ಮುಡಾದಲ್ಲಿ ನಡೆದಿರೋದು 4-5 ಸಾವಿರ ಕೋಟಿ ಹಗರಣ: ಆರ್‌. ಅಶೋಕ್‌ ಬಾಂಬ್‌

Public TV
1 Min Read

ನವದೆಹಲಿ: ರಾಜ್ಯದಲ್ಲಿ ಮುಡಾ (MUDA) ಪ್ರಚಲಿತದಲ್ಲಿದೆ. ಮುಡಾ ಮುಚ್ಚಿ ಹಾಕಲು ಸಮಾವೇಶ ಮಾಡುತ್ತಿದ್ದಾರೆ. ನಾನು ದಾಖಲೆ ಮಾಹಿತಿ ಕೋರಿದ್ದೇನೆ ಇನ್ನು ಕೊಟ್ಟಿಲ್ಲ. ಇದು 4-5 ಸಾವಿರ ಕೋಟಿಯ ಹಗರಣ ಎಂದು ವಿಪಕ್ಷ ನಾಯಕ ಆರ್‌. ಅಶೋಕ್‌ (R Ashoka) ಹೊಸ ಬಾಂಬ್‌ ಸಿಡಿಸಿದ್ದಾರೆ.

ಶಾಸಕ ಯತ್ನಾಳ್‌ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾತಿನ ಸಂಘರ್ಷದ ನಡುವೆ ವಿಪಕ್ಷ ನಾಯಕ ಅಶೋಕ್‌ ಬುಧವಾರ ಬೆಳಗ್ಗೆ ದೆಹಲಿಗೆ ತೆರಳಿದ್ದರು. ಈ ವೇಳೆ ಪಕ್ಷದ ಬೆಳವಣಿಗೆಗಳ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಿದರು. ಬಳಿಕ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಇದನ್ನೂ ಓದಿ: ಹಣ ಡಬಲ್‌, ಬಿಎಂಡಬ್ಲ್ಯೂ ಕಾರು ಕೊಡಿಸುವ ಆಸೆ ತೋರಿಸಿ ವಂಚನೆ – ಯುವತಿ ಆತ್ಮಹತ್ಯೆ

ರಾಜ್ಯದಲ್ಲಿ ಮುಡಾ ಪ್ರಚಲಿತದಲ್ಲಿದೆ. ಮುಡಾ ಮುಚ್ಚಿ ಹಾಕಲು ಸಮಾವೇಶ ಮಾಡುತ್ತಿದ್ದಾರೆ. ಸ್ವಾಭಿಮಾನ ಸಮಾವೇಶ ಹೋಗಿ ಡಿಕೆ ಶಿವಕುಮಾರ್ ಸಮಾವೇಶ ಆಗಿದೆ. ಅಗ್ರಿಮೆಂಟ್ ಬಗ್ಗೆಯೂ ಚರ್ಚೆ ಆಗುತ್ತಿದೆ. ದೇವೇಗೌಡರಿಗೆ ಟಾಂಗ್ ಕೊಡಲು ಹೋಗಿ ಪರಸ್ಪರ ಟಾಂಗ್ ಕೊಡ್ತಿದ್ದಾರೆ. ನಾನು ದಾಖಲೆ ಮಾಹಿತಿ ಕೋರಿದ್ದೇನೆ ಇನ್ನು ಕೊಟ್ಟಿಲ್ಲ. ಇದು 4-5 ಸಾವಿರ ಕೋಟಿಯ ಹಗರಣ ಎಂದು ಬಾಂಬ್‌ ಸಿಡಿಸಿದ್ದಾರೆ.

17 ತಿಂಗಳ ಆಡಳಿತ ಕಾಂಗ್ರೆಸ್ ಸರ್ಕಾರದ ಹದಿನೇಳು ಅವತಾರ ಆಗಿದೆ. 18ನೇ ತಿಂಗಳಿಗೆ ಹೊರ ಅವತಾರ ಬರಲಿದೆ. ದಾಖಲೆಗಳು ಒಂದು ಸಂಸ್ಥೆಯಿಂದ ಮತ್ತೊಂದು ಸಂಸ್ಥೆಗೆ ಹಂಚಿಕೊಳ್ಳುವುದು ಪರಸ್ಪರ ಪ್ರಕ್ರಿಯೆ. ಯಾವುದು ಅಕ್ರಮವಾಗಿ ಹಂಚಿಕೆಯಾಗಿದೆ ಅದನ್ನು ಸೀಜ್ ಮಾಡಿ. ಯಾರೇ ಮಾಡಿದರೂ ಸೀಜ್ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: Ballari | ಐವಿ ದ್ರಾವಣ ಪೂರೈಕೆ ಮಾಡಿದ ಕಂಪನಿ ವಿರುದ್ಧ ಕೇಸ್ ದಾಖಲಿಸಲು ತಾಕೀತು

ಇನ್ನೂ ಯತ್ನಾಳ್ ವಿಚಾರ ಕುರಿತು ಮಾತನಾಡಿ, ಯತ್ನಾಳ್‌ ವಿಚಾರ ಹೈಕಮಾಂಡ್ ಅಂಗಳದಲ್ಲಿದೆ, ಇದು ಸುಖಾಂತ್ಯವಾಗಲಿದೆ. ಕಾರ್ಯಕರ್ತರಿಗೆ ಖುಷಿಯಾಗುವ ನಿರ್ಧಾರ ಹೈಕಮಾಂಡ್ ತೆಗೆದುಕೊಳ್ಳಲಿದೆ. ಹೈಕಮಾಂಡ್ ಏನೇ ನಿರ್ಧಾರ ತೆಗೆದುಕೊಂಡರೂ ಪಾಲಿಸುವುದು ನನ್ನ ಕೆಲಸ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಳ್ಳತನ ಮಾಡುತ್ತಿದ್ದ ವ್ಯಕ್ತಿಯ ಕಾಲಿಗೆ ಸೆಕ್ಯೂರಿಟಿಯಿಂದ ಶೂಟ್

Share This Article