ಡಾಲಿ ನಿರ್ಮಾಣದ ಹೊಸ ಚಿತ್ರಕ್ಕೆ ಮುಹೂರ್ತ: ಪ್ರಖ್ಯಾತ್ ಹೀರೋ

Public TV
1 Min Read

ಸ್ಯಾಂಡಲ್‌ವುಡ್‌ನ ಡಾಲಿ ಧನಂಜಯ (Dolly Dhananjay) ಅವರ ‘ಡಾಲಿ ಪಿಕ್ಚರ್ಸ್’ನಿಂದ 5ನೇ ಸಿನಿಮಾ ಸೆಟ್ಟೇರಿಸಿದೆ. ಸೂಪರ್ ಸಕ್ಸಸ್ ನೀಡಿರುವ ಡಾಲಿ ಪಿಕ್ಚರ್ಸ್ ಇದೀಗ ಮತ್ತೊಂದು ವಿಭಿನ್ನ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದೆ. ಈ ಬಾರಿ ಡಾಲಿ ಪಿಕ್ಚರ್ಸ್ ನಿಂದ ‘ನಡುವೆ ಅಂತರವಿರಲಿ’ ಖ್ಯಾತಿಯ ನಟ ಪ್ರಖ್ಯಾತ್ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ ಸಿನಿಮಾಗೆ ‘ಜೆಸಿ  ಎಂದು ಟೈಟಲ್ ಇಡಲಾಗಿದೆ. ಜೆಸಿ ಎಂದರೆ ಜುಡಿಸಿಯಲ್ ಕಸ್ಟಡಿ. ಜೈಲಿಂದ ಹೊರ ಬಂದ ಯುವಕನ ಕಥೆ ಇದಾಗಿದೆ.

ಇಂದು ಬೆಳ್ಳಂಬೆಳಗ್ಗೆ ಜೆಸಿ (JC) ಸಿನಿಮಾದ ಮುಹೂರ್ತ ನೆರವೇರಿತು. ಬಂಡಿ ಮಹಾಕಾಳಿ ದೇವಸ್ಥಾನದಲ್ಲಿ ಪೂಜೆ ಮಾಡುವ ಮೂಲಕ ಜೆಸಿ ಚಿತ್ರಕ್ಕೆ ಚಾಲನೆ ನೀಡಲಾಯಿತು. ಮುಹೂರ್ತದ ಸಮಯದಲ್ಲಿ ಇಡೀ ಸಿನಿಮಾತಂಡ ಹಾಜರಿತ್ತು. ಡಾಲಿ ಧನಂಜಯ ತಮ್ಮದೇ ನಿರ್ಮಾಣದ 5ನೇ ಸಿನಿಮಾದ ಮುಹೂರ್ತದಲ್ಲಿ ಭಾಗಿಯಾಗಿ ತಂಡಕ್ಕೆ ಶುಭಹಾರೈಸಿದರು.

ಜೆಸಿ ಫಸ್ಟ್ ಲುಕ್ ನಲ್ಲಿ ಬೆಂಗಳೂರು ಕಾರಾಗೃಹ, ಜೈಲು ಕಂಬಿಗಳನ್ನು ನೋಡಬಹುದು. ಸದ್ಯ ಟೈಟಲ್ ಪೋಸ್ಟರ್ ರಿಲೀಸ್ ಮಾಡಿರುವ ಸಿನಿಮಾತಂಡ ಸದ್ಯದಲ್ಲೇ ಹೆಚ್ಚಿನ ಮಾಹಿತಿ ಬಿಟ್ಟುಕೊಡಲಿದ್ದಾರೆ. ಇನ್ನು 2018ರಲ್ಲಿ ರಿಲೀಸ್ ಆಗಿದ್ದ ನಡುವೆ ಅಂತವಿರಲಿ ಸಿನಿಮಾ ಮೂಲಕ ನಾಯಕನಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದ ಪ್ರಖ್ಯಾತ್ ನಟನೆಯ 2ನೇ ಸಿನಿಮಾ ಇದಾಗಿದೆ. ಸುಮಾರು 5 ವರ್ಷಗಳ ಬಳಿಕ  ಪ್ರಖ್ಯಾತ್ ಹೀರೋ ಆಗಿ ಮತ್ತೆ ತೆರೆ ಮೇಲೆ ಮಿಂಚಲು ಸಜ್ಜಾಗಿದ್ದಾರೆ.

ಅಂದಹಾಗೆ ‘ಜೆಸಿ’ ಸಿನಿಮಾಗೆ ಚೇತನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಿರ್ದೇಶಕ ಚೇತನ್ ಜೈರಾಮ್ (Chetan Jairam) ಅವರಿಗೂ ಇದು ಮೊದಲ ಸಿನಿಮಾ. ಪಕ್ಕಾ ಮಾಸ್ ಸಿನಿಮಾ ಇದಾಗಿದ್ದು ಚಿತ್ರಕ್ಕೆ ಮಾಸ್ತಿ ಅವರ ಖಡಕ್ ಡೈಲಾಗ್ ಇರಲಿದೆ.  ಕಾರ್ತಿಕ್ ಅವರ ಛಾಯಾಗ್ರಾಹಣ, ರೋಹಿತ್ ಸೋವರ್ ಅವರ ಸಂಗೀತ ಜೆಸಿ ಸಿನಿಮಾಗೆ ಇರಲಿದೆ. ಸದ್ಯದಲ್ಲೇ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಲಿದೆ.

Share This Article