ಕಾರು ಅಪಘಾತ: ರವೀನಾ ಟಂಡನ್‌ ಮೇಲೆ ಸುಳ್ಳು ಕೇಸ್- ಡಿಸಿಪಿ ಸ್ಪಷ್ಟನೆ

Public TV
1 Min Read

‘ಕೆಜಿಎಫ್ 2′ (KGF 2) ಸಿನಿಮಾದ ನಟಿ ರವೀನಾ ಟಂಡನ್ (Raveena Tandon) ಕಾರು ಅಪಘಾತದ (Car Accident) ಬಗೆಗಿನ ಅಸಲಿ ವಿಚಾರ ಈಗ ಹೊರಬಿದ್ದಿದೆ. ನಟಿ ಕುಡಿದ ಮತ್ತಿನಲ್ಲಿ ಹಲ್ಲೆ ಮಾಡಿದ್ದಾರೆ. ಕೆಟ್ಟದಾಗಿ ಮಾತನಾಡಿದ್ದಾರೆ ಎಂದೆಲ್ಲಾ ಹೇಳಲಾಗಿತ್ತು. ಮುಂಬೈನ ಖಾರ್ ಪೊಲೀಸ್ ಠಾಣೆಯಲ್ಲಿ ರವೀನಾ ವಿರುದ್ಧ ಪ್ರಕರಣ ದಾಖಲಿಸಿದ್ದರು. ಅಸಲಿ ಸಂಗತಿ ಈಗ ತಿಳಿದು ಬಂದಿದೆ. ನಟಿಯ ವಿರುದ್ಧ ಸುಳ್ಳು ದೂರು ದಾಖಲಿಸಿರುವ ಬಗ್ಗೆ ಡಿಸಿಪಿ ರಾಜ್ ತಿಲಕ್ ರೋಷನ್ ಸ್ಪಷನೆ ನೀಡಿದ್ದಾರೆ.

ರವೀನಾ ಟಂಡನ್ ಕಾರು ಮೂವರಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಗಾಯಗಳಾಗಿವೆ ಎಂದು ಹೇಳಲಾಗಿತ್ತು. ನಟಿಯ ವಿರುದ್ಧ ಕಿಡಿಕಾರಿದ್ದರು. ಅವರ ಮೇಲೆ ಹಲ್ಲೆ ಕೂಡ ಮಾಡಲಾಗಿತ್ತು. ಅಸಲಿಗೆ, ಸುಳ್ಳು ದೂರನ್ನು ದೂರುದಾರರು ನೀಡಿರುವ ಬಗ್ಗೆ ಡಿಸಿಪಿ ಸ್ಪಷ್ಟನೆ ನೀಡಿದ್ದಾರೆ. ಅವರ ಕಾರು ಯಾರಿಗೂ ಡಿಕ್ಕಿ ಹೊಡೆದಿಲ್ಲ ಮತ್ತು ರವೀನಾ ಅಂದು ಕುಡಿದಿರಲಿಲ್ಲ. ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿದಾಗ ಅಸಲಿ ವಿಚಾರ ಹೊರಬಿದ್ದಿದೆ ಎಂದು ಡಿಸಿಪಿ ಕ್ಲ್ಯಾರಿಟಿ ನೀಡಿದ್ದಾರೆ. ಇದನ್ನೂ ಓದಿ:ಸೈಲೆಂಟ್ ಆಗಿ ಮದುವೆಯಾದ್ರಾ ‘ಮಿಲನಾ’ ನಟಿ ಪಾರ್ವತಿ?

ರವೀನಾ ಅವರು ಕಾರಿನಲ್ಲಿ ಮನೆಗೆ ಬರುತ್ತಿದ್ದರು. ಅವರ ಕಾರನ್ನು ರಿವರ್ಸ್ ತೆಗೆದುಕೊಳ್ಳಲಾಗಿತ್ತು. ಆದರೆ ಕಾರು ಯಾರಿಗೂ ಟಚ್ ಮಾಡಿಲ್ಲ. ಆದರೂ ಅಲ್ಲಿ ಮಾತಿನ ಚಕಮಕಿ ನಡೆದು ಈ ಘಟನೆ ವಿವಾದ ಸೃಷ್ಟಿಸಿದೆ. ಘಟನೆಯ ವೇಳೆ, ನಟಿ ಕಾರಿನಿಂದ ಹೊರಬಂದಿದ್ದು, ಜಗಳವಾಡಲು ಅಲ್ಲ. ಬದಲಾಗಿ ತನ್ನ ಚಾಲಕನನ್ನು ರಕ್ಷಿಸಲು ಎಂದು ಹೇಳಿದ್ದಾರೆ. ಈ ಘಟನೆಯಲ್ಲಿ ಯಾರಿಗೂ ಯಾವುದೇ ಗಾಯಗಳಾಗಲಿಲ್ಲ ಎಂದು ಎಂಬುದು ಸಿಸಿಟಿವಿ ದೃಶ್ಯಾವಳಿಯಿಂದ ಸಾಬೀತಾಗಿದೆ. ಇದೆಲ್ಲಾ ಸುಳ್ಳು ಆರೋಪ ಎಂದು ಸ್ಪಷ್ಟನೆ ನೀಡಿದ್ದಾರೆ.

ಅಂದಹಾಗೆ, ‘ಕೆಜಿಎಫ್ ಪಾರ್ಟ್ 3’ ಸೇರಿದಂತೆ ಬಾಲಿವುಡ್‌ನ ಹಲವು ಸಿನಿಮಾಗಳು ರವೀನಾ ಕೈಯಲ್ಲಿವೆ. ಅವರ ಮಗಳು ಕೂಡ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲು ರೆಡಿಯಾಗಿದ್ದಾರೆ.

Share This Article