ಸಿಎಂ ಪರ ನಿಲ್ಲುವಂತೆ ಸುರ್ಜೇವಾಲ, ವೇಣುಗೋಪಾಲ್ ಸೂಚನೆ: ಪರಮೇಶ್ವರ್

Public TV
1 Min Read

ಬೆಂಗಳೂರು : ಸಿಎಂ ಸಿದ್ದರಾಮಯ್ಯ (CM Siddaramaiah) ಪರ ಎಲ್ಲಾ ಮಂತ್ರಿಗಳು ನಿಲ್ಲಬೇಕು ಅಂತ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ (Randeep Singh Surjewala), ಸಂಸದ ವೇಣುಗೋಪಾಲ್‌ (K. C. Venugopal) ಅಂತ ಗೃಹ ಸಚಿವ ಪರಮೇಶ್ವರ್ (G Parameshwar) ತಿಳಿಸಿದ್ದಾರೆ.

ಸಿದ್ದರಾಮಯ್ಯ ನಿವಾಸದಲ್ಲಿ ನಡೆದ ಸಭೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಬಗ್ಗೆ ಅನಾವಶ್ಯಕ ಆಪಾದನೆಗಳನ್ನು ಮಾಡಿ ವಿರೋಧ ಪಕ್ಷದವರು ಪಾದಯಾತ್ರೆ ಮಾಡಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಅದಕ್ಕೆ ಸರಿಯಾದ ಉತ್ತರ ಕೊಡಬೇಕು ಅಂತ ಹೇಳಿದ್ದಾರೆ. ಪ್ರತಿಯೊಬ್ಬ ಸಚಿವರು ಅದರ ಬಗ್ಗೆ ಮಾತಾಡಬೇಕು ಅಂತ ಹೇಳಿದ್ದಾರೆ. ನಾವು ಅದನ್ನ ಈಗಾಗಲೇ ಮಾಡುತ್ತಿದ್ದೇವೆ ಎಂದರು. ಇದನ್ನೂ ಓದಿ: ಮೃತ ಪಿಎಸ್‌ಐ ಪರಶುರಾಮ್ ಪತ್ನಿಗೆ ಸರ್ಕಾರದಿಂದ ಉದ್ಯೋಗ: ಪರಮೇಶ್ವರ್

 

ನಾವು ಕೂಡಾ ಅವರು ಎಲ್ಲೆಲ್ಲಿ ಪಾದಯಾತ್ರೆ ಮಾಡುತ್ತಿದ್ದಾರೋ ಅಲ್ಲಿ ಹಿಂದಿನ ದಿನ ಅಲ್ಲಿಗೆ ಹೋಗಿ ಅನೇಕ ಪ್ರಶ್ನೆಗಳನ್ನ ನಾವು ಹಾಕುತ್ತಿದ್ದೇವೆ. ನಿಮ್ಮ ಕಾಲದಲ್ಲಿ ಏನಾಗಿತ್ತು ಅಂತ ಪ್ರಶ್ನೆ ಕೇಳುತ್ತಿದ್ದೇವೆ. ಮುಡಾ ಬಗ್ಗೆ ಏನು ಸತ್ಯಾಂಶ ಏನು ಅನ್ನೋದರ ಬಗ್ಗೆ ನಾವೂ ಕೂಡಾ ಹೇಳುತ್ತಿದ್ದೇವೆ ಅಂತ ತಿಳಿಸಿದರು.

ಮಂತ್ರಿಗಳ ಬದಲಾವಣೆ, ಸಂಪುಟ ಪುನರ್ ರಚನೆ ಬಗ್ಗೆ ಸುರ್ಜೇವಾಲ ಮತ್ತು ವೇಣುಗೋಪಾಲ್ ಜೊತೆ ಯಾವುದೇ ಚರ್ಚೆ ಆಗಿಲ್ಲ ಅಂತ ಇದೇ ವೇಳೆ ಪರಮೇಶ್ವರ್ ಹೇಳಿದರು.

ಮಂತ್ರಿಗಳ ಬದಲಾವಣೆ, ಸಂಪುಟ ಪುನರ್ ರಚನೆ ಯಾವುದೂ ಇಲ್ಲ. ಒಟ್ಟಾಗಿ ಕೆಲಸ ಮಾಡಿ ಸರ್ಕಾರಕ್ಕೆ ಒಳ್ಳೆ ಹೆಸರು ತೆಗೆದುಕೊಂಡು ಬನ್ನಿ ಅಂತ ಹೇಳಿದ್ದಾರೆ. ಕ್ಯಾಬಿನೆಟ್ ಪುನರ್ ರಚನೆ, ಖಾತೆ ಬದಲಾವಣೆ ಯಾವುದೂ ಚರ್ಚೆ ನಮ್ಮ ಬಳಿ ಮಾಡಿಲ್ಲ .ಅ ಪ್ರಸ್ತಾಪವೇ ಸಭೆಯಲ್ಲಿ ಬಂದಿಲ್ಲ. ಕೆಲಸ ಮಾಡಿ ಸರ್ಕಾರಕ್ಕೆ ಒಳ್ಳೆ ಹೆಸರು ತನ್ನಿ ಅಂತ ಹೇಳಿದ್ದಾರೆ ಅಷ್ಟೇ ಎಂದರು.

 

Share This Article