ಪೂಜಾ ಹೆಗ್ಡೆ, ಶ್ರೀಲೀಲಾ, ಕೃತಿ ಶೆಟ್ಟಿಗೆ ಠಕ್ಕರ್ ಕೊಟ್ಟ ಮೃಣಾಲ್‌ಗೆ ಭಾರೀ ಬೇಡಿಕೆ

Public TV
1 Min Read

ಬಾಲಿವುಡ್ ಬೆಡಗಿ ಮೃಣಾಲ್ ಠಾಕೂರ್‌ಗೆ (Mrunal Thakur) ಸದ್ಯ ಸೌತ್‌ನಲ್ಲಿ ಬೇಡಿಕೆ ಹೆಚ್ಚಾಗಿದೆ. ಬ್ಯಾಕ್ ಟು ಬ್ಯಾಕ್ ಹಿಟ್ ಕೊಟ್ಟಿರುವ ಸೀತಾರಾಮಂ ಸುಂದರಿ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ರೇಸ್‌ನಲ್ಲಿದ್ದ ಪೂಜಾ ಹೆಗ್ಡೆ, ಶ್ರೀಲೀಲಾ, ಕೃತಿ ಶೆಟ್ಟಿಗೆ ಠಕ್ಕರ್ ಕೊಟ್ಟು ಮೃಣಾಲ್ ಗೆದ್ದು ಬೀಗಿದ್ದಾರೆ.

ಟಾಲಿವುಡ್‌ನಲ್ಲಿ ಬೇಡಿಕೆಯಲ್ಲಿದ್ದ ಪೂಜಾ ಹೆಗ್ಡೆ (Pooja Hegde), ಶ್ರೀಲೀಲಾ(Sreeleela), ಕೃತಿ ಶೆಟ್ಟಿಗೆ (Krithi Shetty) ಸೆಡ್ಡು ಹೊಡೆದು ಮೃಣಾಲ್ ಠಾಕೂರ್ ಭಾರೀ ಅವಕಾಶಗಳನ್ನು ಬಾಚಿಕೊಳ್ತಿದ್ದಾರೆ. ತೆಲುಗು ಭಾಷೆ ಬರಲ್ಲ. ಸಿನಿಮಾ ಮಾಡಲ್ಲ ಅಂತಿದ್ದ ಮುಂಬೈ ಬೆಡಗಿ ಮೃಣಾಲ್ ಕಥೆ ಆಯ್ಕೆಯಲ್ಲಿಯೇ ಗೆದ್ದಿದ್ದಾರೆ.

‘ಸೀತಾರಾಮಂ’, ಹಾಯ್ ನಾನಾ, ಫ್ಯಾಮಿಲಿ ಸ್ಟಾರ್ ಮೂರು ಚಿತ್ರಗಳು ಕಥೆ ವಿಚಾರದಲ್ಲಿ ಗೆದ್ದಿದೆ. ಮೃಣಾಲ್ ನಟನೆ ಮತ್ತು ಪಾತ್ರ ಜನರಿಗೆ ಮನಮುಟ್ಟಿದೆ. ಬ್ಯಾಕ್ ಟು ಬ್ಯಾಕ್ 3 ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಗೆದ್ದಿರುವ ಕಾರಣ ಹಿಂದಿ ಮತ್ತು ತೆಲುಗಿನಲ್ಲಿ ಬೇಡಿಕೆ ಹೆಚ್ಚಾಗಿದೆ. ಪ್ರತಿಷ್ಠಿತ ಸಂಸ್ಥೆಗಳಿಂದ ಸಿನಿಮಾ ಅವಕಾಶಗಳು ಅರಸಿ ಬರುತ್ತಿವೆ.

ಬೇಡಿಕೆ ಹೆಚ್ಚಾಗುತ್ತಿದ್ದಂತೆ ಎರಡೂವರೆಯಿಂದ 3 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದ ನಟಿ ಈಗ 5 ಕೋಟಿ ರೂ.ಗೆ ಹೆಚ್ಚಿಸಿಕೊಂಡಿದ್ದಾರೆ. ಇದನ್ನೂ ಓದಿ:ಗುರುವಾರ ಶ್ರೀರಂಗಪಟ್ಟಣದಲ್ಲಿ ದ್ವಾರಕೀಶ್ ಅಸ್ಥಿ ವಿಸರ್ಜನೆ

‘ಪೂಜಾ ಮೇರಿ ಜಾನ್’ ಸೇರಿದಂತೆ ಹಲವು ಸಿನಿಮಾಗಳು ಮೃಣಾಲ್ ಕೈಯಲ್ಲಿವೆ. ಸಂಜಯ್ ಲೀಲಾ ಬನ್ಸಾಲಿ ಸಿನಿಮಾಗೂ ನಟಿ ಸೆಲೆಕ್ಟ್ ಆಗಿದ್ದಾರೆ ಎನ್ನಲಾಗಿದೆ. ತೆಲುಗಿನ ಸ್ಟಾರ್ ನಟರಿಗೆ ನಾಯಕಿಯಾಗಲು ನಟಿಗೆ ಬುಲಾವ್ ಬಂದಿದೆ. ಕಥೆಗೆ ಹೆಚ್ಚಿನ ಪ್ರಾಮುಖ್ಯತೆ ಕೊಡ್ತಿದ್ದಾರೆ ನಟಿ.

Share This Article