ಮುಂಬೈನಲ್ಲಿ ಹೈ ಅಲರ್ಟ್ – ಜನವರಿ 2ರವರೆಗೂ ಕರ್ಫ್ಯೂ ಜಾರಿ

Public TV
1 Min Read

ಮುಂಬೈ: ಕ್ರಿಸ್ಮಸ್ (Christmas) ಮತ್ತು ಹೊಸ ವರ್ಷಚಾರಣೆಗೆ (New Year) ಇನ್ನು ಕೆಲವು ವಾರಗಳು ಬಾಕಿ ಇರುವಾಗಲೇ ಮುಂಬೈನಲ್ಲಿ (Mumbai) ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಭಯೋತ್ಪಾದಕ ಚಟುವಟಿಕೆಗಳ (Terrorism) ಮೇಲೆ ಹದ್ದಿನ ಕಣ್ಣಿಟ್ಟಿರುವ ಪೊಲೀಸರು ಜನವರಿ 2ರ ವರೆಗೂ ಕರ್ಫ್ಯೂ (Curfew) ವಿಧಿಸಿದ್ದು, 5 ಕ್ಕಿಂತ ಹೆಚ್ಚು ಮಂದಿ ಒಟ್ಟಾಗಿ ಓಡಾಡುವಂತಿಲ್ಲ ಎಂದು ಆದೇಶಿಸಿದೆ.

ಮುಂಬೈ ಪೊಲೀಸ್ ಕೇಂದ್ರ ಕಚೇರಿಯಿಂದ ಈ ಆದೇಶ ಪ್ರಕಟಗೊಂಡಿದ್ದು, ಜನವರಿ 2ರ ವರೆಗೂ ಶಸ್ತ್ರಾಸ್ತ್ರಗಳು, ಬಂದೂಕುಗಳು, ಕತ್ತಿಗಳು ಮತ್ತು ಇತರ ಆಯುಧಗಳೊಂದಿಗೆ ಸಂಚಾರದ ಮೇಲೂ ನಿಷೇಧವನ್ನು ವಿಧಿಸಲಾಗಿದೆ.

ಅಧಿಕೃತ ಸೂಚನೆಯ ಪ್ರಕಾರ, ಮದುವೆ ಸಮಾರಂಭಗಳು, ಅಂತ್ಯಕ್ರಿಯೆ ಸಭೆಗಳು, ಸ್ಮಶಾನಗಳಿಗೆ ಹೋಗುವ ದಾರಿಯಲ್ಲಿ ಧ್ವನಿವರ್ಧಕಗಳು, ವಾದ್ಯಗಳು, ಬ್ಯಾಂಡ್‌ಗಳನ್ನು ನುಡಿಸುವಂತಿಲ್ಲ, ಪಟಾಕಿ ಹೊಡೆಯುವಂತಿಲ್ಲ. ಕ್ಲಬ್‌ಗಳು, ಸಹಕಾರ ಸಂಘಗಳು ಮತ್ತು ಇತರ ಸಂಘಗಳ ಮೆರವಣಿಗೆಗಳ ಮೇಲೆ ನಿಷೇಧವನ್ನು ವಿಧಿಸಲಾಗಿದೆ. ಇದನ್ನೂ ಓದಿ: ಶ್ರದ್ಧಾ ಬಿಟ್ಟು ಹೋಗುವ ಆತಂಕದಲ್ಲಿ ಹತ್ಯೆ ಮಾಡಿದೆ – ಮಂಪರು ಪರೀಕ್ಷೆಯಲ್ಲಿ ಅಫ್ತಾಬ್ ಮತ್ತೊಮ್ಮೆ ತಪ್ಪೊಪ್ಪಿಗೆ

ಸಾರ್ವಜನಿಕ ಚಲನಚಿತ್ರ ಪ್ರದರ್ಶನ ಸ್ಥಳಗಳು ಅಥವಾ ಸುತ್ತಮುತ್ತಲಿನ ಯಾವುದೇ ಸ್ಥಳಗಳಲ್ಲಿ, ನಾಟಕಗಳು ಅಥವಾ ಕಾರ್ಯಕ್ರಮಗಳನ್ನು ವೀಕ್ಷಿಸುವ ಉದ್ದೇಶಕ್ಕಾಗಿ ಸಭೆ ನಡೆಸುವುದು ನಿಷೇಧಿಸಲಾಗಿದೆ. ಸರ್ಕಾರಿ ಕಚೇರಿಗಳ ಸುತ್ತಲೂ ಸರ್ಕಾರಿ ಅಥವಾ ಅರೆ ಸರ್ಕಾರಿ ಕಾರ್ಯಗಳನ್ನು ನಿರ್ವಹಿಸುವ ಸಲುವಾಗಿ ಅನಗತ್ಯ ಜನ ಸೇರುವಂತಿಲ್ಲ. ಶಾಲಾ ಕಾಲೇಜುಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳಲ್ಲಿ ಶೈಕ್ಷಣಿಕ ಕಾರ್ಯಕ್ರಮಗಳು, ಕಾರ್ಖಾನೆಗಳಲ್ಲೂ ಸಾಮಾನ್ಯ ವ್ಯವಹಾರಗಳ ಸಭೆಗಳನ್ನು ನಿಷೇಧಿಸಲಾಗಿದೆ. ಇದನ್ನೂ ಓದಿ: “ಬ್ರಾಹ್ಮಣ ಭಾರತ್ ಛೋಡೋ” – ಜೆಎನ್‍ಯು ಕ್ಯಾಂಪಸ್ ಗೋಡೆಗಳ ಮೇಲೆ ವಿವಾದಾತ್ಮಕ ಬರಹ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *