ಬಾಡಿ ಶೇಮಿಂಗ್ ಬಗ್ಗೆ ಮೌನ ಮುರಿದ ಮೃಣಾಲ್ ಠಾಕೂರ್

Public TV
1 Min Read

ಬಾಲಿವುಡ್ (Bollywood) ನಟಿ ಮೃಣಾಲ್ ಠಾಕೂರ್ (Mrunal Thakur) ಸದ್ಯ ಹಿಂದಿ ಮತ್ತು ಸೌತ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ನಟಿ ಬಾಡಿ ಶೇಮಿಂಗ್ ಬಗ್ಗೆ ಮಾತನಾಡಿದ್ದಾರೆ. ಅನೇಕ ಸಿನಿಮಾಗಳ ಅವಕಾಶ ಕೈತಪ್ಪಿ ಹೋಗಿದ್ದರ ಬಗ್ಗೆ ಮೌನ ಮುರಿದಿದ್ದಾರೆ.

ಕೆರಿಯರ್ ಶುರುವಿನಲ್ಲಿ ಆಡಿಷನ್ ಕೊಡುವಾಗ ಹಳ್ಳಿ ಹುಡುಗಿಯಂತೆ ಕಾಣ್ತಾಳೆ, ನಮ್ಮ ಸಿನಿಮಾಗೆ ಸೂಟ್ ಆಗಲ್ಲ. ಸಿನಿಮಾದಲ್ಲಿ ಮಾಡ್ರರ್ನ್ ಆಗಿ ಕಾಣಿಸಿಕೊಳ್ಳಬೇಕು ಎಂದು ಕಾರಣ ನೀಡಿ ಸೆಲೆಕ್ಟ್ ಮಾಡಲಿಲ್ಲ ಎಂದು ನಟಿ ಮಾತನಾಡಿದ್ದಾರೆ. ಅಂದು ಎದುರಿಸಿದ ಬಾಡಿ ಶೇಮಿಂಗ್‌ ಬಗ್ಗೆ ನಟಿ ಹೇಳಿದ್ದಾರೆ.

ಚಿತ್ರರಂಗದಲ್ಲಿ ಮೃಣಾಲ್‌ಗೆ ಉತ್ತಮ ಕಾಲ ಶುರುವಾಗಿದೆ. ಸೌತ್ ಸಿನಿಮಾಗಳಿಂದ ಉತ್ತಮ ಅವಕಾಶ ಸಿಗುತ್ತಿದೆ. ಬಾಲಿವುಡ್‌ನಲ್ಲಿಯೂ ನಟಿಗೆ ಕರೆ ಬರುತ್ತಿದೆ. ಇದನ್ನೂ ಓದಿ:ತಮಿಳಿನ ರಿಮೇಕ್ ಸಿನಿಮಾದಲ್ಲಿ ಪೂಜಾ ಹೆಗ್ಡೆ

ಹೃತಿಕ್ ರೋಷನ್ ನಟನೆಯ ‘ಸೂಪರ್ 30’ ಚಿತ್ರದಲ್ಲಿ ಮೃಣಾಲ್ ನಟಿಸಿದ್ದರು. ಬಳಿಕ ಸೀತಾರಾಮಂ, ಹಾಯ್ ನಾನಾ, ಫ್ಯಾಮಿಲಿ ಸ್ಟಾರ್ ಸಕ್ಸಸ್ ಕಂಡ ಮೇಲೆ ಮೃಣಾಲ್ ಅದೃಷ್ಟ ಬದಲಾಗಿದೆ.

Share This Article