ಮಹಿ ಗ್ರೌಂಡ್ ಹೊರಗೂ ಲೆಜೆಂಡ್ – ಸಾವಿರ ಕೋಟಿ ದಾಟಿತು ಆಸ್ತಿ ಮೌಲ್ಯ

Public TV
3 Min Read

ಮುಂಬೈ: ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಲೆಜೆಂಡ್ ಎಂದೇ ಗುರುತಿಸಿಕೊಂಡಿರುವ ಟೀಂ ಇಂಡಿಯಾ (Team India) ಮಾಜಿ ನಾಯಕ ಹಾಗೂ ಸಿಎಸ್‌ಕೆ ತಂಡದ ನಾಯಕ ಎಂ.ಎಸ್ ಧೋನಿ (MS Dhoni) ಗ್ರೌಂಡ್ ಹೊರಗೂ ದಾಖಲೆ ಬರೆದಿದ್ದಾರೆ.

ಹೌದು. ಇನ್‌ಸ್ಟಾಗ್ರಾಮ್‌ನಲ್ಲಿ 4.4 ಕೋಟಿ ಹಾಗೂ ಟ್ವಿಟ್ಟರ್‌ನಲ್ಲಿ 80.8 ಲಕ್ಷ ಅಭಿಮಾನಿಗಳನ್ನ ಸಂಪಾದಿಸುವ ಮೂಲಕ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ನೆಚ್ಚಿನ ನಾಯಕನಾಗಿ ಉಳಿದಿದ್ದಾರೆ. ಈಗ ಅವರ ಆಸ್ತಿಯ ಮೌಲ್ಯ 1 ಸಾವಿರ ಕೋಟಿ ರೂ.ಗೂ ಹೆಚ್ಚಾಗಿದೆ. ಇದನ್ನೂ ಓದಿ: ಸಾಕು ನಾಯಿಗಳೊಂದಿಗೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಣೆ – ವೀಡಿಯೋ ಹಂಚಿಕೊಂಡ ಧೋನಿ

 

View this post on Instagram

 

A post shared by StockGro (@stock_gro)

ವ್ಯಾಪಾರ ಮತ್ತು ಹೂಡಿಕೆ ಸಂಸ್ಥೆಯಾದ ಸ್ಟಾಕ್ ಗ್ರೋ (Stock Gro) ಪ್ರಕಾರ, ಧೋನಿ ಅವರ ಒಟ್ಟು ಆಸ್ತಿ ಮೌಲ್ಯ 1,040 ಕೋಟಿ ಇದೆ. ಆದ್ರೆ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಅವರ ಆಸ್ತಿ ಧೋನಿ ಅವರ ಆಸ್ತಿ (1,050 ಕೋಟಿ) ಮೌಲ್ಯಕ್ಕಿಂತಲೂ ಜಾಸ್ತಿ ಇದೆ ಎಂದು ಅಂದಾಜಿಸಿದೆ.

42 ವರ್ಷದ ಧೋನಿ ಐಪಿಎಲ್‌ನಲ್ಲಿ ಸಿಎಸ್‌ಕೆ ಫ್ರಾಂಚೈಸಿಯಲ್ಲಿ ಆಡುತ್ತಿದ್ದು, ಒಪ್ಪಂದದ ಪ್ರಕಾರ ಪ್ರತಿ ಸೀಸನ್‌ಗೆ 12 ಕೋಟಿ ಪಡೆಯುತ್ತಿದ್ದಾರೆ. ಇನ್‌ಸ್ಟಾಗ್ರಾಮ್ ನಿಂದ ಪ್ರತಿ ಪೋಸ್ಟ್ಗೆ 1 ಕೋಟಿ, ಟ್ವಿಟ್ಟರ್‌ನಿಂದ 2 ಕೋಟಿ ರೂ. ಆದಾಯ ಬರಲಿದೆ. ಅಲ್ಲದೇ ಡೆಹ್ರಾಡೂನ್‌ನಲ್ಲಿ 17.8 ಕೋಟಿ ಮೌಲ್ಯದ ಮನೆ ಹಾಗೂ ರಾಂಚಿಯಲ್ಲಿ ದುಬಾರಿ ಫಾರ್ಮ್ಹೌಸ್ ಹೊಂದಿದ್ದಾರೆ. ಇದರೊಂದಿಗೆ ಮಹಿ, `ಧೋನಿ ಎಂಟರ್‌ಟೈನ್ಮೆಂಟ್ ಪ್ರೊಡಕ್ಷನ್ ಹೌಸ್, ಹೋಟೆಲ್ ಮಹಿ ರೆಸಿಡೆನ್ಸಿ, ಬೆಂಗಳೂರಿನಲ್ಲಿ ಎಂ.ಎಸ್ ಧೋನಿ ಗ್ಲೋಬಲ್ ಸ್ಕೂಲ್ ಅನ್ನು ಸಹ ಹೊಂದಿದ್ದಾರೆ.

