CSK ಗೆ ಶಾಕ್‌ – ಮೊದಲ 6 ಪಂದ್ಯಗಳಿಗೆ ಧೋನಿ ಅಲಭ್ಯ; ಇದೇ ಆವೃತ್ತಿಯಲ್ಲಿ ಗುಡ್‌ಬೈ ಹೇಳ್ತಾರಾ?

2 Min Read

– ಸಂಜು ಸ್ಯಾಮ್ಸನ್‌ ಮೇಲೆ ಬೆಟ್ಟದಷ್ಟು ನಿರೀಕ್ಷೆ

ಚೆನ್ನೈ: 2026ರ ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು ತನ್ನ ಅಭಿಯಾನ ಆರಂಭಿಸುವ ಮುನ್ನವೇ ಫ್ಯಾನ್ಸ್‌ಗೆ ಶಾಕ್‌ ಕೊಟ್ಟಿದೆ. ಲೆಜೆಂಡ್‌ ಕ್ರಿಕೆಟಿಗ, ಚೆನ್ನೈ ತಂಡದ ಉಸಿರು ಎಂ.ಎಸ್‌ ಧೋನಿ (MS Dhoni) ಅವರು ಮೊದಲ 6 ಪಂದ್ಯಗಳಿಂದ ಹೊರಗುಳಿಯುವ ಸಾಧ್ಯತೆಗಳಿವೆ ಎಂದು ಖುದ್ದು ಚೆನ್ನೈ ಸೂಪರ್‌ ಕಿಂಗ್ಸ್‌ (Chennai Super Kings) ಮಾಹಿತಿ ನೀಡಿದೆ.

19ನೇ ಆವೃತ್ತಿಯ ಐಪಿಎಲ್‌ಗಾಗಿ ಸತತ 1 ತಿಂಗಳು ಕಠಿಣ ತರಬೇತಿ ಪಡೆದ ಬಳಿಕ ಸ್ನಾಯು ಸೆಳೆತದಿಂದ ಬಳಲುತ್ತಿದ್ದಾರೆ. ಹೀಗಾಗಿ ಮಹಿ ಮೊದಲ 6 ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಏಪ್ರಿಲ್‌ ತಿಂಗಳ ಕೊನೆಯ ವಾರದಲ್ಲಿ ಸಿಎಸ್‌ಕೆ ತಂಡವನ್ನು ಸೇರಿಕೊಳ್ಳುವ ನಿರೀಕ್ಷೆಯಿದೆ ಎಂದು ಫ್ರಾಂಚೈಸಿ ತಿಳಿಸಿದೆ. ಇದನ್ನೂ ಓದಿ: ಬೌಂಡರಿ ಗೆರೆಯ ಬಳಿ ಪಲ್ಟಿಯಾಗಿ ಸಾಲ್ಟ್‌ ಕ್ಯಾಚ್‌ – ಸಿಟ್ಟಿನಿಂದ ಹೊರನಡೆದ ಕ್ಲಾಸೆನ್

ಈಗಾಗಲೇ ಎಲ್ಲಾ ಮಾದರಿ ಕ್ರಿಕೆಟ್‌ನಿಂದಲೂ (Cricket) ನಿವೃತ್ತರಾಗಿರುವ ಎಂ.ಎಸ್‌ ಧೋನಿ, ಐಪಿಎಲ್‌ನಲ್ಲಿ ಮಾತ್ರ ಆಡುತ್ತಿದ್ದಾರೆ. ಸದ್ಯ ಸ್ನಾಯು ಸೆಳೆತದಿಂದ ಬಳಲುತ್ತಿರುವ ಎಂಎಸ್‌ಡಿ ಇದೇ ಆವೃತ್ತಿಯಲ್ಲಿ ನಿವೃತ್ತಿ ಘೋಷಿಸುವ ಸಾಧ್ಯತೆಗಳಿವೆ ಅನ್ನೋ ಮಾತುಗಳು ಕೇಳಿಬರುತ್ತಿವೆ.

ಕಳೆದ ಕೆಲವು ಋತುಗಳಲ್ಲಿ, ಧೋನಿ ಫಿಟ್‌ನೆಸ್ ಸಮಸ್ಯೆ ಎದುರಿಸುತ್ತಾ ಬಂದಿದ್ದಾರೆ. ಫಾರ್ಮ್‌ನಲ್ಲಿದ್ದಂತೆ ಕಂಡುಬಂದರೂ ಅತ್ಯಂತ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡಿದ್ದಾರೆ. ಕಳೆದ ಆವೃತ್ತಿಯಿಂದ ಎಂ.ಎಸ್‌ಡಿ ಅನ್‌ಕ್ಯಾಪ್ಡ್‌ ಪ್ಲೇಯರ್‌ ಆಗಿ ಸಿಎಸ್‌ಕೆ ಪರ ಕಣಕ್ಕಿಳಿಯುತ್ತಾ ಬಂದಿದ್ದಾರೆ. ಇದೀಗ ಸಮಸ್ಯೆ ಹೆಚ್ಚಾದಲ್ಲಿ‌ ಇದೇ ಆವೃತ್ತಿ ಧೋನಿ ಪಾಲಿಕೆ ಕೊನೆಯ ಟೂರ್ನಿಯಾಗಲಿದೆ ಎನ್ನಲಾಗ್ತಿದೆ. ಆ ಬಳಿಕ ಕೋಚ್‌ ಆಗಿ ಚೆನ್ನೈ ತಂಡವನ್ನು ಸೇರಿಕೊಳ್ಳುವ ಸಾಧ್ಯತೆಯಿದೆ. ಇದನ್ನೂ ಓದಿ:  ನಾನು ಎಲ್ಲಿ ಎಂದಿದ್ದಕ್ಕೆ ಡಿಕೆಯಿಂದ ಬೆಂಕಿ ಪೋಸ್ಟ್‌ – ಸಾಲ್ಟ್‌ಗೆ ವಿಶೇಷ ಗೌರವ

ಸಂಜು ಮೇಲೆ ಬೆಟ್ಟದಷ್ಟು ನಿರೀಕ್ಷೆ
ಸದ್ಯ ರುತುರಾಜ್‌ ಸಿಎಸ್‌ಕೆ ತಂಡವನ್ನ ಮುನ್ನಡೆಸುತ್ತಿದ್ದು, ರಾಜಸ್ಥಾನ್‌ ರಾಯಲ್ಸ್‌ ತಂಡದಿಂದ ವಿನಿಮಯ ಮಾಡಿಕೊಳ್ಳಲಾದ ಸಂಜು ಸ್ಯಾಮ್ಸನ್‌ ಮೇಲೆ ಬೆಟ್ಟದಷ್ಟು ನಿರೀಕ್ಷೆ ಹೊಂದಿದೆ. ಎಂ.ಎಸ್‌ ಧೋನಿ ಅವರ ಅನುಪಸ್ಥಿತಿಯಲ್ಲಿ ವಿಕೆಟ್‌ ಕೀಪರ್‌ ಬ್ಯಾಟರ್‌ ಆಗಿ ಸಂಜು ಕಣಕ್ಕಿಳಿಯಲಿದ್ದಾರೆ.

Share This Article