ಹಬ್ಬಕ್ಕೆ ಬಟ್ಟೆ ಕೊಂಡೊಯ್ಯುತ್ತಿದ್ದ ಪುರಸಭೆ ಸದಸ್ಯನ ತಡೆದು ಮಾರಕಾಸ್ತ್ರದಿಂದ ಹಲ್ಲೆ

Public TV
1 Min Read

ಬಳ್ಳಾರಿ: ದೀಪಾವಳಿ ಹಬ್ಬಕ್ಕೆ ಬಟ್ಟೆ ಕೊಂಡೊಯ್ಯುತ್ತಿದ್ದ ಪುರಸಭೆ ಸದಸ್ಯನ (Municipal Council Member) ಬೈಕ್ ತಡೆದು ಮಚ್ಚಿನಿಂದ ಹಲ್ಲೆ ನಡೆಸಿದ ಘಟನೆ ನಗರದ (Ballari) ಎಚ್‍ಎಲ್‍ಸಿ ಕಾಲುವೆ ಬಳಿ ನಡೆದಿದೆ.

ನಾಗರಾಜ್ ನಾಯ್ಕ (32) ಹಲ್ಲೆಗೊಳಗಾದ ಪುರಸಭೆ ಸದಸ್ಯ. ಶಿವಕುಮಾರ್ ಎಂಬಾತ ಹಲ್ಲೆ ನಡೆಸಿದ ಆರೋಪಿಯಾಗಿದ್ದಾನೆ. ಒಂದು ವರ್ಷದಿಂದ ಮನೆ ಮುಂದೆ ಇರುವ ಚರಂಡಿ ವಿಚಾರವಾಗಿ ಇಬ್ಬರೂ ಗಲಾಟೆ ಮಾಡಿಕೊಂಡಿದ್ದರು. ಅದೇ ವಿಚಾರವಾಗಿ ಇಬ್ಬರಿಗೂ ಮತ್ತೆ ಗಲಾಟೆಯಾಗಿ ಹಲ್ಲೆ ನಡೆದಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಹೋಟೆಲಿನಲ್ಲಿ‌ ನಾಲ್ವರು ಕಾಮುಕರಿಂದ ಗ್ಯಾಂಗ್‌ರೇಪ್‌ – ಸಹಾಯಕ್ಕಾಗಿ ಕಣ್ಣೀರಿಟ್ಟ ಸಂತ್ರಸ್ತೆ, ಐವರು ಅರೆಸ್ಟ್

ನಾಗರಾಜ್‍ನ ತಲೆ, ಬೆನ್ನು ಹಾಗೂ ಕೈಗಳಿಗೆ ಮಚ್ಚಿನಿಂದ ಹಲ್ಲೆ ನಡೆಸಲಾಗಿದೆ. ಗಾಯಗೊಂಡ ಆತನನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ವೇಳೆ ನಾಗರಾಜ್‍ನ ಸ್ನೇಹಿತ ಹಾಗೂ ಗ್ರಾಮಸ್ಥರು ತಪ್ಪಿಸಲು ಯತ್ನಿಸಿದ್ದಾರೆ. ಈ ವೇಳೆ ಆರೋಪಿ ಗ್ರಾಮಸ್ಥರ ಕಡೆಗೂ ಮಚ್ಚು ಬೀಸಿದ್ದಾನೆ. ಇದರಿಂದ ಹಲ್ಲೆ ತಡೆಯುವಲ್ಲಿ ಗ್ರಾಮಸ್ಥರು ವಿಫಲರಾಗಿದ್ದಾರೆ.

ಈ ಸಂಬಂಧ ತೋರಣಗಲ್ಲು ಪೊಲೀಸ್‌ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಫೋಟೋ ಶೂಟ್ ವೇಳೆ ಕಿರಿಕ್ – ಯುವಕನ ಇರಿದು ಕೊಂದ ಕಿಡಿಗೇಡಿಗಳು

Share This Article