ನಿವೃತ್ತಿಯ ಬಗ್ಗೆ ಮತ್ತೊಮ್ಮೆ ಬಿಗ್‌ ಹಿಂಟ್‌ ಕೊಟ್ಟ ಮಹಿ

Public TV
1 Min Read

ಚೆನ್ನೈ: ಸಿಎಸ್‌ಕೆ (CSK) ತಂಡದ ನಾಯಕ ಎಂ.ಎಸ್‌ ಧೋನಿ (MS Dhoni) ಭಾನುವಾರ‌ ನಡೆದ ಪಂದ್ಯದ ಬಳಿಕ ತಮ್ಮ ನಿವೃತ್ತಿಯ ಬಗ್ಗೆ ದೊಡ್ಡ ಹಿಂಟ್‌ ಕೊಟ್ಟಿದ್ದಾರೆ. ಈಗಾಗಲೇ ಎಲ್ಲಾ ಮಾದರಿಯ ಕ್ರಿಕೆಟ್‌ಗೂ ಗುಡ್‌ಬೈ ಹೇಳಿರುವ ಮಹಿ ಪಾಲಿಗೆ ಈ ಬಾರಿಯ ಐಪಿಎಲ್‌ (IPL 2023) ಕೊನೆಯ ಟೂರ್ನಿಯಾಗಿದೆ.

ಭಾನುವಾರ ಕೋಲ್ಕತ್ತಾ ನೈಟ್‌ರೈಡರ್ಸ್‌ ವಿರುದ್ಧ ನಡೆದ ಪಂದ್ಯದ ಬಳಿಕ ಚೆಪಾಕ್‌ನ ತವರು ಮೈದಾನದಲ್ಲಿ ನಡೆದ ಕೊನೆಯ ಪಂದ್ಯದ ಬಳಿಕ ವಿಶೇಷ ಲ್ಯಾಪ್ ಆಫ್ ಗೌರವ ಸಲ್ಲಿಸಲಾಯಿತು. ಚೆನ್ನೈ ತಂಡಕ್ಕಾಗಿ ಅನೇಕ ವರ್ಷಗಳಿಂದ ತನಗೆ ಮತ್ತು ತಂಡಕ್ಕೆ ನೀಡಿದ ಬೆಂಬಲಕ್ಕಾಗಿ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದರು. ಇದನ್ನೂ ಓದಿ: ರಿಂಕು, ರಾಣಾ ಬ್ಯಾಟಿಂಗ್‌ ಕಮಾಲ್‌ – ಕೋಲ್ಕತ್ತಾಗೆ 6 ವಿಕೆಟ್‌ಗಳ ಭರ್ಜರಿ ಜಯ

ಕೋಲ್ಕತ್ತಾ ನೈಟ್‌ರೈಡರ್ಸ್‌ ವಿರುದ್ಧ ಚೆನ್ನೈ ಸೋತರೂ ಮೈದಾನದ ಸುತ್ತಲೂ ಹೋಗುವಾಗ ನಗುಮುಖದಿಂದಲೇ ಲ್ಯಾಕ್‌ಆಫ್‌ ಮಾಡಿದರು. ಇದೇ ವೇಳೆ ಅಭಿಮಾನಿಗಳಿಗೆ ಚೆಂಡು ಹಾಗೂ ಚೆನ್ನೈ ಜೆರ್ಸಿಯನ್ನು ಗಿಫ್ಟ್‌ ಮಾಡಿ, ತವರು ಮೈದಾನದಿಂದ ಹೊರನಡೆದರು. ಚೆನ್ನೈ ಸೂಪರ್‌ ಕಿಂಗ್ಸ್‌ ಪ್ಲೆ ಆಫ್‌ ಪ್ರವೇಶಿಸಿದರೆ, ಮತ್ತೊಮ್ಮೆ ತವರಿಗೆ ಮರಳು ಸಾಧ್ಯತೆಗಳಿವೆ. ಇದನ್ನೂ ಓದಿ: 59 ರನ್‌ಗಳಿಗೆ ರಾಜಸ್ಥಾನ್‌ ಆಲೌಟ್‌ – RCBಗೆ 112 ರನ್‌ಗಳ ಭರ್ಜರಿ ಜಯ – ಪ್ಲೆ ಆಫ್‌ ಕನಸು ಜೀವಂತ

ಚೆನ್ನೈ 13 ರಲ್ಲಿ 7 ಪಂದ್ಯಗಳಲ್ಲಿ ಗೆಲುವು ಸಾಧಿಸಿ +0.381 ರನ್‌ರೇಟ್‌ನೊಂದಿಗೆ 15 ಅಂಕ ಪಡೆದು 2ನೇ ಸ್ಥಾನದಲ್ಲಿದೆ. 3 ಮತ್ತು 4ನೇ ಸ್ಥಾನದಲ್ಲಿ ಮುಂಬೈ ಹಾಗೂ ಲಕ್ನೋ ಸೂಪರ್‌ ಜೈಂಟ್ಸ್‌ ತಂಡಗಳು ಕ್ರಮವಾಗಿ ಸ್ಥಾನ ಪಡೆದಿವೆ. ನಂತರದ ಸ್ಥಾನಗಳಲ್ಲಿ ಆರ್‌ಸಿಬಿ, ರಾಜಸ್ಥಾನ್‌ ರಾಯಲ್ಸ್‌, ಕೆಕೆಆರ್‌ ಹಾಗೂ ಪಂಜಾಬ್‌ ಕಿಂಗ್ಸ್‌ ತಂಡಗಳೂ ಸಹ ಪ್ಲೆ ಆಫ್‌ ಹಾದಿಯಲ್ಲಿ ಪೈಪೋಟಿಗೆ ಬಿದ್ದಿವೆ.

ಭಾನುವಾರ ನಡೆದ ಪಂದ್ಯದಲ್ಲಿ ಸಿಎಸ್‌ಕೆ 6 ವಿಕೆಟ್‌ ನಷ್ಟಕ್ಕೆ 144 ರನ್‌ ಗಳಿಸಿತ್ತು. 145 ರನ್‌ ಅಲ್ಪ ಮೊತ್ತದ ಗುರಿ ಪಡೆದ ಕೋಲ್ಕತ್ತಾ ನೈಟ್‌ರೈಡರ್ಸ್‌ 18.3 ಓವರ್‌ಗಳಲ್ಲೇ 4 ವಿಕೆಟ್‌ ನಷ್ಟಕ್ಕೆ 147 ರನ್‌ ಗಳಿಸಿ ಗೆಲುವು ಸಾಧಿಸಿತು.

Share This Article