ಆಯಸ್ಸು ಹೆಚ್ಚಿಸ್ತೀನಿ ಅಂತ 2 ಬಾರಿ ಯುವತಿ ಮೇಲೆ ಅತ್ಯಾಚಾರ ಮಾಡಿದ ನಕಲಿ ಬಾಬಾ

Public TV
2 Min Read

ಮುಂಬೈ: ಆಯಸ್ಸು ಹೆಚ್ಚುಸುವುದಾಗಿ ಹೇಳಿ ಯುವತಿಯ ಮೇಲೆ ಅತ್ಯಾಚಾರವೆಸಗಿದ್ದ ನಕಲಿ ಬಾಬಾನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಧನಂಜಯ್ ಮಿಶ್ರಾ ಎಂದು ಗುರುತಿಸಲಾಗಿದೆ ಈ ಘಟನೆ ಜನವರಿ 14 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆರೋಪಿ ಮಿಶ್ರಾ ದೂರುದಾರ ಯುವತಿ ತಂದೆಯ ಸ್ನೇಹಿತರ ಮನೆಯಲ್ಲಿ ನೆಲೆಸಿದ್ದ. ಜನವರಿಯ ಎರಡನೇ ವಾರದಲ್ಲಿ ಸಂತ್ರಸ್ತೆಯ ಮನೆಗೆ ಬಂದು ಎಲ್ಲರ ಅಂಗೈಗಳನ್ನು ನೋಡಿ ಹೋಗಿದ್ದ. ನಂತರ ಅವರ ಮನೆಗೆ ಒಂದೆರಡು ಬಾರಿ ಭೇಟಿ ಮಾಡಿದ್ದಾನೆ. ಜನವರಿ 14 ರಂದು ಮತ್ತೆ ಸಂತ್ರಸ್ತೆಯ ಮನೆಗೆ ಬಂದು ಆಯಸ್ಸು ಹೆಚ್ಚಿಸಲು ಪೂಜೆಯನ್ನು ಮಾಡಬೇಕು ಎಂದು ಹೇಳಿದ್ದಾನೆ.

ಆರೋಪಿ ಮಿಶ್ರಾ ಹೇಳಿದಂತೆ ಪೂಜೆಗೆ ಬೇಕಾದ ಎಲ್ಲಾ ಅಗತ್ಯ ಸಾಮಾಗ್ರಿಗಳನ್ನು ಒಂದು ಕೋಣೆಯಲ್ಲಿ ಸಿದ್ಧಪಡಿಸುವಂತೆ ಯುವತಿಗೆ ಹೇಳಿದ್ದಾನೆ. ಬಳಿಕ ಎಲ್ಲಾ ವಸ್ತುಗಳನ್ನು ಇಟ್ಟ ಮೇಲೆ ರೂಮಿನ ಬಾಗಿಲು ಮತ್ತು ಕಿಟಕಿ ಮುಚ್ಚಲು ಹೇಳಿದ್ದಾನೆ. ನಕಲಿ ಬಾಬಾ ಹೇಳಿದಂತೆ ಮಾಡಿ ಸಂತ್ರಸ್ತೆ ಪೂಜೆಗೆ ಕುಳಿತಿದ್ದಾರೆ.

ಸ್ವಲ್ಪ ಸಮಯದ ನಂತರ ಅವನು ನನ್ನನ್ನು ವಶೀಕರಣ ಮಾಡಿ ತನ್ನ ಎಲ್ಲಾ ಉಡುಪುಗಳನ್ನು ತೆಗೆದುಹಾಕಿದ. ಅದೇ ರೀತಿ ನನಗೂ ಮಾಡಲು ಹೇಳಿದ. ನಂತರ ಅವನ ತೊಡೆಯ ಮೇಲೆ ಕುಳಿತು ಮಂತ್ರವನ್ನು ಓದಬೇಕೆಂದು ಹೇಳಿದ ಎಂದು ಸಂತ್ರಸ್ತೆ ಪೊಲೀಸರಿಗೆ ಹೇಳಿದ್ದಾರೆ. ನಂತರ ಆರೋಪಿ ಮಿಶ್ರಾ ಸಂತ್ರಸ್ತೆ ಮೇಲೆ ಎರಡು ಬಾರಿ ಅತ್ಯಾಚಾರ ಮಾಡಿದ್ದಾನೆ. ಬಳಿಕ ಆಕೆಯ ಸಹೋದರಿಯನ್ನು ರೂಮಿಗೆ ಕಳುಹಿಸುವಂತೆ ಹೇಳಿದ್ದಾನೆ. ಆಕೆಯ ಸಹೋದರಿ ರೂಮಿಗೆ ಬಂದಾಗ ನಕಲಿ ಬಾಬಾ ನಗ್ನವಾಗಿ ಕುಳಿತಿದ್ದನ್ನು ನೋಡಿದ್ದಾರೆ. ಆಕೆಗೂ ಬಟ್ಟೆ ತೆಗೆದು ಹಾಕಿ ತೊಡೆಯ ಮೇಲೆ ಕುಳಿತುಕೊಳ್ಳುವಂತೆ ಹೇಳಿದ್ದಾನೆ. ಆದರೆ ಇದಕ್ಕೆ ಸಹೋದರಿ ನಿರಾಕರಿಸಿದ್ದಾರೆ. ಆಗ ನಕಲಿ ಬಾಬಾ ಆಕೆಗೆ ಶಾಪ ಹಾಕಿ, ನಾನು ಹೇಳಿದಂತೆ ಮಾಡದಿದ್ದರೆ ಶೀಘ್ರದಲ್ಲಿಯೇ ಸಾಯುತ್ತೀಯಾ ಎಂದು ಹೇಳಿದ್ದಾನೆ.

ಇಬ್ಬರೂ ಯುವತಿಯರು ಜನವರಿ 18 ರಂದು ಪೋಷಕರಿಗೆ ವಿಚಾರವನ್ನು ತಿಳಿಸಿದ್ದಾರೆ. ನಂತರ ಅವರು ಆಂಟೋಪ್ ಹಿಲ್ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಐಪಿಸಿ ಸೆಕ್ಷನ್ 354, 376 ಮತ್ತು ಬ್ಲಾಕ್ ಮ್ಯಾಜಿಕ್ ಕಾಯ್ದೆಯ ವಿವಿಧ ಸೆಕ್ಷನ್‍ಗಳಡಿ ಎಫ್‍ಐಆರ್ ದಾಖಲಿಸಿದ್ದಾರೆ. ಆರೋಪಿಯನ್ನು ಬಂಧಿಸಿದ ಬಳಿಕ ಪೊಲೀಸರು ಈತ ಇತರ ಹುಡುಗಿಯರು ಅಥವಾ ಮಹಿಳೆಯರೊಂದಿಗೂ ಈ ರೀತಿಯ ಕೃತ್ಯ ಎಸಗಿದ್ದನೆಯೇ ಎಂದು ತನಿಖೆ ನಡೆಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *