ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ನಿರ್ದೋಷಿಯಾಗಿ ಮತ್ತೆ ಸಿಎಂ ಆಗಲಿ: ಸುರೇಶ್ ಬಾಬು

Public TV
2 Min Read

ಬೆಂಗಳೂರು: ಸಿಎಂ ಸಿದ್ದರಾಮಯ್ಯ (Siddaramaiah) ರಾಜೀನಾಮೆ ಕೊಟ್ಟು ತನಿಖೆ ಎದುರಿಸಿ ನಿರ್ದೋಷಿಯಾಗಿ ಮತ್ತೆ ಸಿಎಂ ಆಗಲಿ ಎಂದು ಜೆಡಿಎಸ್ (JDS) ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು (Suresh Babu) ಒತ್ತಾಯಿಸಿದ್ದಾರೆ.

ಈ ಕುರಿತು ಜೆಪಿ ಭವನದಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಲೇಬೇಕು. ಮುಡಾ, ವಾಲ್ಮೀಕಿ ಹಗರಣದ ವಿರುದ್ಧ ನಾವು ಸದನದಲ್ಲಿ ಹೋರಾಟ ಮಾಡಿದ್ದೆವು. ಪಾದಯಾತ್ರೆ ಮಾಡಿದ್ದೆವು. ಈಗ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದ್ದಾರೆ. ರಾಜ್ಯಪಾಲರು ಕಾನೂನು ತಜ್ಞರ ಜೊತೆ ಚರ್ಚೆ ಮಾಡಿಯೇ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿರುತ್ತಾರೆ. ಏಕಾಏಕಿ ಯಾರು ಕ್ರಮ ತೆಗೆದುಕೊಂಡಿದ್ದಾರೆ ಎಂದು ಕಾಂಗ್ರೆಸ್‌ನವರು ಬಿಂಬಿಸೋದು ಸರಿಯಲ್ಲ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಯುಎಸ್ ಕಾರು ಅಪಘಾತ; ಭಾರತೀಯ ಮೂಲದ ಒಂದೇ ಕುಟುಂಬದ ಮೂವರು ಸಾವು

ಸಿಎಂ ಅವರು ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ ಎನ್ನುತ್ತಾರೆ. ಸಿಎಂ ಅವರದ್ದು ತಪ್ಪಿಲ್ಲ ಅಂದರೆ ಮುಡಾ ಹಗರಣದ ಸಂಪೂರ್ಣ ಮಾಹಿತಿಯನ್ನು ಬಹಿರಂಗಪಡಿಸಿದ್ದರೆ ಇಂತಹ ಆತಂಕ ಬರುತ್ತಿರಲಿಲ್ಲ. ಯಾವಾಗ ಸದನದಿಂದ ನೀವು ಓಡಿ ಹೋದ್ರೋ ಆವಾಗ ಅನುಮಾನ ಸೃಷ್ಟಿ ಆಯಿತು. ಹೀಗಾಗಿ ಇಂತಹ ಸನ್ನಿವೇಶ ಎದುರಿಸಬೇಕಾಗಿದೆ. ಇದರಲ್ಲಿ ನಿಮ್ಮ ತಪ್ಪು ಇಲ್ಲ ಅಂದರೆ ಇರೋ ವಿಷಯ ರಾಜ್ಯದ ಜನರ ಮುಂದೆ ಇಡಿ. ಕುಮಾರಸ್ವಾಮಿ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡೋ ವಿಚಾರದಲ್ಲಿ ಯಾವುದೇ ಹುರುಳಿಲ್ಲ ಎಂದು ತಜ್ಞರ ಜೊತೆ ರಾಜ್ಯಪಾಲರು ಚರ್ಚೆ ಮಾಡಿದ್ದಾರೆ. ಅಂದಿನ ರಾಜ್ಯಪಾಲರು ತೀರ್ಮಾನ ಮಾಡಿದ್ದಾರೆ. ಮುಡಾ ಕೇಸ್‌ನಲ್ಲಿ ಸಾಕಷ್ಟು ಅನುಮಾನದ ವಿಷಯಗಳು ಇವೆ. ಮುಡಾ ಕೇಸ್ ಹಲವು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಹೀಗಾಗಿ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಡಿದ್ದಾರೆ ಎಂದರು. ಇದನ್ನೂ ಓದಿ: ಬಂಡೆ ಅನ್ನೋದೇ ಡೇಂಜರ್ – ಸಿದ್ದರಾಮಯ್ಯ ಸ್ಥಿತಿಗೆ ಪರೋಕ್ಷವಾಗಿ ಡಿಕೆಶಿ ಕಾರಣ ಎಂದ ಹೆಚ್‍ಡಿಕೆ

