ತನ್ನನ್ನು ಕಡೆಗಣಿಸಿದ್ದಕ್ಕೆ ಮಾಜಿ ಗೆಳೆಯನಿಗೆ ಆ್ಯಸಿಡ್ ಎರಚಿದ್ಳು!

Public TV
1 Min Read

ಮುಂಬೈ: 25 ವರ್ಷದ ಯುವತಿಯೊಬ್ಬಳು ತನ್ನನ್ನು ಕಡೆಗಣಿಸಿದ್ದಕ್ಕೆ ಮಾಜಿ ಪ್ರಿಯಕರನಿಗೆ ಆ್ಯಸಿಡ್ ಎರಚಿರುವ ಘಟನೆ ಮುಂಬೈನ ಗೋರೆಗಾಂವ್‍ನಲ್ಲಿ ನಡೆದಿದೆ.

26 ವರ್ಷದ ಓಂ ಸಿಂಗ್ ಸೋಲಂಕಿ ಆ್ಯಸಿಡ್ ದಾಳಿಗೆ ಒಳಗಾದ ಯುವಕ. ಓಂ ಸಿಂಗ್ ಅವರ ಮುಖ ಮತ್ತು ಕುತ್ತಿಗೆ ಭಾಗಗಳಲ್ಲಿ ಗಂಭೀರ ಪ್ರಮಾಣದ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಓ ಸಿಂಗ್ ಮೇಲೆ ಆ್ಯಸಿಡ್ ಮಾಡಿದ್ದ ಮೀರಾ ಪ್ರಕಾಶ್ ಶರ್ಮಾ ಎಂಬ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೀರಾ ಥಾಣೆ ಜಿಲ್ಲೆಯ ನಲ್ಲಸೊಪರಾ ನಿವಾಸಿಯಾಗಿದ್ದು, ಶನಿವಾರ ಸಂಜೆ ಸುಮಾರು 6ಗಂಟೆಗೆ ಪಶ್ಚಿಮ ಗೋರೆಗಾಂವ್‍ನ ಎಂ.ಜಿ.ರೋಡ್ ಬಳಿಯ ಹಿರೇನ್ ಶಾಪಿಂಗ್ ಸೆಂಟರ್‍ನಲ್ಲಿ ಮೀರಾ ತನ್ನ ಮಾಜಿ ಪ್ರಿಯಕರ ಓಂ ಸಿಂಗ್ ಮುಖದ ಮೇಲೆ ಆ್ಯಸಿಡ್ ಎರಚಿದ್ದಾಳೆ.

ಇದನ್ನೂ ಓದಿ:  ತನಗೆ ಸಿಗದವನು ಬೇರೊಬ್ಬಳಿಗೂ ಸಿಗಬಾರದೆಂದು ಆ್ಯಸಿಡ್ ಎರಚಿದ್ಳು!

ಕೆಲವು ದಿನಗಳಿಂದ ಓಂ ಸಿಂಗ್ ತನ್ನ ಗೆಳತಿ ಮೀರಾಳನ್ನು ಕಡೆಗಣಿಸುತ್ತಿದರು. ಮೀರಾ ಹಲವು ಕಾರ್ಯಕ್ರಮಗಳಲ್ಲಿ ಓಂ ನನ್ನು ಭೇಟಿಯಾಗಲು ಪ್ರಯತ್ನಿಸಿದ್ದಳು. ಆದರೆ ಓಂ ಆಕೆಯನ್ನು ಭೇಟಿಯಾಗಲು ನಿರಾಕರಿಸುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಿಯಕರನ ನಡವಳಿಕೆಯಿಂದ ಬೇಸತ್ತ ಮೀರಾ ಶನಿವಾರ ಸಂಜೆ ಓಂ ಸಿಂಗ್ ಅವರ ಅಂಗಡಿಗೆ ಬಂದಿದ್ದಾಳೆ. ಈ ಮಧ್ಯೆ ಇಬ್ಬರ ನಡುವೆ ಬಿರುಸಿನ ಮಾತುಕತೆ ನಡೆದಿದೆ. ಕೊನೆಗೆ ಮೀರಾ ತನ್ನ ಹ್ಯಾಂಡ್ ಬ್ಯಾಗ್‍ನಿಂದ ಆ್ಯಸಿಡ್ ತೆಗೆದು ಓಂ ಮೇಲೆ ಎರಚಿದ್ದಾಳೆ.

ಈ ಸಂಬಂಧ ಮೀರಾಳನ್ನು ಪೊಲೀಸರು ಬಂಧಿಸಿದ್ದು, ಐಪಿಸಿ ಸೆಕ್ಷನ್ 326 (ಎ), 323 ಹಾಗು 504 ಕಲಂಗಳನ್ವಯ ಅಡಿಯಲ್ಲಿ ಪ್ರಕರಣ ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಆ್ಯಸಿಡ್ ದಾಳಿಗೊಳಗಾದ ಯುವತಿಗೆ ಬಾಳುಕೊಟ್ಟಿತ್ತು ರಾಂಗ್ ನಂಬರ್!

Share This Article
Leave a Comment

Leave a Reply

Your email address will not be published. Required fields are marked *