ಧೋನಿಗೆ ತನ್ನ ಕೈಯಾರೆ ಮೈದಾನದಲ್ಲೇ ನೀರು ಕುಡಿಸಿದ ಪುತ್ರಿ ಝೀವಾ – ವಿಡಿಯೋ ವೈರಲ್

Public TV
1 Min Read

ಮುಂಬೈ: ಇತ್ತೀಚೆಗಷ್ಟೇ ಟೀಂ ಇಂಡಿಯಾ ನಾಯಕ ಕೊಹ್ಲಿ ಜೊತೆ ಮುದ್ದು ಮುದ್ದಾಗಿ ಆಟವಾಡಿ ಸುದ್ದಿಯಾದ ಮಹೇಂದ್ರ ಸಿಂಗ್ ಧೋನಿ ಮಗಳು ಇದೀಗ ಮತ್ತೆ ಸುದ್ದಿಯಾಗಿದ್ದಾಳೆ.

ಹೌದು. ಅಂಧೇರಿಯ ಫುಟ್ಬಾಲ್ ಮೈದಾನದಲ್ಲಿ ಭಾನುವಾರ ಸೆಲೆಬ್ರಿಟಿ ಲೀಗ್ ಫುಟ್ಬಾಲ್ ನಡೆದಿತ್ತು. ಈ ವೇಳೆ ಧೋನಿ ಮಗಳು ತನ್ನ ಅಪ್ಪನಿಗೆ ಮೈದಾನದಲ್ಲೇ ನೀರು ಕುಡಿಸಿದ್ದಾಳೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ಧೋನಿ ಮಗಳೊಂದಿಗೆ ಕೊಹ್ಲಿಯ ಮುದ್ದು ಮುದ್ದು ಮಾತು-ವಿಡಿಯೋ ನೋಡಿ 

ಆಟವನ್ನು ವೀಕ್ಷಿಸಲೆಂದು ಅಂತಿಮ ಸುತ್ತಿನ ವೇಳೆ ಧೋನಿ ಪತ್ನಿ ಸಾಕ್ಷಿ ಹಾಗೂ ಮಗಳು ಝೀವಾ ಮೈದಾನಕ್ಕೆ ಬಂದಿದ್ದರು. ಆಟಗಾರರೆಲ್ಲ ಮೈದಾನದಲ್ಲಿ ನೆರೆದಿದ್ದ ಸಂದರ್ಭದಲ್ಲಿ ಧೋನಿ ಮಗಳು ಝೀವಾ ನೇರವಾಗಿ ಮೈದಾನಕ್ಕೆ ಇಳಿದು ತನ್ನ ಅಪ್ಪನಿಗೆ ಬಾಟಲಿಯಲ್ಲಿದ್ದ ನೀರನ್ನು ಕುಡಿಸಿದ್ದಾಳೆ. ಅಲ್ಲದೇ ಖುಷಿ ಖುಷಿಯಿಂದ ಮೈದಾನದಲ್ಲಿ ಓಡಾಡಿದ್ದಾಳೆ. ಈ ವೇಳೆ ಉಳಿದ ಆಟಗಾರರು ಕೂಡ ಆಕೆಗೆ ಸಾಥ್ ನೀಡಿದ್ದಾರೆ.

https://twitter.com/iamKohli_FC/status/919764643807154177

https://twitter.com/ViratKohIiFC/status/919713934919155712

https://twitter.com/Ranbir_Kingdom/status/919613509964574720

Share This Article
Leave a Comment

Leave a Reply

Your email address will not be published. Required fields are marked *