– ಇಡಿಯಿಂದ 59 ಮುಡಾ ಸೈಟ್ ಮುಟ್ಟುಗೋಲು
ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಹಗರಣ(MUDA Scam) ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಬೇಟೆಯನ್ನು ಮುಂದುವರೆಸಿದೆ. ಮುಡಾದ ಮಾಜಿ ಆಯುಕ್ತ ದಿನೇಶ್ ಕುಮಾರ್ (Dinesh Kumar) ಬಂಧನದ ಬಳಿಕ 59 ಕ್ಕೂ ಹೆಚ್ಚು ಸೈಟ್ ಗಳನ್ನು ಮುಟ್ಟುಗೋಲು ಹಾಕಿಕೊಂಡು ವಶಕ್ಕೆ ಪಡೆದುಕೊಂಡಿದೆ.
ವಶಪಡಿಸಿಕೊಂಡ 60 ಕೋಟಿ ರೂ. ಮೌಲ್ಯದ ಸೈಟ್‌ಗಳಲ್ಲಿ ಕಾಂಗ್ರೆಸ್ ಮುಖಂಡ ಎ ಪಾಪಣ್ಣ (Papanna) ಅವರದ್ದೇ ಅಗ್ರಪಾಲು. ಈ ಬಗ್ಗೆ ಪಬ್ಲಿಕ್ ಟಿವಿಯ ಬಳಿ ಎಕ್ಸ್ ಕ್ಲೂಸಿವ್ ದಾಖಲೆ ಸಿಕ್ಕಿದ್ದು ಎ ಪಾಪಣ್ಣ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ. ಇದನ್ನೂ ಓದಿ: ಇದನ್ನೂಓದಿ: ಗಗನಕ್ಕೇರಿದ ಬಂಗಾರದ ಬೆಲೆ – 1.5 ಲಕ್ಷದ ಗಡಿ ದಾಟಿದ ಕೆ.ಜಿ ಬೆಳ್ಳಿ!
ಪಾಪಣ್ಣ ಬಳಿಯಿದ್ದ 31 ಸೈಟ್‌ಗಳು ವಿಜಯನಗರದ ನಾಲ್ಕನೇ ಹಂತದ್ದೇ ಆಗಿರುವುದು ವಿಶೇಷ. ಮುಡಾ ಮಾಜಿ ಅಧ್ಯಕ್ಷ ಮರೀಗೌಡಗೆ ಕೂಡ ಅಕ್ರಮ ಸೈಟ್ ಮಂಜೂರು ಮಾಡಲಾಗಿದೆ. ಇದನ್ನೂ ಓದಿ: ವಿಮೆ ಹಣದ ಮೇಲೆ ಕಣ್ಣು – ಅಳಿಯನನ್ನೇ ಕೊಲೆ ಮಾಡಿದ ಮಾವ & ಗ್ಯಾಂಗ್
ದಿನೇಶ್ ಕುಮಾರ್ ತನ್ನ ಮನೆಯ ಕೆಲಸಕ್ಕಿದ್ದ ರಮೇಶ್ ಹೆಸರಲ್ಲೂ ಕೋಟ್ಯಂತರ ರೂ. ಆಸ್ತಿ ಮಾಡಿದ್ದಾರೆ. ಅತ್ತೆ, ಮಾವ, ಬಾಮೈದಾ ಹೆಸರಲ್ಲಿ ಕೋಟಿ ಕೋಟಿ ಆಸ್ತಿ ಮಾಡಿರುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ.