ಮುಂಬೈಯ 8ನೇ ಅಂತಸ್ತಿನ ಕಟ್ಟಡದಿಂದ ಜಿಗಿದು 14ರ ಬಾಲಕಿ ಆತ್ಮಹತ್ಯೆ

Public TV
1 Min Read

ಮುಂಬೈ: 14 ವರ್ಷದ ಬಾಲಕಿಯೊಬ್ಬಳು 8ನೇ ಅಂತಸ್ತಿನ ಅಪಾರ್ಟ್ ಮೆಂಟ್‍ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಂಬೈನಲ್ಲಿ ನಡೆದಿದೆ.

9ನೇ ತರಗತಿಯ ವಿದ್ಯಾರ್ಥಿನಿ ಗುರುವಾರ ಸಂಜೆ 6.30 ಗಂಟೆಯ ವೇಳೆ ಕಟ್ಟಡದಿಂದ ಜಿಗಿದಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಬಾಲಕಿ ಬೀಳುತ್ತಿರುವ ದೃಶ್ಯವನ್ನು ಸ್ಥಳೀಯ ನಿವಾಸಿಗಳು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ.

ಮೃತ ಬಾಲಕಿಯ ಕುಟುಂಬ ಅಪಾರ್ಟ್ ಮೆಂಟ್‍ನ 8ನೇ ಮಹಡಿಯಲ್ಲಿ ವಾಸವಾಗಿತ್ತು. ಹೀಗಾಗಿ ಬಾಲಕಿ ಅಲ್ಲಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಇದನ್ನು ಕಂಡ ಸ್ಥಳೀಯರು ಬೀಳದಂತೆ ವಿನಂತಿಸಿಕೊಂಡು, ರಕ್ಷಿಸಲು ಪ್ರಯತ್ನಿಸಿದ್ದಾರೆ. ಯಾರ ಮಾತನ್ನು ಆಲಿಸದ ಬಾಲಕಿ ಕೆಳಗಡೆ ಹಾರಿದ್ದಾಳೆ.

ಕೆಳಗೆ ಬೀಳುತ್ತಿದ್ದಂತೆ ಬಾಲಕಿಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ನಡೆಸಿದರೂ ದಾರಿ ಮಧ್ಯದಲ್ಲಿಯೇ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ ಬಾಲಕಿಯ ಆತ್ಮಹತ್ಯೆಗೆ ಯಾವುದೇ ಕಾರಣಗಳು ತಿಳಿದುಬಂದಿಲ್ಲ. ಬಾಲಕಿ ಕೆಳಗೆ ಬೀಳುತ್ತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

https://youtu.be/EOF01tiRk2U

Share This Article
Leave a Comment

Leave a Reply

Your email address will not be published. Required fields are marked *