ನಾನೇನು ಡ್ಯಾನ್ಸ್‌ ಮಾಡ್ತೀದ್ದೀನಾ? – ಮಾಧ್ಯಮಗಳ ಮುಂದೆ ಮುಡಾ ಮಾಜಿ ಆಯುಕ್ತನ ಪೌರುಷ

Public TV
1 Min Read

ಮೈಸೂರು: ಲೋಕಾಯುಕ್ತ ವಿಚಾರಣೆಗೆ (Lokayukta Enquiry) ಹಾಜರಾಗಿದ್ದ ಮುಡಾ (MUDA) ಮಾಜಿ ಆಯುಕ್ತ ಡಿಬಿ ನಟೇಶ್‌ (DB Natesh) ಮಾಧ್ಯಮಗಳ ಮುಂದೆ ಪೌರುಷ ಪ್ರದರ್ಶಿಸಿದ ಘಟನೆ ಇಂದು ನಡೆಯಿತು.

ಕಚೇರಿಗೆ ವಿಚಾರಣೆ ಆಗಮಿಸಿದಾಗ ಮಾಧ್ಯಮ ಪ್ರತಿನಿಧಿಗಳು ನಟೇಶ್‌ ಅವರ ವಿಡಿಯೋವನ್ನು ಚಿತ್ರೀಕರಿಸುತ್ತಿದ್ದರು. ಈ ವೇಳೆ ಸಿಟ್ಟಾದ ನಟೇಶ್‌, ನನ್ನ ವಿಡಿಯೋ ಯಾಕೆ ಮಾಡ್ತೀದ್ದೀರಾ? ನಾನೇನು ಡ್ಯಾನ್ಸ್ ಮಾಡ್ತಾ ಇದ್ದೀನಾ ಅಂತಾ ಇಂಗ್ಲೀಷ್‌ನಲ್ಲಿ ಪ್ರಶ್ನಿಸಿ ಸಿಟ್ಟು ಹೊರಹಾಕಿದರು. ಅಷ್ಟೇ ಅಲ್ಲದೇ ಕೈಯಲ್ಲಿ ತಂದಿದ್ದ ದಾಖಲೆಗಳನ್ನ ಟೇಬಲ್ ಮೇಲೆ ಕುಕ್ಕಿದರು. ಇದನ್ನೂ ಓದಿ: ಅಧಿಕಾರಿಯೇ ಮನೆಗೆ ತೆರಳಿ ಪತ್ನಿಯನ್ನು ಒಪ್ಪಿಸಿದ್ದೇನೆ ಎಂದರೆ ಸಿಎಂ ಪ್ರಭಾವ ಎಷ್ಟಿದೆ ಅನ್ನೋದು ಗೊತ್ತಾಗುತ್ತೆ: ಸ್ನೇಹಮಯಿ ಕೃಷ್ಣ

 

ನಟೇಶ್‌ ಮೇಲಿರುವ ಆರೋಪ ಏನು?
ಸಿಎಂ ಸಿದ್ದರಾಮಯ್ಯ (CM Siddaramaiah) ಪತ್ನಿ ಪಾರ್ವತಿ ಅವರಿಗೆ 14 ಸೈಟ್‌ಗಳು ನಟೇಶ್‌ ಅವಧಿಯಲ್ಲಿ ಮಂಜೂರು ಆಗಿತ್ತು. ಸಭೆ ಮಾಡಿದ್ದು, ಸೈಟ್ ಹಂಚಿದ್ದು, ಖಾತೆ ಮಾಡಿಸಿದ್ದು ಎಲ್ಲವೂ ನಟೇಶ್ ಅವಧಿಯಲ್ಲೇ ಆಗಿತ್ತು. ಸೈಟ್‌ ಹಂಚಿಕೆಯ ವೇಳೆ ಸಿದ್ದರಾಮಯ್ಯ ಅವರ ಪ್ರಭಾವ ತನ್ನ ಮೇಲೆ ಇತ್ತಾ ಎಂಬ ಆರೋಪದ ಸಾಬೀತಿಗೆ ನಟೇಶ್ ಹೇಳಿಕೆ ಬಹಳ ಮಹತ್ವ ಪಡೆದಿದೆ.

ಮುಡಾದ ಅಕ್ರಮ ನಿವೇಶನ ಹಂಚಿಕೆ ಪ್ರಕರಣಕ್ಕೆ ಡಿಬಿ ನಟೇಶ್​ ಅವರ​ ವಿರುದ್ಧ ಪ್ರಾಸಿಕ್ಯೂಷನ್​ಗೆ ರಾಜ್ಯ ಗೃಹ ಇಲಾಖೆ ಕಳೆದ ವಾರ ಅನುಮತಿ ನೀಡಿತ್ತು.

ನಗರದ ಮಲ್ಲೇಶ್ವರಂನ 10ನೇ ಕ್ರಾಸ್ ನಲ್ಲಿರುವ‌ ನಟೇಶ್ ಮನೆ ಮೇಲೆ ಈ ಹಿಂದೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದರು. ಸತತ 33 ಗಂಟೆಗಳ ಕಾಲ ದಾಖಲೆ ಪರಿಶೀಲನೆ ಮಾಡಿ 4 ಬ್ಯಾಗ್ ಕೊಂಡೊಯ್ದಿದ್ದರು. ಬಳಿಕ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ನಟೇಶ್ ಅವರು ಈಗಾಗಲೇ ಇಡಿ ಅಧಿಕಾರಿಗಳ ಮುಂದೆ ಮೂರು ಬಾರಿ ವಿಚಾರಣೆಗೆ ಹಾಜರಾಗಿದ್ದಾರೆ.

 

Share This Article