ಮೃಣಾಲ್‌ಗೆ ಬೇಡಿಕೆ- ತಮಿಳಿನತ್ತ ‘ಸೀತಾರಾಮಂ’ ನಟಿ

Public TV
1 Min Read

ಮುಂಬೈ ಬೆಡಗಿ ಮೃಣಾಲ್ ಠಾಕೂರ್ (Mrunal Thakur) ಬಾಲಿವುಡ್‌ಗಿಂತ ಸೌತ್‌ನಲ್ಲೇ ನಟಿಗೆ ಹೆಚ್ಚಿನ ಬೇಡಿಕೆ ಇದೆ. ಮೃಣಾಲ್ ತೆಲುಗಿನಲ್ಲಿ ನಟಿಸಿದ ಸಿನಿಮಾಗಳು ಹಿಟ್ ಆಗಿವೆ. ಅಪಾರ ಅಭಿಮಾನಿಗಳ ಬಳಗ ಹೊಂದಿರುವ ನಟಿಗೆ ಕಾಲಿವುಡ್‌ನಿಂದ ಈಗ ಬಂಪರ್ ಆಫರ್ ಸಿಕ್ಕಿದೆ. ತಮಿಳಿನ ಸ್ಟಾರ್ ನಟನ ಜೊತೆ ತೆರೆಹಂಚಿಕೊಳ್ಳುವ ಅವಕಾಶ ದಕ್ಕಿದೆ. ಇದನ್ನೂ ಓದಿ:ಬಾಲಿವುಡ್‌ಗೆ ನಟಿ- ಸ್ಟಾರ್ ನಟನ ಪುತ್ರನಿಗೆ ಶ್ರೀಲೀಲಾ ನಾಯಕಿ

ಸೀತಾರಾಮಂ, ಹಾಯ್ ನಾನಾ, ಫ್ಯಾಮಿಲಿ ಸ್ಟಾರ್ ಸಿನಿಮಾಗಳ ನಂತರ ಕಾಲಿವುಡ್‌ನಲ್ಲಿಯೂ ನಟಿ ಮಿಂಚಲು ಸಜ್ಜಾಗಿದ್ದಾರೆ. ತಮಿಳು ನಟ ರಾಘವ್ ಲಾರೆನ್ಸ್ ನಟನೆಯ ಹೊಸ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲು ಮೃಣಾಲ್‌ಗೆ ಚಾನ್ಸ್ ಸಿಕ್ಕಿದೆ. ‘ಕಾಂಚನಾ’ ಸಿನಿಮಾದ ಮುಂದುವರೆದ ಭಾಗದಲ್ಲಿ ‘ಸೀತಾರಾಮಂ’ (Seetharamam) ನಟಿ ಕೂಡ ಕಾಣಿಸಿಕೊಳ್ತಿದ್ದಾರೆ.

‘ಕಾಂಚನಾ-4’ (Kanchana 4) ಸಿನಿಮಾ ಮಾಡಲು ತೆರೆಮರೆಯಲ್ಲಿ ತಯಾರಿ ನಡೆಯುತ್ತಿದೆ. ಹಾರರ್ ಕಥೆಗೆ ಸ್ಕ್ರಿಪ್ಟ್ ಕೂಡ ಸಿದ್ಧವಾಗಿದೆ. ಈಗಾಗಲೇ ಚಿತ್ರತಂಡ ಮೃಣಾಲ್‌ರನ್ನು ಭೇಟಿಯಾಗಿ ಚಿತ್ರದ ಕಥೆ ಹೇಳಿದ್ದು, ನಟಿ ಕೂಡ ಓಕೆ ಎಂದಿದ್ದಾರೆ. ಈ ವರ್ಷದ ಅಂತ್ಯದಲ್ಲಿ ಶೂಟಿಂಗ್ ಶುರುವಾಗಲಿದೆ. ಈ ಕುರಿತು ಚಿತ್ರತಂಡದಿಂದ ಅಧಿಕೃತ ಘೋಷಣೆ ಆಗಬೇಕಿದೆ.

ಮೊದಲ ತಮಿಳು ಸಿನಿಮಾದಲ್ಲಿ ರಾಘವ್ ಲಾರೆನ್ಸ್‌ಗೆ (Raghava Lawrence) ಮೃಣಾಲ್ ನಾಯಕಿಯಾಗಿ ನಟಿಸುತ್ತಿರೋದು ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ. ಸಿನಿಮಾಗಾಗಿ ಅಭಿಮಾನಿಗಳು ಎದುರು ನೋಡ್ತಿದ್ದಾರೆ.

Share This Article