ಟೆಲಿಫೋನ್ ಹಗರಣ ಬಂದಾಗ ರಾಮಕೃಷ್ಣ ಹೆಗಡೆ ಅವರು ರಾಜೀನಾಮೆ ಕೊಟ್ಟಿದ್ದರು. ಸಿದ್ದರಾಮಯ್ಯ ಕುಟುಂಬದ ಹಗರಣ ಆಗಿರುವುದರಿಂದ ಸಿಎಂ ಅವರು ರಾಮಕೃಷ್ಣ ಹೆಗಡೆ ತರಹ ರಾಜೀನಾಮೆ ನೀಡಬೇಕು. ರಾಜೀನಾಮೆ ಕೊಟ್ಟು ಸಿಎಂ ತನಿಖೆ ಎದುರಿಸಿದರೆ ಅವರಿಗೆ ಗೌರವ ಇರುತ್ತದೆ ಎಂದು ಆಗ್ರಹಿಸಿದರು. ಇದನ್ನೂ ಓದಿ:  ಕುಡಿದ ಮತ್ತಿನಲ್ಲಿದ್ದ ರೋಗಿಯಿಂದ ಮಹಿಳಾ ವೈದ್ಯೆ ಮೇಲೆ ಹಲ್ಲೆ

ಕುಮಾರಸ್ವಾಮಿ, ಬಿಜೆಪಿ ಅವರು ಯಾಕೆ ಸರ್ಕಾರ ಅಸ್ಥಿರ ಮಾಡೋಕೆ ಹೋಗುತ್ತಾರೆ? ನೀವು ತಪ್ಪು ಮಾಡಿ ಸಿಕ್ಕಿ ಹಾಕಿಕೊಂಡರೆ ತಾನೇ ಬೇರೆ ಅವರು ಚಾಟಿ ಬೀಸೋ ಕೆಲಸ ಮಾಡೋದು. ಸರ್ಕಾರ ಮಾಡೋರು ಯಾವುದೇ ಹಗರಣದಲ್ಲಿ ಸಿಗದಂತೆ ಅಧಿಕಾರ ಮಾಡಬೇಕು. ವಾಲ್ಮೀಕಿ ಹಗರಣ ಎಲ್ಲರು ನೋಡಿದ್ದಾರೆ. ಮುಡಾ ಹಗರಣ ಆಗಿದೆ. ಇದನ್ನು ನೋಡಿಕೊಂಡು ಸುಮ್ಮನೆ ಇರೋಕೆ ವಿಪಕ್ಷಗಳು ಇದ್ದಾವಾ? ಎಂದು ಹರಿಹಾಯ್ದರು. ಇದನ್ನೂ ಓದಿ:  ಬೆಂಗಳೂರಲ್ಲಿ ಯುವತಿ ಮೇಲೆ ಅತ್ಯಾಚಾರ?

ಸೋಮವಾರ ಕಾಂಗ್ರೆಸ್ ಅವರು ಪ್ರತಿಭಟನೆ ಮಾಡಲಿ. ಅವರು ಪ್ರತಿಭಟನೆ ಮಾಡಿ ಸಮರ್ಥನೆ ಮಾಡಿಕೊಳ್ಳೋಕೆ ಹೊರಟಿದ್ದಾರೆ. ಪ್ರತಿಭಟನೆ ಮಾಡೋದು ಬಿಟ್ಟು ಸಿಎಂ ಅವರು ಪಾರದರ್ಶಕವಾಗಿ ಇದ್ದಾರೆ. ತನಿಖೆ ಎದುರಿಸಿ ನಿಮ್ಮ ಬಳಿ ಇರೋ ಎಲ್ಲಾ ದಾಖಲಾತಿಗಳನ್ನ ಹೊರಗೆ ಕೊಟ್ಟು ಆರೋಪದಿಂದ ಹೊರಗೆ ಬನ್ನಿ. ಕಾನೂನು ಹೋರಾಟ ಮಾಡಿ ಅದರಲ್ಲಿ ಯಶಸ್ವಿಯಾಗಿ ಹೊರಗೆ ಬನ್ನಿ ಎಂದು ಒತ್ತಾಯಿಸಿದರು. ಇದನ್ನೂ ಓದಿ: ಸಿಎಂ ಅಧಿಕೃತ ಎಕ್ಸ್ ಖಾತೆಯಲ್ಲಿ ಮೋದಿ ನಿಂದನೆ ಆರೋಪ – ಸರ್ಕಾರದ ವಿರುದ್ಧ ಸಿ.ಟಿ ರವಿ ಕಿಡಿ

Share This Article