ಸೈಬರ್ ಮೋಸದ ಜಾಲದಕ್ಕೆ ಸಿಕ್ಕಿ 1.48 ಲಕ್ಷ ಕಳೆದುಕೊಂಡ ನಟಿ!

By
2 Min Read

ಮುಂಬೈ: ಸೈಬರ್ ಮೋಸಕ್ಕೆ ಹಲವು ಜನರು ಸಿಕ್ಕಿ ತಮ್ಮ ಆಸ್ತಿಯನ್ನೆ ಕಳೆದುಕೊಂಡಿರುವ ಸುದ್ದಿಯನ್ನು ನೋಡಿದ್ದೇವೆ. ಈಗ ನಟಿಯೊಬ್ಬರು ಸೈಬರ್ ಮೋಸದ ಜಾಲಕ್ಕೆ ಸಿಕ್ಕಿ, 1.48 ಲಕ್ಷ ಕಳೆದುಕೊಂಡಿರುವ ಘಟನೆ ಮುಂಬೈನಲ್ಲಿ ನಡೆದಿದೆ.

64 ವರ್ಷದ ಪಾರ್ಲೆಯ ಮರಾಠಿ ಸಿನಿಮಾ ನಟಿಯೊಬ್ಬರು ಟೆಲಿಕಾಂ ಆಪರೇಟರ್ ಏರ್‍ಟೆಲ್ ಕಳುಹಿಸಿದ ಸಂದೇಶವನ್ನು ಸ್ವೀಕರಿಸಿದ್ದಾರೆ. ಈ ವೇಳೆ ನಟಿಗೆ ಕರೆ ಬಂದಿದ್ದು, ವಂಚಕರು ಎಟಿಎಂ ಕಾರ್ಡ್‍ನ ಪೂರ್ತಿ ವಿವರವನ್ನು ಪಡೆದುಕೊಂಡಿದ್ದಾರೆ. ಅಲ್ಲದೆ ಈ ನಟಿ ವಂಚಕರಿಗೆ ತನ್ನ ಕೆವೈಸಿ ನಂಬರ್ ಸಹ ಕೊಟ್ಟಿದ್ದಾರೆ. ಪರಿಣಾಮ ಆಕೆಯ ಖಾತೆಯಿಂದ ವಂಚಕರು 1.48 ಲಕ್ಷ ರೂ. ವಂಚಿಸಿದ್ದಾರೆ. ಇದನ್ನೂ ಓದಿ: ಆಹಾರ ಇಲ್ಲದೇ ಚಾಕೊಲೇಟ್ ತಿನ್ನುತ್ತ ದಿನ ಕಳೆಯುತ್ತಿದ್ದೇವೆ: ವಿದ್ಯಾರ್ಥಿಗಳ ಅಳಲು

Representative Image 
 | Pixabay

ಏನಿದು ಘಟನೆ?
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ನಟಿ, ನನ್ನ ಗಂಡನ ಫೋನ್‍ಗೆ ಒಂದು ಸಂದೇಶ ಬಂತು. ಏರ್‍ಟೆಲ್‍ನಿಂದ ನನಗೆ ಕರೆ ಸಹ ಬಂದ್ದಿತ್ತು. ಆಗ ನಾನು ಅವರು ಕೇಳಿದ ಎಲ್ಲ ವಿವರಗಳನ್ನು ಕೊಟ್ಟಿದ್ದು, ಕೆವೈಸಿ ಸಹ ಹೇಳಿದ್ದೇನೆ ಎಂದು ವಿವರಿಸಿದ್ದಾರೆ.

ನಂತರ ಅವರು ನನಗೆ ಅಪ್ಲಿಕೇಶನ್‍ವೊಂದನ್ನು ಡೌನ್‍ಲೋಡ್ ಮಾಡಲು ತಿಳಿಸಿದರು. ಅದರಂತೆ ನಾನು ಸಹ ಮಾಡಿದೆ. ಬೇರೊಬ್ಬರಿಗೂ ಅಪ್ಲಿಕೇಶನ್‍ನಲ್ಲಿ ಅನುವು ಮಾಡಿಕೊಡುವಂತೆ ತಿಳಿಸಿದರು. ನಾನು ಒಪ್ಪಿಗೆ ಕೊಟ್ಟೆ. ಅವರು ಹೇಳಿದಂತೆ ನನ್ನ ಬ್ಯಾಂಕಿಂಗ್ ವಿವರಗಳನ್ನು ನಮೂದಿಸಿ, 10 ರೂ. ಪಾವತಿಸಬೇಕು ಎಂದರು. ನಾನು ಅದೇ ರೀತಿ ಮಾಡಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಏಳು ಗಂಟೆಯಲ್ಲಿ 28 ಟನ್ ಕಬ್ಬು ಲೋಡ್ ಮಾಡಿದ ಯುವಕ!

ಪೊಲೀಸರು ಈ ಕುರಿತು ಪ್ರತಿಕ್ರಿಯಿಸಿದ್ದು, ನಟಿ ತನ್ನ ಬ್ಯಾಂಕಿಂಗ್ ವಿವರಗಳನ್ನು ನಮೂದಿಸಿದ್ದು, ಅಪ್ಲಿಕೇಶನ್ ಸಹಾಯದಿಂದ ವಂಚಕರು ಎಲ್ಲ ವಿವರಗಳನ್ನು ನೋಡಿಕೊಂಡಿದ್ದಾರೆ. ನಂತರ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ಹಣ ವರ್ಗಾವಣೆಯಾಗಿರುವುದನ್ನು ನೋಡಿ ನಟಿ ಶಾಕ್ ಆಗಿದ್ದಾರೆ. ತಕ್ಷಣ ಆ ನಟಿ ಹತ್ತಿರದಲ್ಲಿದ್ದ ಏರ್‍ಟೆಲ್ ಶಾಪ್ ಗೆ ಭೇಟಿ ಕೊಟ್ಟಿದ್ದು, ನಟಿಗೆ ಯಾವುದೇ ಕರೆಯನ್ನು ಏರ್‍ಟೆಲ್ ಮಾಡಿಲ್ಲ ಎಂಬುದನ್ನು ತಿಳಿದುಕೊಂಡಿದ್ದಾರೆ ಎಂದು ವಿವರಿಸಿದರು.

ನಂತರ ನಟಿ ಬ್ಯಾಂಕಿಗೂ ಹೋಗಿ ಮಾಹಿತಿ ತಿಳಿಸಿದ್ದು, 1.48 ಲಕ್ಷ ರೂ. ವರ್ಗಾವಣೆಯಾಗಿರುವುದು ಸತ್ಯ ಎಂಬುದು ತಿಳಿದುಬಂದಿದೆ. ತಕ್ಷಣ ನಟಿ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದು, ತನಿಖೆ ನಡೆಯುತ್ತಿದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *