾರಕ್ಕೆ ಠಾಣೆ ಮೆಟ್ಟಿಲೇರಿದ ಮಹಿಳೆಯರು

Share This Article