61 ವರ್ಷದ ವೃದ್ಧೆಯ ಮೇಲೆ ಚಾಕುವಿನಿಂದ ಹಲ್ಲೆಗೈದ 14ರ ಬಾಲಕ-ಪೊಲೀಸರ ಮುಂದೆ ಬಾಲಕ ಹೇಳಿದ್ದು ಹೀಗೆ

Public TV
1 Min Read

ಮುಂಬೈ: 14 ವರ್ಷದ ಬಾಲಕನೊಬ್ಬ ಮನೆಯಲ್ಲಿ ಕಳ್ಳತನ ಮಾಡುವಾಗ 61 ವರ್ಷದ ವೃದ್ಧೆಯ ಕೈ ಸಿಕ್ಕಿಬಿದ್ದಾಗ ತಪ್ಪಿಸಿಕೊಳ್ಳಲು ಕತ್ತರಿ ಮತ್ತು ಚಾಕುವಿನಿಂದ ಹಲ್ಲೆ ಮಾಡಿರುವ ಘಟನೆ ಮುಂಬೈ ನಗರದಲ್ಲಿ ನಡೆದಿದೆ.

ಸವಿತಾಬೆನ್ ಹಲ್ಲಗೊಳಗಾದ ವೃದ್ಧೆ. ಸವಿತಾ ಅವರು ಪಕ್ಕದ ಮನೆಯ ಹುಡಗನನ್ನು ಊಟಕ್ಕೆ ಕರೆದಿದ್ದಾರೆ. ಈ ವೇಳೆ ಬಾಲಕ ಅಜ್ಜಿಯ ಮನೆಯಲ್ಲಿನ ಕಬರ್ಡ್ ನಿಂದ ಹಣವನ್ನು ದೋಚಲು ಪ್ರಯತ್ನಿಸಿದ್ದಾನೆ. ಇದನ್ನು ನೋಡಿದ ಅಜ್ಜಿ ಆತನನ್ನು ಹಿಡಿದಿದ್ದರಿಂದ ಭಯಬೀತನಾದ ಬಾಲಕ ಕತ್ತರಿ ಮತ್ತು ಚಾಕುವಿನಿಂದ ವೃದ್ಧೆಯ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ.

ಹಲ್ಲೆಗೊಳಾಗದ ಸವಿತಾಬೆನ್ ಜೋರಾಗಿ ಕಿರುಚಿಕೊಂಡಿದ್ದಾರೆ. ಸವಿತಾ ಅವರ ಕಿರುಚಾಟ ಕೇಳಿದ ನೆರೆಹೊರೆಯವರು ಮನೆಯ ಬಾಗಿಲನ್ನು ಮುರಿದು ಬಾಲಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಹಣ ಕದ್ದಿದ್ದು ಯಾಕೆ?:
ತನ್ನ ಸಹೋದರನ ಬೈಸಿಕಲ್ ರಿಪೇರಿಗಾಗಿ ಹಣ ಕಳ್ಳತನ ಮಾಡಲು ಯತ್ನಿಸಿದ್ದು ಬಾಲಕ ಪೊಲೀಸರ ಮುಂದೆ ಹೇಳಿದ್ದಾನೆ. ಚಾಕು ಮತ್ತು ಕತ್ತರಿಯಿಂದ ಹಲ್ಲೆಗೊಳಗಾದ ಸವಿತಾ ಬೆನ್ ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಕಿತ್ಸೆ ಕೊಡಿಸಲಾಗಿದೆ. ಸದ್ಯ ಸವಿತಾ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಪೊಲೀಸರು ಬಾಲಕನನ್ನು ವಶಕ್ಕೆ ಪಡೆದುಕೊಂಡು ಐಪಿಸಿ ಸೆಕ್ಷನ್ 394 ಮತ್ತು 397 ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಬಾಲಕನನ್ನು ಜುವೆನೈಲ್ ಕೋರ್ಟ್ ಮುಂದೆ ಹಾಜರುಪಡಿಸಿ ಸದ್ಯ ಡೋಂಗ್ರಿ ಚಿಲ್ಡರ್ನ್ ಹೋಮ್ ನಲ್ಲಿ ಇರಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *