ಮುಡಾ ಹಗರಣ; ಐಜಿಪಿಗೆ ವರದಿ ಸಲ್ಲಿಕೆ ಮಾಡಿದ ಎಸ್ಪಿ

Public TV
1 Min Read

ಬೆಂಗಳೂರು: ಸಿಎಂ ವಿರುದ್ಧದ ಮುಡಾ ಹಗರಣದ ತನಿಖೆ ನಡೆಸುತ್ತಿರುವ ಲೋಕಾಯಕ್ತ ಪೊಲೀಸರು ತನಿಖೆಯನ್ನು ಮುಕ್ತಾಯಗೊಳಿಸಿದ್ದಾರೆ. ಇದೇ ವಾರದ ಅಂತ್ಯದೊಳಗೆ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಿದ್ದಾರೆ.

ಈ ಮುನ್ನ ತನಿಖೆ ನಡೆಸಿದ ತನಿಖಾಧಿಕಾರಿ ಎಸ್‌ಪಿ ಉದೇಶ್, ತನ್ನ ಹಿರಿಯ ಅಧಿಕಾರಿಗಳಾದ ಐಜಿಪಿ ಸುಬ್ರಹ್ಮಣ್ಣೇಶ್ವರ ರಾವ್ ಮತ್ತು ಎಡಿಜಿಪಿ ಮನೀಶ್ ಕರ್ಬೀಕರ್‌ಗೆ ವರದಿಯ ಪ್ರತ್ಯೇಕ ಪ್ರತಿ ಸಲ್ಲಿಸಿದ್ದಾರೆ.

ವರದಿ ಪರಿಶೀಲಿಸಿ, ಇದುವರೆಗೆ ನಡೆದಿರುವ ತನಿಖೆಯ ಸರಿ-ತಪ್ಪುಗಳ ಪರಿಶೀಲನೆ ಮಾಡಲಿರುವ ಹಿರಿಯ ಅಧಿಕಾರಿಗಳು, ಮತ್ತೆ ಲೋಕಾಯುಕ್ತ ಎಸ್‌ಪಿ ಉದೇಶ್‌ಗೆ ಕೋರ್ಟ್‌ಗೆ ವರದಿ ಸಲ್ಲಿಕೆ ಮಾಡಲು ಸೂಚಿಸಲಿದ್ದಾರೆ.

ಮೂಲಗಳ ಮಾಹಿತಿ ಪ್ರಕಾರ, ಇದೇ ವಾರದ ಅಂತ್ಯದೊಳಗೆ ಮುಡಾ ಹಗರಣದ ಅಂತಿಮ ವರದಿಯನ್ನು ಜನಪ್ರತಿನಿಧಿಗಳ ನ್ಯಾಯಾಲಯದ ಮುಂದೆ ಸಲ್ಲಿಕೆ ಮಾಡಲಿದ್ದಾರೆ.

Share This Article