ಏ.18ಕ್ಕೆ ದುನಿಯಾ ವಿಜಯ್ ನಿರ್ದೇಶನದ ‘ಭೀಮ’ನಿಗೆ ಮುಹೂರ್ತ

Public TV
1 Min Read

ದುನಿಯಾ ವಿಜಯ್ ನಿರ್ದೇಶನದ ಎರಡನೇ ಚಿತ್ರಕ್ಕೆ ಎಪ್ರಿಲ್ 18ರಂದು ಮುಹೂರ್ತ ಫಿಕ್ಸ್ ಆಗಿದೆ. ಈ ಸಿನಿಮಾಗೆ ಈಗಾಗಲೇ ‘ಭೀಮ’ ಎಂದು ಹೆಸರಿಡಲಾಗಿದ್ದು, ಭೀಮನ ಜತೆ ಯಾರೆಲ್ಲ ಸೇರಿಕೊಂಡಿದ್ದಾರೆ ಎನ್ನುವುದು ಮುಹೂರ್ತದ ದಿನದಂದು ಗೊತ್ತಾಗಲಿದೆ. ಚಿತ್ರದ ಪೋಸ್ಟರ್ ಮತ್ತು ಟೈಟಲ್ ಲಾಂಚ್ ಅನ್ನು ವಿಭಿನ್ನವಾಗಿ ಮಾಡಿರುವ ದುನಿಯಾ ವಿಜಯ್, ಇದೀಗ ಮುಹೂರ್ತವನ್ನು ಸರಳವಾಗಿ ಮತ್ತು ವಿಶೇಷವಾಗಿ ಪ್ಲ್ಯಾನ್ ಮಾಡಿದ್ದಾರೆ. ಬೆಂಗಳೂರಿನ ಬಂಡೆ ಮಾಕಾಳಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನಡೆಯಲಿದೆ. ಅವರ ಮೊದಲ ನಿರ್ದೇಶನದ ಚಿತ್ರ ಸಲಗದ ಮುಹೂರ್ತ ಕೂಡ ಇದೇ ದೇವಸ್ಥಾನದಲ್ಲೇ ನಡೆದಿತ್ತು. ಇದನ್ನೂ ಓದಿ : ‘ಸಲಾರ್’ ಸಿನಿಮಾದಲ್ಲಿ ‘ಉಗ್ರಂ’ ಛಾಯೆ ಇದೆ: ಪ್ರಶಾಂತ್ ನೀಲ್

ಮೊದಲನೇ ನಿರ್ದೇಶನದಲ್ಲೇ ಯಶಸ್ಸು ಕಂಡಿರುವ ದುನಿಯಾ ವಿಜಯ್, ಎರಡನೇ ಸಿನಿಮಾದಲ್ಲೂ ಅಂಥದ್ದೊಂದು ಭರವಸೆ ಮೂಡಿಸಿದ್ದಾರೆ. ಈಗಾಗಲೇ ಸಿನಿಮಾದ ಆಡಿಯೋ ರೈಟ್ಸ್ ಸೇಲ್ ಆಗಿದ್ದು, ಸಿನಿಮಾ ಶುರುವಾಗುವ ಮುನ್ನವೇ ವಿಜಯ್ ಅವರಿಗೆ ಕೈ ತುಂಬಾ ಹಣ ನೀಡಿದೆ. ಇದನ್ನೂ ಓದಿ : EXCLUSIVE INTERVIEW: ಗೆಲ್ಲಲು ಹೊರಟವನಿಗೆ ಸೋಲು ದೊಡ್ಡದಾಗಬಾರದು: ಯಶ್

ಸಲಗ ಸಿನಿಮಾದ ಬಹುತೇಕ ಹಾಡುಗಳು ಹಿಟ್ ಆಗಿದ್ದರೆ, ಭೀಮ ಸಿನಿಮಾದ ಹಾಡುಗಳ ಬಗ್ಗೆಯೂ ನಿರೀಕ್ಷೆ ಮೂಡಿದೆ. ಈ ಸಿನಿಮಾದಲ್ಲಿ ಮತ್ತೆ ವಿಜಯ್ ಮತ್ತು ಚರಣ್ ರಾಜ್ ಕಾಂಬಿನೇಷನ್ ಮುಂದುವರೆದಿದೆ. ಈ ಚಿತ್ರವನ್ನು ಕೃಷ್ಣ ಸಾರ್ಥಕ್ ಹಾಗೂ ವಿತರಕ ಜಗದೀಶ್ ಗೌಡ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಸದ್ಯದಲ್ಲೇ ಶೂಟಿಂಗ್ ಕೂಡ ಶುರುವಾಗಲಿದೆ.

Share This Article
Leave a Comment

Leave a Reply

Your email address will not be published. Required fields are marked *