ಜೊತೆಗೆ ಕೋಲ್ಗೇಟ್, ಓರಿಯೊ, ವಯೋಕಾಮ್, ಲಾವಾ, ಪೆಪ್ಸಿಕೋ, ಡ್ರೀಮ್-11, ರಿಬಾಕ್ ಸೇರಿದಂತೆ ಪ್ರಮುಖ 28 ಜಾಹೀರಾತು ಸಂಸ್ಥೆಗಳಿಗೆ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. 6 ಸ್ಪೋಟ್ಸ್ ಕಂಪನಿಗಳ ಮೇಲೆ ಹೂಡಿಕೆ ಮಾಡಿದ್ದಾರೆ. ಕವಾಸಕಿ, ಸುಜುಕಿ ಸೇರಿದಂತೆ 5 ದುಬಾರಿ ಬೈಕ್‌ಗಳು ಹಾಗೂ ದುಬಾರಿ ಕಾರುಗಳನ್ನು ಮಹಿ ಹೊಂದಿದ್ದು ಒಟ್ಟು ಆಸ್ತಿ ಮೌಲ್ಯ 1,040 ಕೋಟಿ ಇದೆ ಎಂದು ಸ್ಟಾಕ್ ಗ್ರೋ ಅಂದಾಜಿಸಿದೆ. ಇದನ್ನೂ ಓದಿ: MSDಗೆ 42ನೇ ಹುಟ್ಟುಹಬ್ಬದ ಸಂಭ್ರಮ – ಅಭಿಮಾನಿಗಳಿಂದ KGF ರೇಂಜ್‌ನ ಟ್ರೈಲರ್‌ ರಿಲೀಸ್‌!

 

View this post on Instagram

 

A post shared by StockGro (@stock_gro)

ಕೆಲವು ದಿನಗಳ ಹಿಂದೆಯಷ್ಟೇ ಸ್ಟಾಕ್ ಗ್ರೋ ಹೂಡಿಕೆ ಸಂಸ್ಥೆ ಕೊಹ್ಲಿ ಅವರ ಆಸ್ತಿ ಮೌಲ್ಯವನ್ನು ಅಂದಾಜಿಸಿತ್ತು. 34 ವರ್ಷದ ಕೊಹ್ಲಿ 2023ರ ವಾರ್ಷಿಕ ಒಪ್ಪಂದದ ಪ್ರಕಾರ `ಎ+ ಶ್ರೇಣಿಯಲ್ಲಿ ಆಯ್ಕೆಯಾಗಿದ್ದು ವಾರ್ಷಿಕ 7 ರೂ. ವಾರ್ಷಿಕ ಸಂಭಾವನೆ ಪಡೆಯುತ್ತಾರೆ. ಈ ಪೈಕಿ ಪ್ರತಿ ಟೆಸ್ಟ್ ಪಂದ್ಯಕ್ಕೆ 15 ಲಕ್ಷ, ಏಕದಿನ ಪಂದ್ಯಕ್ಕೆ 6 ಲಕ್ಷ ರೂ. ಹಾಗೂ ಖಿ20 ಪಂದ್ಯಕ್ಕೆ 3 ಲಕ್ಷ ರೂ. ಪಡೆಯುತ್ತಾರೆ. ಅಲ್ಲದೇ ಸಿಎಸ್‌ಕೆಯ ಮಾಜಿ ನಾಯಕಾಗಿರುವ ಅವರು ಐಪಿಎಲ್ ಒಂದು ಸೀಸನ್‌ಗೆ 15 ಕೋಟಿ ರೂ. ಗಳಿಸುತ್ತಾರೆ. ಜೊತೆಗೆ ಬ್ಲೂ ಟ್ರೈಬ್, ಯುನಿವರ್ಸಲ್ ಸ್ಪೋರ್ಟ್ಸ್ ಬಿಝ್, ಎಂಪಿಎಲ್ ಮತ್ತು ಸ್ಪೋರ್ಟ್ಸ್ ಕಾನ್ವೊ ಸೇರಿದಂತೆ 7 ಸ್ಟಾರ್ಟ್-ಅಪ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆ.

ಅಲ್ಲದೇ 18 ಸಂಸ್ಥೆಗಳ ಜಾಹೀರಾತುಗಳಿಗೆ ಬ್ರ್ಯಾಂಡ್‌ ಅಂಬಾಸಿಡರ್ ಕೂಡ ಆಗಿರುವ ಕಿಂಗ್ ಕೊಹ್ಲಿ ಪ್ರತಿ ಬ್ರ್ಯಾಂಡ್‌ನ ಜಾಹೀರಾತಿಗೂ 7.50 ಕೋಟಿ ರೂ. ನಿಂದ 10 ಕೋಟಿ ರೂ. ಪಡೆಯುತ್ತಾರೆ. ಇದರಿಂದಲೇ ಅವರು ವಾರ್ಷಿಕವಾಗಿ ಸುಮಾರು 175 ಕೋಟಿ ರೂ. ಗಳಿಸುತ್ತಾರೆ. ಅಷ್ಟೇ ಅಲ್ಲ ಒಂದು ಇನ್ಸ್ಟಾಗ್ರಾಮ್ ಪೋಸ್ಟ್‌ನಿಂದ 8.9 ಕೋಟಿ ರೂ., ಒಂದು ಟ್ವಿಟ್ಟರ್ ಪೋಸ್ಟ್ನಿಂದ 2.5 ಕೋಟಿ ಗಳಿಸುತ್ತಾರೆ ಎಂದು ಪ್ರಕಟಿಸಿತ್ತು.

ಆಸ್ತಿಗಳ ಮೇಲೂ ಸಾಕಷ್ಟು ಹೂಡಿಕೆ ಮಾಡಿರುವ ಕೊಹ್ಲಿ ಮುಂಬೈನಲ್ಲಿ 34 ಕೋಟಿ ರೂ. ಬೆಲೆ ಬಾಳುವ ಹಾಗೂ ಗುರುಗ್ರಾಮದಲ್ಲಿ 80 ಕೋಟಿ ರೂ. ಮೌಲ್ಯದ ಮನೆಯನ್ನ ಹೊಂದಿದ್ದಾರೆ. 31 ಕೋಟಿ ರೂ. ಮೌಲ್ಯದ ಲಕ್ಷುರಿ ಕಾರನ್ನೂ ಹೊಂದಿದ್ದಾರೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್