ಹೆಲಿಕಾಪ್ಟರ್‌ನಲ್ಲಿ ಬಂದು ಮುಡಾ ಕಡತ ತೆಗೆದುಕೊಂಡು ಹೋಗಿದ್ದಾರೆ: ಬೈರತಿ ವಿರುದ್ಧ ದೂರು

Public TV
1 Min Read

ಬೆಂಗಳೂರು: ಹೆಲಿಕಾಪ್ಟರ್‌ನಲ್ಲಿ(Helicopter) ಬಂದು ಮುಡಾ ಹಗರಣದ (MUDA Scam) ಕಡತಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ (Byrathi Suresh) ವಿರುದ್ಧ ಸ್ನೇಹಮಯಿ ಕೃಷ್ಣ (Snehamayi Krishna) ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿದ್ದಾರೆ.

ಭಾನುವಾರ ಇಮೇಲ್‌ ಮೂಲಕ ಬೈರತಿ ಸುರೇಶ್‌ ಮತ್ತು ಲೋಕಾಯುಕ್ತ ಎಸ್‌ಪಿ ಸುಜೀತ್‌ ವಿರುದ್ಧ ದೂರು ನೀಡಿದ್ದ ಸ್ನೇಹಮಯಿ ಕೃಷ್ಣ ಅವರು ಇಂದು ಖುದ್ದು ಡಿಜಿಪಿ ಅವರನ್ನು ಭೇಟಿಯಾಗಿ ದೂರು ನೀಡಲು ಸಮಯ ಕೇಳಿದ್ದಾರೆ.

ದೂರುದಾರ ಸ್ನೇಹಮಯಿ ಕೃಷ್ಣ

ಮುಡಾ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದರೂ ಆ ದಾಖಲೆಗಳನ್ನು ವಶಕ್ಕೆ ಪಡೆಯದೇ ಸುಜೀತ್‌ ಅವರು ಸಚಿವರಿಗೆ ಮಾಹಿತಿ ನೀಡಿದ್ದಾರೆ. ಈ ಮಾಹಿತಿಯ ಮೇರೆ ಬೈರತಿ ಸುರೇಶ್‌ ಅವರು ಹೆಲಿಕಾಪ್ಟರ್‌ನಲ್ಲಿ ಬಂದು ಕಡತಗಳನ್ನ ತೆಗೆದುಕೊಂಡು ಹೋಗಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಸ್ನೇಹಮಯಿ ಕೃಷ್ಣ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: Jammu Kashmir | ಫಲಿತಾಂಶಕ್ಕೆ ಮೊದಲೇ ಐವರು ಶಾಸಕರಾಗಿ ಆಯ್ಕೆ – LG ನಿರ್ಧಾರ ಸರಿಯೇ?

ಮುಡಾ ಪ್ರಕರಣದ ಸುದ್ದಿ ಜೋರಾಗುತ್ತಿದ್ದ ಸಮಯದಲ್ಲಿ ಬೈರತಿ ಸುರೇಶ್‌ ಬೆಂಗಳೂರಿನಿಂದ ಮೈಸೂರಿನಲ್ಲಿ ವಿಶೇಷ ಹೆಲಿಕಾಪ್ಟರ್‌ನಲ್ಲಿ ತೆರಳಿದ್ದ ವಿಚಾರ ಈ ಜುಲೈನಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

ಈ ಸಂಬಂಧ ಮಾತನಾಡಿದ್ದ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಮುಡಾ ಹಗರಣವನ್ನು ಮುಚ್ಚಿಹಾಕಲು ಸರ್ಕಾರವೇ ಹೊರಟಿದೆ. ಇದು ಅರ್ಕಾವತಿ ರೀಡೂ ಹಗರಣದ್ದಂತೆ ಈ ಹಗರಣ ನಡೆದಿದೆ. ಭೈರತಿ ಸುರೇಶ್ ಅವರು ಹಗರಣವೇ ನಡೆದಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಮೈಸೂರಿಗೆ ವಿಶೇಷ ಹೆಲಿಕಾಪ್ಟರ್‌ನಲ್ಲಿ ಹೋಗಿ ಕಂತೆಗಟ್ಟಲೇ ಕಡತಗಳನ್ನು, ದಾಖಲೆಗಳನ್ನು ತುಂಬಿಕೊಂಡು ತಂದವರು ಯಾರು? ಹೆಲಿಕಾಪ್ಟರ್ ನಲ್ಲಿ ತಂದ ದಾಖಲೆಗಳನ್ನು ಸುರೇಶ್ ಎಲ್ಲೆಲ್ಲಿ ಇಟ್ಟಿದ್ದಾರೋ ಗೊತ್ತಿಲ್ಲ. ಆ ಬಗ್ಗೆ ಮಾಹಿತಿ ಜನರಿಗೆ ಗೊತ್ತಾಗಬೇಕು ಎಂದು ಆರೋಪಿಸಿದ್ದರು.

 

Share This Article