MUDA Scam | ಕೊನೇ ಹಂತದಲ್ಲಿದೆ ಸಿಎಂ ವಿರುದ್ಧದ ತನಿಖೆ

Public TV
1 Min Read

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಪತ್ನಿ ಅವರು ಮೂಡಾದಿಂದ (MUDA) ಪಡೆದಿದ್ದ 14 ಸೈಟ್‌ಗಳ ಬಗ್ಗೆ ಲೋಕಾಯುಕ್ತ ತನಿಖೆ ಅಂತಿಮ ಹಂತಕ್ಕೆ ಬಂದಿದೆ.

ಬುಧವಾರ (ಜ.22) ಇಡೀ ದಿನ ಮೂಡಾದಲ್ಲಿ ಇದ್ದ ಲೋಕಾಯುಕ್ತ ಟೀಂ, ಕೆಲ ಆಡಿಯೋ ಹಾಗೂ ಕಡತಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಪ್ರಕರಣದ ವರದಿಯನ್ನು ನ್ಯಾಯಾಲಯಕ್ಕೆ ನೀಡಲು ಲೋಕಾಯುಕ್ತಕ್ಕೆ ಜನವರಿ 27 ಡೆಡ್‌ಲೈನ್ ಇದೆ. ಹೀಗಾಗಿ ಲೋಕಾಯುಕ್ತ ಪೊಲೀಸರು (Lokayukta Police) ಕೊನೆಯ ಹಂತದ ವಿಚಾರಣೆ ನಡೆಸುತ್ತಿದ್ದಾರೆ.

50:50 ಅನುಪಾತದ ಸೈಟು ಹಂಚಿಕೆ ವಿಚಾರದಲ್ಲಿ ಮುಡಾ ಸದಸ್ಯರ ಅಭಿಪ್ರಾಯ ಏನಾಗಿತ್ತು ಎನ್ನುವ ಬಗ್ಗೆಯೂ ವಿಚಾರಣೆ ನಡೆಸಿದ್ದಾರೆ. ಇದನ್ನೂ ಓದಿ: ಮಗುವಿಗೆ ದೃಷ್ಟಿ ತೆಗೆದ ನೀರನ್ನು ರಸ್ತೆಗೆ ಚೆಲ್ಲಿದ್ದಕ್ಕೆ ಗಲಾಟೆ; ವ್ಯಕ್ತಿ ಸಾವು – ಇಬ್ಬರು ಮಹಿಳೆಯರು ಪೊಲೀಸ್‌ ವಶಕ್ಕೆ

ಮುಡಾ ಕಚೇರಿಗೆ ಲೋಕಾಯುಕ್ತ ಎಸ್ಪಿ ಟಿ.ಜೆ ಉದೇಶ್ ನೇತೃತ್ವದ ತಂಡ ಭೇಟಿ ನೀಡಿ, 50:50 ಅನುಪಾತದ ಬಗ್ಗೆ ಚರ್ಚೆಯಾದ ಸಭೆಯ ಬಗ್ಗೆ ಮಾಹಿತಿ ಸಂಗ್ರಹಿಸಿದೆ. 2020ರ ನ.11ರಂದು ನಡೆದ ಸಭೆ ನಡಾವಳಿ ಪರಿಶೀಲಿಸಿ ಅಂದಿನ ಸಭಾ ನಡವಳಿ ಧ್ವನಿ ಸುರಳಿ ಕೇಳಿಸಿಕೊಂಡು ಅದರ ಮಾಹಿತಿಯನ್ನೂ ದಾಖಲಿಸಿಕೊಂಡಿದೆ. ಇದನ್ನೂ ಓದಿ: Hyderabad | ಪತ್ನಿಯ ಹತ್ಯೆಗೈದು, ಕುಕ್ಕರ್‌ನಲ್ಲಿ ಬೇಯಿಸಿ ಕೆರೆಗೆ ಎಸೆದ ಮಾಜಿ ಸೈನಿಕ

ಅಂದಿನ ಸಭೆಯಲ್ಲಿ ಮಾಜಿ ಆಯುಕ್ತ ನಟೇಶ್ ಹಾಗೂ ಮಾಜಿ ಅಧ್ಯಕ್ಷ ಹೆಚ್‌.ವಿ ರಾಜೀವ್ ಇದ್ದ ಅವಧಿಯ ಸಭೆ ಆಡಿಯೋ ಇದ್ದಾಗಿದ್ದು ಅಂದಿನ ಸಭೆಯಲ್ಲಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ, ಶಾಸಕ ತನ್ವೀರ್‌ ಸೇಠ್, ಜಿ.ಟಿ ದೇವೇಗೌಡ, ಎಸ್.ಎ ರಾಮ್‌ದಾಸ್, ಎಲ್. ನಾಗೇಂದ್ರ, ವಿಧಾನ ಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ ಸೇರಿ ಹಲವು ಪ್ರಮುಖರು ಭಾಗಿಯಾಗಿದ್ದರು. ಸಭೆಯಲ್ಲಿ 50-50 ಅನುಪಾತ ಚರ್ಚೆ ನಡೆದಿತ್ತು. ಇದರ ಮಾಹಿತಿಯನ್ನು ಲೋಕಾಯುಕ್ತ ಟೀಂ ಸಂಗ್ರಹಿಸಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.

Share This Article