ಬೆಂಗಳೂರು: ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಒಳಗೆ ಒಳಮೀಸಲಾತಿ ಕಲ್ಪಿಸಬೇಕು ಎಂಬ ಎಡಗೈ ಸಮುದಾಯದವರ 35 ವರ್ಷಗಳ ಹೋರಾಟಕ್ಕೆ ಕಡೆಗೂ ಜಯ ಸಿಕ್ಕಿದ್ದು, ಮಂತ್ರಿಮಂಡಲ ಒಪ್ಪಿಗೆ ನೀಡಿರುವುದು ಸ್ವಾಗತಾರ್ಹ ಸಂಗತಿ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು (Mukhyamantri Chandru) ಹೇಳಿದರು.
ಈ ಮೂಲಕ ಎಲ್ಲಾ ಹೋರಾಟಗಾರರಿಗೂ ಪಕ್ಷದ ವತಿಯಿಂದ ಅಭಿನಂದನೆ. ನ್ಯಾ. ಸದಾಶಿವ ವರದಿ ಆಯೋಗವನ್ನು ಯಥಾವತ್ತಾಗಿ ಅಳವಡಿಸದ ಕಾರಣದಿಂದ ಅಲೆಮಾರಿ ಹಾಗೂ ಇನ್ನಿತರ ಧ್ವನಿ ಇಲ್ಲದ ಸಣ್ಣ ಸಣ್ಣ ಜಾತಿಗಳಿಗೆ ಒಳಮೀಸಲಾತಿಯ ಲಾಭ ದಕ್ಕುವುದಿಲ್ಲವೆಂಬ ಭಾವನೆಯೂ ಸಹ ಇದೆ ಎಂದು ತಿಳಿಸಿದರು. ಇದನ್ನೂ ಓದಿ: ದಲಿತ ಸಮುದಾಯ 3 ಗುಂಪಾಗಿ ವರ್ಗೀಕರಿಸಿ ಮೀಸಲಾತಿ ಹಂಚಿಕೆ ಜಾರಿಗೆ ಸಂಪುಟ ನಿರ್ಧಾರ
ಮುಂಬರುವ ದಿನಗಳಲ್ಲಿ ಬಾಕಿ ಇರುವ ಎಲ್ಲ ನೇಮಕಾತಿಗಳು, ಮುಂಬಡ್ತಿಗಳು ವೇಗದಲ್ಲಿ ಆಗಬೇಕು. ಪರಿಶಿಷ್ಟ ಜಾತಿ ಹಾಗೂ ಪಂಗಡಗಳು ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಸಬಲೀಕರಣಗೊಳ್ಳಲು ಸರ್ಕಾರವು ಪರಿಶಿಷ್ಟರಿಗೆ ಮೀಸಲಿಟ್ಟಿರುವ ಹಣವನ್ನು ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಆಮೂಲಾಗ್ರವಾಗಿ ಬದಲಾವಣೆಗಳನ್ನು ತರಲು ಬಳಸಬೇಕಿದೆ ಎಂದು ಒತ್ತಾಯಿಸಿದರು.
ಈ ಸಮಾಜದ ಮಕ್ಕಳಿಗೆ ವಿಶ್ವ ಗುಣಮಟ್ಟದ ಆಧುನಿಕ ಸರ್ಕಾರಿ ಶಿಕ್ಷಣ ವ್ಯವಸ್ಥೆಯನ್ನು ಕಲ್ಪಿಸುವಂತಹ ಯೋಜನೆಗಳು ಜಾರಿಯಾಗಬೇಕಿದೆ ಎಂದು ಮುಖ್ಯಮಂತ್ರಿ ಚಂದ್ರು ತಿಳಿಸಿದರು. ಇದನ್ನೂ ಓದಿ: ಪುನರ್ವಸತಿ ಕಾರ್ಯಕರ್ತರ ಗೌರವಧನ 1,000 ರೂ. ಹೆಚ್ಚಳ – ಲಕ್ಷ್ಮಿ ಹೆಬ್ಬಾಳ್ಕರ್