ಶ್ರೇಯಸ್ ಅಯ್ಯರ್ ನಮಗೆ ಬೇಕು – ಟೊಂಕಕಟ್ಟಿ ನಿಂತಿದೆ ಮುಂಬೈ ಇಂಡಿಯನ್ಸ್!

Public TV
1 Min Read

ಮುಂಬೈ: ಭಾರತ ತಂಡದ ಆಟಗಾರ ಶ್ರೇಯಸ್ ಅಯ್ಯರ್ ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ ಭರ್ಜರಿ ಮೊತ್ತಕ್ಕೆ ಸೇಲ್ ಆಗುವ ಎಲ್ಲಾ ಲಕ್ಷಣಗಳು ಕಂಡು ಬಂದಿದೆ. ಈ ನಡುವೆ ಶ್ರೇಯಸ್ ಅಯ್ಯರ್‌ರನ್ನು ಬಿಡ್ ಮಾಡಿ ತಮ್ಮ ತೆಕ್ಕೆಗೆ ಹಾಕಿಕೊಳ್ಳಲು ಮುಂಬೈ ಇಂಡಿಯನ್ಸ್   ಫ್ರಾಂಚೈಸಿ ತುದಿಗಾಲಲ್ಲಿ ನಿಂತಿದೆ.

ಹೌದು ಭರ್ಜರಿ ಫಾರ್ಮ್‍ನಲ್ಲಿರುವ ಶ್ರೇಯಸ್ ಅಯ್ಯರ್‌ರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಮುಂಬೈ ಇಂಡಿಯನ್ಸ್ ತಂಡ ತೆರೆಮರೆಯ ಕಸರತ್ತು ನಡೆಸುತ್ತಿದೆ. ಅಷ್ಟೇ ಅಲ್ಲದೆ ಶ್ರೇಯಸ್ ಅಯ್ಯರ್‌ಗಾಗಿ ಎಷ್ಟೂ ಬೇಕಾದರೂ ಹಣ ಸುರಿಯಲು ಮುಂಬೈ ಫ್ರಾಂಚೈಸಿ ಸಿದ್ಧವಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಅಹಮದಾಬಾದ್ ತಂಡ 15ನೇ ಆವೃತ್ತಿ ಐಪಿಎಲ್ ಆಡುವುದು ಡೌಟ್?

14ನೇ ಆವೃತ್ತಿಯ ಐಪಿಎಲ್‍ನಲ್ಲಿ ಡೆಲ್ಲಿ ಪರ ಆಡುತ್ತಿದ್ದ ಅಯ್ಯರ್‌ರನ್ನು ಹರಾಜಿಗೆ ಬಿಟ್ಟುಕೊಡಲು ಡೆಲ್ಲಿ ತಂಡ ಚಿಂತಿಸಿದೆ. ಹಾಗಾಗಿ ಮುಂಬೈ ಇಂಡಿಯನ್ಸ್ ಅಯ್ಯರ್‌ರನ್ನು ಕೊಂಡುಕೊಳ್ಳಲು ಈಗಾಗಲೇ ಪ್ರಯತ್ನಿಸಿದೆ ಅಯ್ಯರ್ ಜೊತೆ ಮಾತುಕತೆ ನಡೆಸಿದೆ ಎಂದು ಮೂಲಗಳಿಂದ ವರದಿಯಾಗಿದೆ. ಅಯ್ಯರ್ ಪ್ರಸ್ತುತ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಪ್ರಥಮ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸಿದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಇದನ್ನೂ ಓದಿ: ನ್ಯೂಜಿಲೆಂಡ್‍ಗೆ 284 ರನ್ ಟಾರ್ಗೆಟ್ ನೀಡಿದ ಭಾರತ – ರೋಚಕ ಘಟ್ಟ ತಲುಪಿದ ಮೊದಲ ಟೆಸ್ಟ್

Share This Article
Leave a Comment

Leave a Reply

Your email address will not be published. Required fields are marked *