ವರನ ಹುಡುಕಾಟದಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ ಕುಟುಂಬ

Public TV
1 Min Read

ಮುಂಬೈ: ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಅವರು ಕೊನೆ ಬಾರಿಗೆ ಅಭಿನಯಿಸಿದ ಚಿತ್ರ ಖಮೋಶಿ ಆದರೆ ಆದು ಅಷ್ಟೇನು ಯಶಸ್ಸು ಕಾಣಲಿಲ್ಲ. ಈಗ ಮುಂದಿನ ಚಿತ್ರಕ್ಕೆ ಸಜ್ಜಾಗುತ್ತಿರುವ ತಮನ್ನಾ ಅವರು ತನ್ನ ಮದುವೆ ಬಗ್ಗೆ ಮಾತನಾಡಿದ್ದಾರೆ.

ಇತ್ತೀಚಿಗೆ ನಡೆದ ಸಂವಾದಲ್ಲಿ, ತನ್ನ ಮುದುವೆ ಬಗ್ಗೆ ಮಾತನಾಡಿರುವ ತಮನ್ನಾ ನನಗೆ ಹುಡುಗನನ್ನು ಹುಡುಕುವ ಸಂಪೂರ್ಣ ಜವಾಬ್ದಾರಿಯನ್ನು ನನ್ನ ಪೋಷಕರಿಗೆ ನೀಡಿದ್ದೇನೆ ಎಂದು ಹೇಳಿದ್ದಾರೆ. ಆದರೆ ಮೂಲಗಳ ಪ್ರಕಾರ ತಮನ್ನಾ ತಾಯಿ ರಜನಿ ಭಾಟಿಯಾ ಅವರು ಮಗಳಿಗಾಗಿ ಉತ್ತಮ ವರನನ್ನು ಹುಡುಕುತ್ತಿದ್ದಾರೆ ಎನ್ನಲಾಗಿದೆ.

ಈ ಹಿಂದೆ 2018 ರಲ್ಲಿ ತಮನ್ನಾ ಭಾಟಿಯಾ ಅವರು ಅಮೆರಿಕ ಮೂಲದ ವೈದ್ಯರೊಬ್ಬರ ಜೊತೆ ಡೇಟಿಂಗ್‍ನಲ್ಲಿ ಇದ್ದಾರೆ. ಇಬ್ಬರು 2019ರ ವೇಳೆ ಮದುವೆಯಾಗಲಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಈ ಉಹಾಪೋಹಗಳಿಗೆ ತೆರೆ ಎಳೆದಿದ್ದ ತಮನ್ನಾ ನಾನು ಯಾರ ಜೊತೆಗೆ ಡೇಟಿಂಗ್ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಇದರ ಜೊತೆ ತನ್ನ ಮದುವೆಯ ಬಗ್ಗೆ ಏನೇ ಸುದ್ದಿ ಇದ್ದರೂ ನಾನು ಮಾಧ್ಯಮ ಮತ್ತು ನನ್ನ ಅಭಿಮಾನಿಗಳಿಗೆ ತಿಳಿಸುತ್ತೇನೆ ಎಂದು ಭರವಸೆ ನೀಡಿದ್ದರು.

ತನ್ನ ಮೇಲೆ ಈ ವಿಚಾರದಲ್ಲಿ ಪದೇ ಪದೇ ವದಂತಿಗಳನ್ನು ಕೇಳಿ ಕೋಪಗೊಂಡಿದ್ದ ತಮನ್ನಾ ಅವರು, ಒಂದು ದಿನ ನಟ, ಇನ್ನೊಂದು ದಿನ ಕ್ರಿಕೆಟಿಗ ಮತ್ತು ಈಗ ವೈದ್ಯ ಈ ರೀತಿಯ ವದಂತಿಗಳು ನನಗೆ ತುಂಬ ನೋವುಂಟು ಮಾಡಿವೆ. ಆಧಾರ ರಹಿತ ಸುಳ್ಳು ಸುದ್ದಿಯನ್ನು ನನ್ನ ವೈಯಕ್ತಿಕ ಜೀವನದಲ್ಲಿ ನಾನು ಖಂಡಿತವಾಗಿಯೂ ಸಹಿಸುವುದಿಲ್ಲ. ನಾನು ಒಂಟಿಯಾಗಿ ಸಂತೋಷದಿಂದ ಇದ್ದೇನೆ. ನನ್ನ ಪೋಷಕರು ಇದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎಂದು ಹೇಳಿದ್ದರು.

ನಾನು ಮದುವೆಯಾಗಲು ತೀರ್ಮಾನ ಮಾಡಿದಾಗ ನನ್ನ ಅಭಿಮಾನಿಗಳಿಗೆ ಮತ್ತು ಮಾಧ್ಯಮದವರಿಗೆ ಮೊದಲು ತಿಳಿಸುತ್ತೇನೆ. ಅದ್ದರಿಂದ ನನ್ನ ಮದುವೆಯ ಬಗ್ಗೆ ಈಗಲೇ ಯಾವುದೇ ಉಹಾಪೋಹ ಬೇಡ ಎಂದು ಹೇಳಿದ್ದರು. ಈಗ ಮತ್ತೆ ಮದುವೆಯ ಬಗ್ಗೆ ಮಾತನಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *